ಅಕ್ರಮವಾಗಿ ದಾಸ್ತಾನು ಮಾಡಿದ್ದ 150 ಟನ್ ಮರಳು ವಶಕ್ಕೆ

0 756

ಹೊಸನಗರ: ತಾಲ್ಲೂಕಿನ ಪುರಪ್ಪೆಮನೆ ಶರಾವತಿ ನದಿಯ ತೀರದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 150 ಟನ್ ಮರಳನ್ನು ಹೊಸನಗರ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್‌ ಹಾಗೂ ಗಣಿ ಭೂ ವಿಜ್ಞಾನ ಇಲಾಖೆಯ ಪ್ರಿಯಾರವರ ನೇತೃತ್ವದ ತಂಡ ದಾಳಿ ನಡೆಸಿ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಬುಧವಾರ ರಾತ್ರಿ ಪತ್ತೆ ಮಾಡಿ ವಶಪಡಿಸಿಕೊಂಡಿದ್ದಾರೆ.

ಈ ದಾಳಿಯ ಸಂದರ್ಭದಲ್ಲಿ ಗಣಿ ಮತ್ತು ಭೂ ಇಲಾಖೆಯ ಅಧಿಕಾರಿ ಪ್ರಿಯಾ, ಸಬ್ ಇನ್ಸ್‌ಪೆಕ್ಟರ್ ಶಿವಾನಂದ ವೈ.ಕೆ ಗಂಗಪ್ಪ, ಬಟೋಲಿ, ಎ.ಎಸ್.ಐ ಶಿವಪುತ್ರ, ಅವಿನಾಶ್ ಇನ್ನೂ ಮುಂತಾದವರು ಈ ದಾಳಿಯಲ್ಲಿ ಉಪಸ್ಥಿತರಿದ್ದರು.

ರಾಜಕೀಯ ಒತ್ತಡವಿದೆಯೇ ?

ಹೊಸನಗರ ತಾಲ್ಲೂಕಿನಲ್ಲಿ ಹಗಲು ರಾತ್ರಿ ಎನ್ನದೇ ಅಕ್ರಮ ಮರಳು ದಂಧೆ ನಡೆಯುತ್ತಿದೆ ಇದಕ್ಕೆ ಕಡಿವಾಣ ಹಾಕಬೇಕಾದರೆ ಹೊಸನಗರ ತಾಲ್ಲೂಕು ಕಛೇರಿಯ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಪೊಲೀಸ್ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯೊಂದಿಗೆ ಕೈಜೊಡಿಸುವ ಅಗತ್ಯವಿದೆ. ಪೊಲೀಸ್ ಇಲಾಖೆಯ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ, ಸಬ್ ಇನ್ಸ್‌ಪೆಕ್ಟರ್ ಶಿವಾನಂದ್‌ರವರ ನೇತೃತ್ವದ ತಂಡ ಹಗಲು-ರಾತ್ರಿ ಅಕ್ರಮ ಮರಳುಗಾರಿಕೆಯ ವಿರುದ್ದ ಸಿಡಿದು ನಿಂತಿದ್ದು ಇವರ ಜೊತೆಗೆ ಶಿವಮೊಗ್ಗದ ಗಣಿ ಭೂ ವಿಜ್ಞಾನ ಇಲಾಖೆಯ ಅದಿಕಾರಿ ಪ್ರಿಯಾ ಸಿಬ್ಬಂದಿಗಳು ಸಾಥ್ ನೀಡುತ್ತಿದ್ದಾರೆ. ಆದರೆ ಉಳಿದ ಇಲಾಖೆಯ ಸಿಬ್ಬಂದಿಗಳು ಸಾಥ್ ನೀಡಲು ಹಿಂಜರಿಯುತ್ತಿದ್ದು? ಇವರುಗಳಿಗೆ ರಾಜಕೀಯ ಒತ್ತಡವಿದೆಯೇ? ಎಂಬುದು ಅರ್ಥವಾಗದ ವಿಷಯವಾಗಿದೆ.

ನೂತನ ತಹಶೀಲ್ದಾರ್ ರಶ್ಮಿ ಅಕ್ರಮ ಮರಳಿನ ವಿರುದ್ಧ ಸಿಡಿಯುವರೇ?
ತಹಶೀಲ್ದಾರ್‌ರಾಗಿ ರಶ್ಮಿಯವರು ಅಧಿಕಾರ ವಹಿಸಿಕೊಂಡಿದ್ದು ಒಂದೆರಡು ದಿನದಲ್ಲಿ ಹೊಸನಗರ ತಾಲ್ಲೂಕಿನ ಚಿತ್ರಣ ಗೊತಾಗುವುದಿಲ್ಲ ಆದರೆ ಅಕ್ರಮ ಮರಳು ಮತ್ತು ಕಲ್ಲುಗಣಿಗಾರಿಕೆಯ ವಿರುದ್ಧ ದೀಪಾವಳಿ ಹಬ್ಬದ ನಂತರ ಸಿಡಿಯುವ ಸೂಚನೆ ನೀಡಿದ್ದು ಇವರಿಗೆ ಯಾವುದೇ ರಾಜಕೀಯ ಒತ್ತಡ ಬಾರದಿದ್ದರೆ ಖಂಡಿತವಾಗಿಯು ಅಕ್ರಮ ಮರಳು ಹಾಗೂ ಅಕ್ರಮ ಕಲ್ಲುಗಣಿಗಾರಿಕೆಯ ವಿರುದ್ದ ಸಿಡಿಯುವುದರ ಜೊತೆಗೆ ಅಕ್ರಮ ಮರಳು ಹಾಗೂ ಅಕ್ರಮ ಗಣಿಗಾರಿಕೆಯ ವಿರುದ್ದ ಈಗಾಗಲೇ ಸಿಡಿದು ನಿಂತಿರುವ ಪೊಲೀಸ್ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರೊಂದಿಗೆ ಕೈಜೊಡಿಸಲಿದ್ದಾರೆ ಎಂದು ಹೇಳಲಾಗಿದೆ.

ಅಧಿಕಾರಿಗಳಿಗೆ ಬೆಂಬಲಿಸದ ಲಾರಿ ಮಾಲೀಕರು?

ಹೊಸನಗರ ತಾಲ್ಲೂಕಿನಲ್ಲಿ ಅಕ್ರಮ ಮರಳು ಹಿಡಿದ ತಕ್ಷಣ ಸರ್ಕಾರದ ಬಿಲ್ಡಿಂಗ್‌ಗಳಿಗೆ ಮರಳು ನೀಡಬೇಕು ಇಲ್ಲವಾದರೆ ಪಿಡ್ಲ್ಯೂಡಿ ಕಛೇರಿ, ಪೊಲೀಸ್ ಇಲಾಖೆಗೆ ಅಕ್ರಮ ಮರಳನ್ನು ನೀಡುವುದು ಅಧಿಕಾರಿಗಳ ಹೊಣೆಯಾಗಿದೆ ಆದರೆ ಹೊಸನಗರ ತಾಲ್ಲೂಕಿನಲ್ಲಿ ಸರ್ಕಾರಿ ಕಾಮಗಾರಿ ನಡೆಯದಿರುವ ಕಾರಣ ಹಿಡಿದ ಅಕ್ರಮ ಮರಳನ್ನು ಇಲಾಖೆಗೆ ಹಸ್ತಾಂತರಿಸಲು ತೊಂದರೆಯಾಗುತ್ತಿದ್ದು ಹೊಸನಗರ ತಾಲ್ಲೂಕಿನ ಯಾವುದೇ ಲಾರಿ ಮಾಲೀಕರು ಸೀಜ್ ಮಾಡಿದ ಸ್ಥಳದಿಂದ ಕಛೇರಿಗೆ ತಲುಪಿಸಲು ಸಾಧ್ಯವಾಗದೇ ಇರುವುದೇ ಅಧಿಕಾರಿಗಳಿಗೆ ಹಿನ್ನಡೆಯಾಗಿದ್ದು ಸೀಜ್ ಆದ ಅಕ್ರಮ ಮರಳು ಸ್ಥಳದಲ್ಲಿಯೇ ಬಿಟ್ಟು ಬಂದರೆ ಕಳ್ಳತನವಾಗುತ್ತದೆ ಸೀಜ್ ಆದಾ ನಂತರ ಕಳ್ಳತನವಾದ ಮರಳಿನ ಹಣ ಅಧಿಕಾರಿಗಳೇ ಸರ್ಕಾರಕ್ಕೆ ಪಾವತಿಸಬೇಕು ಇದು ಒಂದು ಹಿನ್ನಡೆಯಾಗಿರಬಹುದು ಎಂದು ಹೇಳಲಾಗಿದೆ.

Leave A Reply

Your email address will not be published.

error: Content is protected !!