ಲಂಚ ಪಡೆದ ಕಾರ್ಖಾನೆ ಮತ್ತು ಬಾಯ್ಲರುಗಳ ಇಲಾಖೆಯ ಕಾರ್ಯನಿರ್ವಾಹಕ ವಿಠಲ್ ನಾಯ್ಕ್ ಬಂಧ

0 50


ಶಿವಮೊಗ್ಗ: ನಗರದ ವಿನೋಬನಗರ ವಾಸಿ ರಾಕೇಶ್ ಪಟೇಲ್ ಎಂಬುವವರ ಪಟೇಲ್ ಟೆಕ್ ಇಂಜಿನಿಯರಿಂಗ್ ಪ್ರೈ.ಲಿ ಎಂಬ ಕಾರ್ಖಾನೆಯ ಲೈಸನ್ಸ್ ಅನ್ನು ರದ್ದುಪಡಿಸಲು ಲಂಚ ಪಡೆದ ಶಿವಮೊಗ್ಗ ಕಾರ್ಖಾನೆ ಮತ್ತು ಬಾಯ್ಲರುಗಳ ಇಲಾಖೆ, ಸಹಾಯಕ ನಿರ್ದೇಶಕರ ಕಚೇರಿಯ ಕಾರ್ಯನಿರ್ವಾಹಕ ಹಾಗೂ ಆಡಳಿತ ಸಹಾಯಕ ವಿಠಲ್ ನಾಯ್ಕ್ ಎಂಬುವವರನ್ನು ಲೋಕಾಯುಕ್ತ ಇಲಾಖೆಯು ಬಂಧಿಸಿದೆ. 


ರಾಕೇಶ್ ಪಟೇಲ್ ಕಛೇರಿಗೆ ಭೇಟಿ ನೀಡಿ ತಮ್ಮ ಕಾರ್ಖಾನೆಯ ಲೈಸನ್ಸ್ ರದ್ದುಪಡಿಸಿದ ಬಗ್ಗೆ ಪ್ರಮಾಣ ಪತ್ರ ನೀಡಲು ಕೋರಿದ ಸಮಯದಲ್ಲಿ ಕಛೇರಿಯ ಸೂಪರ್‌ ವೈರಸ್ ಆದ ವಿಠಲನಾಯ್ಕ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು 15 ಸಾವಿರ ರೂ.ಗಳನ್ನು ಪಡೆದಿರುತ್ತಾರೆ. ಆದರೂ ಲೈಸನ್ಸ್ ರದ್ದತಿ ಪ್ರಮಾಣ ಪತ್ರ ನೀಡಿರುವುದಿಲ್ಲ. ದೂರವಾಣಿ ಮುಖಾಂತರ ಪ್ರಮಾಣ ಪತ್ರದ ಬಗ್ಗೆ ವಿಚಾರಿಸಿದಾಗ ಅವರು ನಾವು ತಿಳಿಸಿದ ಹಣ ನೀಡಿದ ನಂತರ ಪ್ರಮಾಣ ಪತ್ರ ನೀಡುವುದಾಗಿ ತಿಳಿಸಿದರು.  ಆರ್ಥಿಕವಾಗಿ ನಷ್ಟದಲ್ಲಿದ್ದರೂ ಸಹ ಪುನಃ 30 ಸಾವಿರ ರೂ.ಗಳನ್ನು ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು ರಾಕೇಶ್ ಪಟೇಲ್‍ಗೆ ಲಂಚದ ಹಣ ಕೊಡಲು ಇಷ್ಟವಿಲ್ಲದ ಕಾರಣ ಇಂದು ಲೋಕಾಯುಕ್ತ ಕಛೇರಿಗೆ ಬಂದು ಮಾಹಿತಿ ನೀಡಿ ಕೊಟ್ಟ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಲಾಗಿರುತ್ತದೆ.
ಅದರಂತೆ ಅಪಾದಿತರಾದ ವಿಠಲ್ ನಾಯ್ಕ ಬಿನ್ ಡೀಕ್ಯಾನಾಯ್ಕ, ಕಾರ್ಯನಿರ್ವಾಹಕ ಹಾಗೂ ಆಡಳಿತ ಸಹಾಯಕರು, ಸಹಾಯಕ ನಿರ್ದೇಶಕರ ಕಛೇರಿ ಕಾರ್ಖಾನೆ ಮತ್ತು ಬಾಯ್ಲರುಗಳ ಇಲಾಖೆ, ಶಿವಮೊಗ್ಗದ ಕಛೇರಿಯಲ್ಲಿ ದೂರುದಾರರಿಂದ ಲಂಚದ ಹಣ 30 ಸಾವಿರ ರೂ. ಪಡೆಯುತ್ತಿರುವ ಸಮಯದಲ್ಲಿ ಚಿತ್ರದುರ್ಗ ಕರ್ನಾಟಕ ಲೋಕಾಯುಕ್ತ ಕಛೇರಿ ಪೊಲೀಸ್ ಅಧೀಕ್ಷಕ ಎನ್. ವಾಸುದೇವರಾಮ ಮತ್ತು ಉಮೇಶ ಈಶ್ವರ ನಾಯ್ಕ ಪೊಲೀಸ್ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ, ಶಿವಮೊಗ್ಗ ಇವರ ಮಾರ್ಗದರ್ಶನದಲ್ಲಿ ಪ್ರಕರಣವನ್ನು ದಾಖಲಿಸಿ ಅಪಾಧಿತನನ್ನು ಬಂಧಿಸಿರುತ್ತಾರೆ ಹಾಗೂ ಹೆಚ್. ರಾಧಕೃಷ್ಣ, ಪೊಲೀಸ್ ನಿರೀಕ್ಷಕರು, ಕ.ಲೋ., ಶಿವಮೊಗ್ಗ ಇವರು ತನಿಖೆ ಕೈಗೊಂಡಿರುತ್ತಾರೆ.


ಶಿವಮೊಗ್ಗ ಲೋಕಾಯುಕ್ತ ಕಛೇರಿಯ ಪೊಲೀಸ್ ಸಿಬ್ಬಂದಿಗಳಾದ ಪ್ರಸನ್ನ ಸಿ.ಹೆಚ್.ಸಿ, ಬಿ. ಲೋಕೇಶಪ್ಪ ಸಿ.ಹೆಚ್.ಸಿ. ವಿ.ಎ ಮಹಂತೇಶ ಸಿ.ಹೆಚ್.ಸಿ, ಬಿ.ಟಿ ಚನ್ನೇಶ ಸಿ.ಪಿ.ಸಿ, ಪ್ರಶಾಂತ್ ಕುಮಾರ್ ಸಿ.ಪಿ.ಸಿ, ರಘುನಾಯ್ಕ ಸಿ.ಪಿ.ಸಿ ಸುರೇಂದ್ರ ಸಿ.ಪಿ.ಸಿ, ಅರುಣ್ ಕುಮಾರ್ ಸಿ.ಪಿ.ಸಿ, ದೇವರಾಜ್, ಸಿ.ಪಿ.ಸಿ, ಪುಟ್ಟಮ್ಮ ಮ.ಪಿ.ಸಿ, ಸಾವಿತ್ರಮ್ಮ, ಮ.ಪಿ.ಸಿ, ಗಂಗಾಧರ ಎ.ಪಿ.ಸಿ, ಪ್ರದೀಪ್, ಎ.ಪಿ.ಸಿ ತರುಣ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಎ.ಪಿ.ಸಿ, ಜಯಂತ್ ಎ.ಪಿ.ಸಿ ಇವರುಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Leave A Reply

Your email address will not be published.

error: Content is protected !!