Shikaripura | B.S Yediyurappa | ಬಿಎಸ್‌ವೈ ಮನೆ ಮೇಲೆ ಕಲ್ಲು ತೂರಾಟಕ್ಕೆ ಪೊಲೀಸ್ ವೈಫಲ್ಯವೇ ಪ್ರಮುಖ ಕಾರಣ ; ರಮೇಶ್ ನಾಯ್ಕ್ ನಳಿನಕೊಪ್ಪ

ಶಿಕಾರಿಪುರ : ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರ ಮನೆಮೇಲೆ ಕೆಲ ಕಿಡಿಗೇಡಿಗಳಿಂದ ಕಲ್ಲು ತೂರಾಟ ನಡೆಸಿರುವುದು ದೊಡ್ಡ ದುರಂತ ಹಾಗೂ ವಿಷಾದನೀಯ ಸಂಗತಿಯಾಗಿದೆ. ಇದಕ್ಕೆ ಪೊಲೀಸ್ ವೈಫಲ್ಯವೇ ಪ್ರಮುಖ ಕಾರಣವೆಂದು ಕರ್ನಾಟಕ ರಾಜ್ಯ ಬಣಜಾರ ನಿಗಮದ ನಿರ್ದೇಶಕ ರಮೇಶ್ ನಾಯ್ಕ್ ನಳಿನಕೊಪ್ಪ ದೂರಿದ್ದಾರೆ.   

ಮಂಗಳವಾರ ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸದಾಶಿವ ಆಯೋಗದ ಜಾರಿಗೆ ತರುವುದಾಗಿ ಹತ್ತಾರು ವರ್ಷಗಳಿಂದ ಅನೇಕ ರಾಜಕೀಯ ಮುಖಂಡರು ಆಶ್ವಾಸನೆಯನ್ನು ನೀಡುತ್ತಾ ಬಂದಿದ್ದರಾದರೂ, ಅನೇಕ ವರ್ಷಗಳಿಂದಲೂ ಮೀಸಲಾತಿಯ ಬಗ್ಗೆ ಹಲವು ಬಗೆಯ ಅನುಮಾನ ಗೊಂದಲಗಳು ಹುಟ್ಟುಹಾಕುತ್ತಿದ್ದವು. ಆದರೆ ಇತ್ತೀಚೆಗೆ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರು ಒಳ ಮೀಸಲಾತಿ ಜಾರಿಗೆಗಾಗಿ ಕೇಂದ್ರಕ್ಕೆ ಶಿಪಾರಸ್ಸು ಮಾಡಿದ್ದಾರೆ. ಈ ವಿಚಾರವಾಗಿ ಬಂಜಾರ ಸಮಾಜದವರೆಲ್ಲಾ ಸೇರಿ ಪ್ರತಿಭಟನೆ ನಡೆಸಿ ನಮ್ಮ ಹಕ್ಕೊತ್ತಾಯ ಮಾಡುವುದರ ಮೂಲಕ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸೋಣವೆಂದು ಶಾಂತಿಯುತವಾಗಿ ಪ್ರತಿಭಟನಾ ಮೆರವಣಿಗೆ ಮೂಲಕ ತಾಲ್ಲೂಕು ಕಛೇರಿ ಎದುರು ಬರುತ್ತಿದ್ದಂತೆ ಪೊಲೀಸ್ ಸಿಬ್ಬಂದಿಗಳು ಬ್ಯಾರಿಕೇಡ್ ಹಾಕಿ ತಡೆಯಲು ಯತ್ನಿಸಿದ್ದರಿಂದ ಹೊರ ತಾಲ್ಲೂಕಿನ ಕೆಲ ಕಿಡಿಗೇಡಿಗಳು ಪೊಲೀಸ್ ಸಿಬ್ಬಂದಿಗಳ ಮೇಲೆ ಕಲ್ಲು ತೂರಾಟ ನಡೆಸಿದರು. ಪೊಲೀಸ್ ಸಿಬ್ಬಂದಿಗಳು ತಡೆಯದಿದ್ದರೆ ಇಂತಹಾ ದುರಂತ ನಡೆಯುತ್ತಿರಲ್ಲಿಲ್ಲ ಆದ್ದರಿಂದ ಇದು ಪೊಲೀಸರ ವೈಫಲ್ಯವೆಂದು ಎದ್ದು ಕಾಣುತ್ತದೆ ಎಂದರು.

ನಮ್ಮ ಸಮಾಜಕ್ಕೆ 4.5 ಪರ್ಸೆಂಟ್ ಮೀಸಲಾತಿ ಸಾಕಾಗುವುದಿಲ್ಲ. ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಂಜಾರ ಸಮಾಜದವರಿದ್ದಾರೆ, ಹೀಗಾಗಿ ಮೀಸಲಾತಿಯನ್ನು ಹೆಚ್ಚಿಸಬೇಕು ಎಂದು ಸರ್ಕಾರಕ್ಕೆ ಮನವಿಮಾಡಲಾಗುತ್ತಿತ್ತು ಎಂದ ಅವರು, ನಿಕಟಪೂರ್ವ ಮುಖ್ಯಮಂತ್ರಿ  ಬಿ ಎಸ್ ಯಡಿಯೂರಪ್ಪರವರು ನಮ್ಮ ಸಮಾಜದ ಅಭಿವೃದ್ಧಿಗೆ ತಾಂಡಾ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದಾರೆ. ತಾಲ್ಲೂಕಿನ ಅನೇಕ ತಾಂಡಾಗಳಲ್ಲಿ ರಸ್ತೆ, ಚರಂಡಿ, ಶಿಕ್ಷಣದ ವ್ಯವಸ್ಥೆ, ರೈತರಿಗೆ ನೀರಾವರಿ ಸೌಲಭ್ಯ ಸೇರಿದಂತೆ ಅನೇಕ ಉತ್ತಮ ಕೆಲಸ ಮಾಡಿದ್ದಾರೆ. ನಮ್ಮ ಸೂರಗೊಂಡನಕೊಪ್ಪದ ಅಭಿವೃದ್ಧಿಗೂ ಸಹ ಸಹಾಯ ಮಾಡಿದ್ದಾರೆ. ಇಂತಹವರ ಮನೆಗೆ ಕೆಲ ಕಿಡಿಗೇಡಿಗಳು  ಕಲ್ಲು ತೂರಾಟ ನಡೆಸಿದ್ದಕ್ಕೆ ಬೇಸರವಾಗಿದೆ. ಹೀಗಾಗಿ ನಾವು ಈ ಪತ್ರಿಕಾಗೋಷ್ಟಿ ಮೂಲಕ ಬಿಎಸ್‌ವೈ ರವರಿಗೆ ಕ್ಷಮೆ ಕೇಳುತ್ತೇವೆ ಎಂದು ತಿಳಿಸಿದರು. 

ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ರಾಮಾನಾಯ್ಕ್ ಮಾತನಾಡಿ, ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ಸಂತ ಸೇವಾಲಾಲ್ ಹಾಗೂ ಮರಿಯಮ್ಮ ದೇವಿಯ ಆರಾಧಕರಾಗಿದ್ದು, ಇಂತಹ ಮಹನೀಯರ ಮನೆಗೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಬಂಗಾರಿ ನಾಯ್ಕ್, ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷೆ ಸವಿತಾ ಶಿವಕುಮಾರ್, ಜಯಾನಾಯ್ಕ್, ಟಿಎಪಿಸಿಎಂಎಸ್ ನಿರ್ದೇಶಕ ಜಯಾನಾಯ್ಕ್, ತಾಲ್ಲೂಕು ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಸುರೇಶ್ ನಾಯ್ಕ್ ಸೇರಿದಂತೆ ಅನೇಕರು ಇದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,790FollowersFollow
0SubscribersSubscribe
- Advertisement -spot_img

Latest Articles

error: Content is protected !!