ಮಲೆನಾಡಿನ ಹಲವೆಡೆ ಅವಾಂತರ ಸೃಷ್ಟಿಸಿದ ಬಿರುಗಾಳಿ ಸಹಿತ ಭಾರಿ ಮಳೆ

0 196

ಶಿವಮೊಗ್ಗ/ಚಿಕ್ಕಮಗಳೂರು : ಮಲೆನಾಡಿನ ಹಲವೆಡೆ ಇಂದು ಸುರಿದ ಭಾರಿ ಮಳೆ ಹಲವು ಅವಾಂತರಗಳನ್ನು ಸೃಷ್ಟಿ ಮಾಡಿದೆ.

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಎನ್. ಆರ್ ಪುರ ತಾಲ್ಲೂಕಿನ ಹಲವೆಡೆ ಜೋರು ಮಳೆಯಾಗಿದ್ದು ಶೃಂಗೇರಿ ಸುತ್ತಮುತ್ತ ಗಾಳಿ ಮಳೆಯ ಅಬ್ಬರದ ಪರಿಣಾಮ ಮನೆಯ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಬೃಹತ್ ಗಾತ್ರದ ಮರವೊಂದು ಬಿದ್ದ ಘಟನೆ ಕುಂಚೇಬೈಲು ಗ್ರಾಮದಲ್ಲಿ ಸಂಭವಿಸಿದೆ.

ಕಟ್ಟಡ ಗುತ್ತಿಗೆದಾರ ಪ್ರದೀಪ್ ಎಂಬುವರಿಗೆ ಸೇರಿದ ಕಾರು ಇದಾಗಿದ್ದು ತೋಟದ ಕೆಲಸಕ್ಕೆ ಜನರನ್ನು ಕರೆದೊಯ್ಯುತ್ತಿದ್ದರು ಎನ್ನಲಾಗಿದೆ ಮಧ್ಯಾಹ್ನವಾದ ಕಾರಣ ಮನೆಗೆ ಊಟಕ್ಕೆ ಬಂದಿದ್ದರು ಈ ವೇಳೆ ಜೋರಾಗಿ ಸುರಿದ ಗಾಳಿ ಮಳೆಗೆ ಭಾರಿ ಗಾತ್ರದ ಮರವೊಂದು ಕಾರಿನ ಮೇಲೆ ಬಿದ್ದಿದೆ ಪರಿಣಾಮ ಶೃಂಗೇರಿ-ಚಿಕ್ಕಮಗಳೂರು ರಸ್ತೆ ಕೆಲ ಕಾಲ ಬಂದ್ ಆಗಿದೆ. ಮರ ಬೀಳುವ ವೇಳೆ ಕಾರಿನಲ್ಲಿ ಯಾರು ಇಲ್ಲದಿದ್ದುದರಿಂದ ಸಂಭವನೀಯ ಅವಘಡ ತಪ್ಪಿದಂತಾಗಿದೆ.

ಇನ್ನೂ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಮತ್ತು ಹೊಸನಗರ ತಾಲೂಕಿನ ಹಲವೆಡೆ ಗುಡುಗು, ಸಿಡಿಲಾರ್ಭಟದಿಂದ ಕೂಡಿದ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು ಏಕಾಏಕಿ ಬೀಸಿದ ಭಾರಿ ಪ್ರಮಾಣದ ಬಿರುಗಾಳಿಗೆ ಅಕೇಶಿಯ ಸೇರಿದಂತೆ ಇನ್ನಿತರ ನೂರಾರು ಮರಗಳು, ವಿದ್ಯುತ್ ಕಂಬಗಳು, ಅಡಿಕೆ ಮರಗಳು, ತೆಂಗಿನ ಮರಗಳು ಧರೆಗುರುಳಿದ ಘಟನೆ ನಡೆದಿದೆ.

ರಸ್ತೆ ಬದಿಯ ನೂರಾರು ಅಕೇಶಿಯ ಮರಗಳು ಧರೆಗುರುಳಿದ ಪರಿಣಾಮ ಕೋಣಂದೂರು-ರಿಪ್ಪನ್‌ಪೇಟೆ ರಾಜ್ಯ ಹೆದ್ದಾರಿಯಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತ್ತು.

ಹುಂಚ, ಕೋಣಂದೂರು, ಗರ್ತಿಕೆರೆ, ಹುಂಚದಕಟ್ಟೆ, ಮಳಲಿಕೊಪ್ಪ, ಕಡಸೂರು, ನಾಗರಹಳ್ಳಿ, ಹಿಂಡ್ಲೆಮನೆ, ಹುಗುಡಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆ ಸುರಿದಿದೆ.

ಗಾಳಿಗೆ ಹಲವು ಮನೆ ಮೇಲ್ಚಾವಣಿ ಹೆಂಚುಗಳು, ಶೀಟುಗಳನ್ನು ಹಾರಿಹೋಗಿದ್ದು ಅಪಾರ ನಷ್ಟ ಸಂಭವಿಸಿದೆ. ವಿದ್ಯುತ್ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ‌.

Leave A Reply

Your email address will not be published.

error: Content is protected !!