Shikaripura | Araga Jnanendra | B S Yediyurappa | ಬಿಎಸ್‌ವೈ ಮನೆ ಮೇಲೆ ಕಲ್ಲು ತೂರಾಟದ ಹಿಂದೆ ರಾಜಕೀಯ ಕೈವಾಡ ಇದೆ ; ಗೃಹ ಸಚಿವ ಆರಗ ಜ್ಞಾನೇಂದ್ರ

ಶಿಕಾರಿಪುರ : ಸೋಮವಾರದಂದು ಪಟ್ಟಣದ ಬಿಎಸ್‌ವೈ ರವರ ಮನೆ ಮೇಲೆ ಕಲ್ಲು ತೂರಾಟದಂತಹ ಘಟನೆ ಅತ್ಯಂತ ದುರದೃಷ್ಟಕರ ಎಂದು ಗೃಹ ಮಂತ್ರಿ ಆರಗ ಜ್ಞಾನೇಂದ್ರ ತಿಳಿಸಿದರು. 

ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಂಸದ ಬಿ. ವೈ ರಾಘವೇಂದ್ರ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಹಾಗೂ ಇತರೆ ಪೊಲೀಸ್ ಸಿಬ್ಬಂದಿಗಳೊಂದಿಗೆ ಘಟನೆಯ ಬಗ್ಗೆ ವಿವರ ತಿಳಿದುಕೊಂಡು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಬಣಜಾರ್ ಸಮುದಾಯದ ಬಗ್ಗೆ ವಿಶೇಷವಾದ ಪ್ರೀತಿಯನ್ನು ಇಟ್ಟುಕೊಂಡವರು, ಈ ಸಮಾಜದ ಶ್ರದ್ಧಾ ಕೇಂದ್ರವಾಗಿರುವ ಸೂರಗೊಂಡನಕೊಪ್ಪದ ಅಭಿವೃದ್ಧಿ ಸೇರಿದಂತೆ ಅವರ ಸಮಾಜಕ್ಕೆ ಬೇಕಾದಂತಹ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಸಾಕಷ್ಟು ಅನುದಾನವನ್ನು ನೀಡಿದ್ದಾರೆ. ಆದರೆ ಅವರ ಮನೆಯ ಮೇಲೆ ಕೆಲವು ದುಷ್ಕರ್ಮಿಗಳು ಕಲ್ಲು ಹೊಡೆದು ಆಕ್ರೋಶ ವ್ಯಕ್ತಪಡಿಸಿದ್ದು ತುಂಬಾ ಬೇಸರದ ಸಂಗತಿ ಎಂದರು. 

ಯಡಿಯೂರಪ್ಪನವರು ಹಲ್ಲೇ ನಡೆದ ಬಗ್ಗೆ ಮತ್ತು  ದೊ೦ಬಿ ಎಬ್ಬಿಸಿದವರ ಮೇಲೆ ಕೇಸ್ ಹಾಕದಂತೆ ಹೇಳಿದ್ದಾರೆ. ಮತ್ತು ಸಮಾಜ ಬಾಂಧವರ ಜೊತೆ ಕೂತು ಮಾತನಾಡುತ್ತೇನೆ ಎಂದು ಹೇಳಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಪೊಲೀಸ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದು ಕಾನೂನು ಕೈಗೆ ತೆಗೆದುಕೊಂಡಿದ್ದು  ಕೆಟ್ಟ ಸಂಗತಿಯಾಗಿದೆ ಅಲ್ಲದೇ ನನಗೆ ನೋವು ತಂದಿದೆ.  ರಾಜ್ಯ ಸರ್ಕಾರ ಈ ಒಳ ಮೀಸಲಾತಿಯನ್ನು ಏನು ಜಾರಿಗೆ ತರಲು ಹೊರಟಿದೆ ಇದರಿಂದ ರಾಜ್ಯದ ಎಸ್ಸಿ ಎಸ್ಟಿ ಜನಾಂಗದವರಿಗೆ ಅನೇಕ ಲಾಭಗಳು ಆಗುತ್ತವೆ. ಅದನ್ನು ಸ್ವಲ್ಪ ಅಧ್ಯಯನ ಮಾಡಬೇಕು ಎಂದ ಅವರು, ಬಣಜಾರ್ ಸಮಾಜದ ವಿದ್ಯಾವಂತ ಪ್ರಜ್ಞಾವಂತರು ಕುಳಿತು  ಸಾಧಕ ಪಾದಕಗಳ ಬಗ್ಗೆ ಚರ್ಚೆ ನಡೆಸಬೇಕು ಎಂದರು.  

ಗುಪ್ತಚರ ಇಲಾಖೆಯವರು ಇದರಲ್ಲಿ ವಿಫಲರಾದರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಯಾರೊ ಅಮಾಯಕರು ಆ ಕ್ಷಣದಲ್ಲಿ ಏನೂ ಮಾಡಿದ್ದಾರೆ, ಇದರಲ್ಲಿ ರಾಜಕೀಯದವರ ಕೈವಾಡವು ಇದೆ ಎಂಬುದು ನನ್ನ ಗಮನಕ್ಕೆ ಬಂದಿದ್ದು ಸೂಕ್ತ ತನಿಖೆ ನಡೆಸಿ ಉತ್ತರಿಸಲಾಗುವುದು. ಇದರಲ್ಲಿ ಕೆಲವರು ರೌಡಿ ಶೀಟ್ ನಲ್ಲಿದ್ದು ಅಮಾಯಕರನ್ನು ಬಳಸಿಕೊಂಡು ಪ್ರಚೋದನೆ ನೀಡಿ ಈ ರೀತಿ ಘಟನೆಗೆ ಕಾರಣರಾಗಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಮಾಜಿ ಮುಖ್ಯಮಂತ್ರಿ ಮನೆಗೆ ಪೊಲೀಸರು ರಕ್ಷಣೆ ಕೊಡಲು ವಿಫಲರಾಗಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಖಂಡಿತವಿಲ್ಲ ಸಾಧ್ಯವಾದಷ್ಟು ಹಿಡಿತಕ್ಕೆ ತರಲು ಪ್ರಯತ್ನಿಸಿದ್ದಾರೆ ಆದರೆ ದಲಿತ ಸಮುದಾಯದ ಮೇಲೆ ಹೆಚ್ಚು ಪರಿಣಾಮವಾಗಬಾರದೆಂಬ ಉದ್ದೇಶದಿಂದ ತಾಳ್ಮೆ ವಹಿಸಿದ್ದಾರೆ, ಪೊಲೀಸರು ತಾವೇ ಪೆಟ್ಟು ತಿಂದು ನೋವು ಅನುಭವಿಸಿ ತಾಳ್ಮೆಯಿಂದ ಘಟನೆಯನ್ನ ನಿಭಾಯಿಸಿದ್ದಾರೆ. ಸದ್ಯದಲ್ಲೇ ಎಲ್ಲ ತನಿಖೆ ಆಗುತ್ತದೆ ಎಂದರು.

ಈ ಸಂದರ್ಭದಲ್ಲಿ ‌‌‌‌‌‌‌ಸಂಸದ ಬಿ ವೈ ರಾಘವೇಂದ್ರ, ಬಿಜೆಪಿ ಮುಖಂಡರಾದ ಚನ್ನವೀರಪ್ಪ, ಕೆ ಹಾಲಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಸೇರಿದಂತೆ ಅನೇಕರು ಇದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,790FollowersFollow
0SubscribersSubscribe
- Advertisement -spot_img

Latest Articles

error: Content is protected !!