ಶಿಕಾರಿಪುರ : ಪಟ್ಟಣದ ಕಿರಣ್ ಟಾಕೀಸ್ ಬಳಿ ಇರುವ ಅಂಬೇಡ್ಕರ್ ಪ್ರತಿಮೆಯಿಂದ ಆರಂಭಗೊಂಡ ಪ್ರತಿಭಟನಾಗಾರರ ಮೆರವಣಿಗೆಯೂ ಅಂಬೇಡ್ಕರ್ ವೃತ್ತದ ಬಳಿ ಬಸ್ ನಿಲ್ದಾಣದ ಬಳಿ ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರ ಭಾವಚಿತ್ರಕ್ಕೆ ಬೆಂಕಿ ಹಚ್ಚುವುದಲ್ಲದೇ, ಇತ್ತೀಚೆಗೆ ಬಿ ಎಸ್ ಯಡಿಯೂರಪ್ಪರವರ ಹುಟ್ಟುಹಬ್ಬಕ್ಕೆ ನೀಡಿದ ಅನೇಕ ಸೀರೆಗಳನ್ನು ಬೆಂಕಿಯಲ್ಲಿ ಹಾಕುವುದರ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲಲ್ಲಿ ಬೆಂಕಿ ಹಚ್ಚುವ ಮೂಲಕ ಸಾಗಿದ ಮೆರವಣಿಗೆ ಪಟ್ಟಣದ ಮಾಳೇರಕೇರಿಯಲ್ಲಿರುವ ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಲಾಠಿಚಾರ್ಜ್ ನಡೆಸಿದರು ಇದಕ್ಕೆ ಜಗ್ಗದ ಪ್ರತಿಭಟನಾಗಾರರು ಕಲ್ಲು ಮತ್ತು ಚಪ್ಪಲಿ ತೂರಾಟ ನಡೆಸಿದರು ಇದಕ್ಕೆ ಪೊಲೀಸ್ ಸಿಬ್ಬಂದಿಗಳು ಮೌನಕ್ಕೆ ಶರಣಾದರು. ನಂತರ ಪ್ರತಿಭಟನಾ ಮೆರವಣಿಗೆ ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರ ಬಿಜೆಪಿ ಪಕ್ಷದ ಕಛೇರಿಗೆ ನುಗ್ಗಿ ಕಛೇರಿಯ ಮೇಲಿರುವ ಬಿಜೆಪಿ ಪಕ್ಷದ ಬಾವುಟ ತೆಗೆದು ಬಂಜಾರಾ ಸಮಾಜದ ಬಾವುಟ ಪ್ರದರ್ಶಿಸಿದರು.