Karnataka Assembly Election 2023 | ಗಡಿ ಭಾಗಗಳಲ್ಲಿ 4 ಚೆಕ್ ಪೋಸ್ಟ್ ತೆರೆಯಲಾಗಿದೆ ; ಶಿಕಾರಿಪುರ ತಾಲೂಕು ಚುನಾವಣಾಧಿಕಾರಿ ನಾಗೇಶ್ ಎ ರಾಯ್ಕರ್

0 30

ಶಿಕಾರಿಪುರ : ಈಗಾಗಲೇ ರಾಜ್ಯ ಚುನಾವಣಾ ಆಯೋಗದ ಅಧಿಕಾರಿಗಳು ಘೋಷಿಸಿರುವಂತೆ ಮೇ 10 ರಂದು ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಇದಕ್ಕೆ ಪೂರಕವಾಗಿ ಸುಲಲಿತ ಮತ್ತು ಪಾರದರ್ಶಕ ಚುನಾವಣೆಗಾಗಿ  ತಾಲ್ಲೂಕಿನಲ್ಲಿ ಅಂತರ್ ಜಿಲ್ಲಾ ಗಡಿಭಾಗಗಳಲ್ಲಿ ನಾಲ್ಕು ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ತಾಲ್ಲೂಕು ಚುನಾವಣಾಧಿಕಾರಿ ನಾಗೇಶ್ ಎ ರಾಯ್ಕರ್ ತಿಳಿಸಿದರು.

ಶುಕ್ರವಾರ ತಾಲ್ಲೂಕು ಕಛೇರಿಯ ಚುನಾವಣಾ ಕಛೆರಿಯಲ್ಲಿ  ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಏಪ್ರಿಲ್ 13 ರಿಂದ  ಉಮೇದುವಾರಿಕೆ ಅರ್ಜಿಗಳನ್ನು ಪಡೆಯಲಾಗುವುದು, ಏ. 20 ಉಮೇದುವಾರಕ್ಕೆ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿರುತ್ತದೆ. ಏ. 21 ರಂದು ಉಮೇದುವಾರಿಕೆ ಅರ್ಜಿಗಳ ಪರಿಶೀಲನೆ ನಡೆಯಲಿದ್ದು, ವಾಪಾಸು ಪಡೆಯಲು ಏ. 24 ಕೊನೆ ದಿನವಾಗಿರುತ್ತದೆ‌. ಮೇ 10 ರಂದು ಮತದಾನ ನಡೆಯಲಿದ್ದು ಮೇ 13 ರಂದು ಮತಗಳ ಎಣಿಕೆ ನಡೆಯಲಿದೆ.

ತಾಲ್ಲೂಕಿನಲ್ಲಿ ಒಟ್ಟು 195371 ಮತದಾರರಿದ್ದು, ಈ ಪೈಕಿ 98,181 ಪುರುಷರು, 97086 ಮಹಿಳೆಯರು ಹಾಗೂ 4 ಜನ ಇತರ ಮತದಾರರು ಹಾಗೂ 75 ಸೇವಾ ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ 232 ಸಾಮಾನ್ಯ ಮತಗಟ್ಟೆ, 4 ಹೆಚ್ಚುವರಿ ಮತಗಟ್ಟೆ ಸೇರಿ ಒಟ್ಟು 236 ಮತದಾನದ ಕೇಂದ್ರಗಳಿದ್ದು, ರಾಜ್ಯ ಚುನಾವಣೆ ನಿರ್ದೇಶನಂತೆ ಸುಲಲಿತ ಚುನಾವಣಾ ನಿರ್ವಹಣೆಗಾಗಿ ಮೂರು ಎಂಸಿಸಿ ತಂಡಗಳನ್ನು ಒಬ್ಬ  ಸಹಾಯಕ ವೀಕ್ಷಕರು ಹಾಗೂ 15 ಸಂಚಾರಿ ಸ್ಕ್ವಾಡ್  ತಂಡವನ್ನು 12 ಸ್ಥಿರ ಕಣ್ಗಾವಲು ತಂಡಗಳನ್ನು ಏಳು ವಿಡಿಯೋ ತಂಡಗಳನ್ನು ಹಾಗೂ ಒಂದು ವಿಡಿಯೋ ಮಾನಿಟರ್ ಕೇಂದ್ರವನ್ನು ತೆರೆಯಲಾಗಿದೆ ಎಂದರು.

ಗೋಷ್ಠಿಯಲ್ಲಿ ಸಹಾಯಕ ಚುನಾವಣಾಧಿಕಾರಿ ಹಾಗೂ ನೂತನ ತಹಶೀಲ್ದಾರ್ ಶಂಕ್ರಪ್ಪ ಜಿ ಎಸ್, ಹಂಗಾಮಿ ತಹಶೀಲ್ದಾರ್ ವಿಶ್ವನಾಥ ಮರಡಿ, ಚುನಾವಣಾ ಶಾಖೆ ಶಿರಸ್ತೇದಾರ್ ಸುಧೀರ್ ಹೆಚ್ ಎಸ್ ಇದ್ದರು.

Leave A Reply

Your email address will not be published.

error: Content is protected !!