Shikaripura | B.S. Yediyurappa | Basavaraj Bommai | ಭುಗಿಲೆದ್ದ ಆಕ್ರೋಶ ; ಮಾಜಿ ಸಿಎಂ ಬಿಎಸ್‌ವೈ ಮನೆ ಮೇಲೆ ಕಲ್ಲು ತೂರಾಟ, ಸೀರೆಗಳಿಗೆ ಬೆಂಕಿ, ಲಾಠಿ ಚಾರ್ಜ್ ! 144 ಸೆಕ್ಷನ್ ಜಾರಿ

0 0

ಶಿಕಾರಿಪುರ : ರಾಜ್ಯ ಸರ್ಕಾರವು ಒಳಮೀಸಲಾತಿ ಜಾರಿಗೆ ತರಲು ಮುಂದಾದ ಬೆನ್ನಲ್ಲೆ ತಾಲ್ಲೂಕಿನ ಬೋವಿ, ಬಂಜಾರಾ, ಕೊರಮ, ಕೊರಚ ಜನಾಂಗದ ಸಮೂಹವೇ ಪಕ್ಷಾತೀತವಾಗಿ ಭುಗಿಲೆದ್ದ ಪ್ರತಿಭಟನೆಗೆ ಮುಂದಾದ ಘಟನೆ ಇಂದು ನಡೆದಿದೆ.

ಸದಾಶಿವ ಆಯೋಗದ ಒಳಮೀಸಲಾತಿ ಜಾರಿಗೆ ತಂದಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಸೋಮವಾರ ತಾಲ್ಲೂಕಿನ ಬಂಜಾರ, ಭೋವಿ, ಕೊರಚ, ಕೊರಮ ಜನಾಂಗಗಳ ಸಾವಿರಾರು ಜನರು ಬುಗಿಲೆದ್ದು, ಪಟ್ಟಣದ ಕಿರಣ್ ಟಾಕೀಸ್ ಬಳಿ ಇರುವ ಅಂಬೇಡ್ಕರ್ ವೃತ್ತದಿಂದ  ಆರಂಭಗೊಂಡ ಪ್ರತಿಭಟನಾಗಾರರ ಮೆರವಣಿಗೆಯೂ ಅಂಬೇಡ್ಕರ್ ವೃತ್ತದ ಬಳಿ ಬಸ್ ನಿಲ್ದಾಣದ ಬಳಿ ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರ ಹಾಗೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿರವರ ಭಾವಚಿತ್ರಕ್ಕೆ ಬೆಂಕಿ ಹಚ್ಚುವುದಲ್ಲದೇ, ಇತ್ತೀಚೆಗೆ ಬಿಎಸ್‌ವೈ ರವರ ಹುಟ್ಟು ಹಬ್ಬಕ್ಕೆ ನೀಡಿದ ಅನೇಕ ಸೀರೆಗಳನ್ನು ಬೆಂಕಿಯಲ್ಲಿ ಹಾಕುವುದರ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನಾ ಮೂಲಕ ಸಾಗಿದ ಮೆರವಣಿಗೆ ಪಟ್ಟಣದ ಮಾಳೇರ ಕೇರಿಯಲ್ಲಿರುವ ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಲಾಠಿಚಾರ್ಜ್ ನಡೆಸಿದರು ಇದಕ್ಕೆ ಕೆಲ ಮಹಿಳೆಯರಿಗೆ ಗಾಯವಾಗಿ ಆಸ್ಪತ್ರೆಗೆ ರವಾನಿಸುತ್ತಿದ್ದಂತೆಯೇ, ಪ್ರತಿಭಟನಾಗಾರರು ಪೋಲೀಸರ ಮೇಲೆ ಕಲ್ಲು ಮತ್ತು ಚಪ್ಪಲಿ ತೂರಾಟ ನಡೆಸಿದರು ಇದಕ್ಕೆ ಪೋಲೀಸ್ ಸಿಬ್ಬಂದಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಇದರಿಂದಾಗಿ ಬೆರಳೆಣಿಕೆಯಷ್ಟು ಇದ್ದ ಪೊಲೀಸರು ಮೌನಕ್ಕೆ ಶರಣಾದರು. ನಂತರ ಪ್ರತಿಭಟನಾ ಮೆರವಣಿಗೆ ನಿಕಟಪೂರ್ವ ಮುಖ್ಯಮಂತ್ರಿ ಬಿಎಸ್ವೈ ಬಿಜೆಪಿ ಪಕ್ಷದ ಕಛೇರಿಗೆ ನುಗ್ಗಿ ಕಛೇರಿಯ ಮೇಲಿರುವ ಬಿಜೆಪಿ ಪಕ್ಷದ ಬಾವುಟ ತೆಗೆದು ಬಂಜಾರಾ ಸಮಾಜದ ಬಾವುಟ ಪ್ರದರ್ಶಿಸಿದರು. ಇದರಿಂದಾಗಿ ತಾಲ್ಲೂಕಿನಲ್ಲಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ (ಎಸ್ಪಿ) ರವರಿಂದ 144 ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 

ತಾಲ್ಲೂಕಿನಲ್ಲಿ ಒಟ್ಟು 160 ಗ್ರಾಮಗಳಲ್ಲಿ 68 ತಾಂಡಾಗಳ್ಳಿದ್ದು, ಇದರಲ್ಲಿ 40 ಸಾವಿರಕ್ಕೂ ಅಧಿಕ ಬಂಜಾರ ಸಮಾಜದವರು, 23 ಸಾವಿರಕ್ಕೂ ಅಧಿಕ ಭೋವಿ ಜನಾಂಗ, 5 ರಿಂದ 6 ಸಾವಿರಕ್ಕೂ ಹೆಚ್ಚು ಕೊರಚ, ಕೊರಮ ಜನಾಂಗಗಳಿದ್ದು, ಒಟ್ಟಾರೆಯಾಗಿ 70 ಸಾವಿರಕ್ಕೂ ಅಧಿಕ ಜನರಿಗೆ ಒಳಮೀಸಲಾತಿ ಜಾರಿಗೆಯಿಂದ ಅನ್ಯಾಯವಾಗಲಿದೆ. ಇದರಿಂದಾಗಿ ವಿಧಾನಸಭೆಯ ಚುನಾವಣೆಯು ಹತ್ತರವಾಗುತ್ತಿರುವುದರಿಂದ ಈ ಬಾರಿ ತಾಲ್ಲೂಕಿನಲ್ಲಿ ಬಿಜೆಪಿ ಪಕ್ಷಕ್ಕೆ ದೊಡ್ಡ ಆಘಾತವುಂಟಾಗಲಿದೆ.

“ಹಿಂದೊಮ್ಮೆ ಇದೇ ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು 1982 ರಲ್ಲಿ ಅನೇಕ ಬಿಜೆಪಿ ಪಕ್ಷದ  ನಾಯಕರು ಮಾಜಿ ಬಂದೀಖಾನೆ ಸಚಿವ  ವೆಂಕಟಪ್ಪರವರ ಮನೆಗೆ ಮುತ್ತಿಗೆ ಹಾಕಿ ಜನರಿಗೆ ಮೋಸ, ಅನ್ಯಾಯ ಮಾಡಿದ್ದಾರೆಂದು ಪ್ರತಿಭಟನೆ ನಡೆಸಿದ್ದರು. ಆದರೆ ಈಗ ಅದೇ ರೀತಿಯಲ್ಲಿ ತಾಲ್ಲೂಕಿನ ಭೋವಿ ಕೊರಚ ಕೊರಮ ಬಂಜಾರ ಸಮಾಜದವರು ಆಗಿನ  ಸನ್ನಿವೇಶವು ಮತ್ತೆ ಬಿಎಸ್ವೈ  ರವರಿಗೆ ತಿರುಗುಬಾಣವಾಗಿದೆತಲ್ಲದೇ, ಮಾಡಿದ್ದುಣ್ಣೋ ಮಹಾರಾಯ ಎಂಬಂತಾಗಿದೆ ಎಂದು ಜನರಲ್ಲಿಯ ಮಾತಾಗಿದೆ.”

Leave A Reply

Your email address will not be published.

error: Content is protected !!