ಅಕ್ರಮವಾಗಿ ಮದ್ಯ ದಾಸ್ತಾನು ; ಆರೋಪಿ ಬಂಧನ

0 6,547

ಶಿವಮೊಗ್ಗ : ಅಬಕಾರಿ ಉಪ ಆಯುಕ್ತೆ ಶ್ರೀಮತಿ ಸುಮಿತಾ ಕೆ.ಕೆ. ರವರ ಮಾರ್ಗದರ್ಶನದಲ್ಲಿ ಇಂದು ಶಿವಮೊಗ್ಗ ತಾಲೂಕಿನ ಗಾಜನೂರು ಅಗ್ರಹಾರ ಗ್ರಾಮದ ರಾಜಣ್ಣ ಬಿನ್ ಗೋವಿಂದಪ್ಪ ಎಂಬುವವರ ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 7.100 ಲೀ, ಗೋವಾ ಮದ್ಯವನ್ನು ಜಪ್ತಿ ಮಾಡಿ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಅಬಕಾರಿ ನಿರೀಕ್ಷಕ ಡಿ.ಎನ್. ಹನುಮಂತಪ್ಪ, ಅಬಕಾರಿ ಉಪನಿರೀಕ್ಷಕ ಚಂದ್ರಪ್ಪ, ಅಬಕಾರಿ ಮುಖ್ಯಪೇದೆ ಕೆಂಪರಾಮ, ಹಾಗೂ ಅಬಕಾರಿ ರಕ್ಷಕರುಗಳಾದ ನಾಗಪ್ಪ ಶೀರೋಳ್, ನಾಗಪ್ಪ, ರವಿ ಹೆಚ್. ಮತ್ತು ವಾಹನ ಚಾಲಕ ನ್ಯಾನರಾಜ್ ಎಂ. ಭಾಗವಹಿಸಿದ್ದರು.

ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ಸಂಬಂಧಪಡದ ಜಲತಜ್ಞರ ಸಮಿತಿ ರಚಿಸಬೇಕು

ಶಿವಮೊಗ್ಗ: ಕೇಂದ್ರದ ಕಾವೇರಿ ನೀರು ನಿರ್ವಹಣಾ ಸಮಿತಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಗಳನ್ನು ವಿಸರ್ಜಿಸಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ಸಂಬಂಧಪಡದ ಜಲತಜ್ಞರ ಸಮಿತಿ ರಚಿಸಬೇಕು. ಈ ಮೂಲಕ ಕರ್ನಾಟಕ ರಾಜ್ಯಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಒತ್ತಾಯಿಸಿ ಪ್ರತಿಭಟನೆ ನಡೆಸಿ ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ಕಾವೇರಿ ನೀರು ನಿರ್ವಹಣಾ ಸಮಿತಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಗಳು ಕಳೆದ ಹಲವಾರು ವರ್ಷಗಳಿಂದ ಕರ್ನಾಟಕ ರಾಜ್ಯದ ಹಿತಾಸಕ್ತಿಗೆ ಮಾರಕವಾಗಿ ತಮಿಳುನಾಡು ರಾಜ್ಯಕ್ಕೆ ಸತತವಾಗಿ ಕಾವೇರಿ ನೀರು ಹರಿಸುವ ವಿಚಾರದಲ್ಲಿ ಪಕ್ಷಪಾತ ಅನುಸರಿಸುತ್ತಿವೆ ಎಂದು ಆರೋಪಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಎರಡು ಸಮಿತಿಗಳನ್ನು ವಿಸರ್ಜಿಸಿ ಎರಡೂ ರಾಜ್ಯಗಳಿಗೆ ಸಂಬಂಧಪಡದ ಜಲತಜ್ಞರ ಸಮಿತಿಯನ್ನು ರಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬ್ರಿಟಿಷರ ಕಾಲದಿಂದಲೂ ಕರ್ನಾಟಕ ರಾಜ್ಯಕ್ಕೆ ಕಾವೇರಿ ನದಿ ನೀರಿನ ವಿಚಾರದಲ್ಲಿ ನಿರಂತರವಾಗಿ ಅನ್ಯಾಯವಾಗುತ್ತಿದೆ. ಹೀಗಾಗಿ ಎರಡು ಸಮಿತಿಗಳು ಅವೈಜ್ಞಾನಿಕ ಮತ್ತು ಅವಾಸ್ತವಿಕವಾಗಿ ಕಾವೇರಿ ಕೊಳ್ಳದ ಬರ ಪರಿಸ್ಥಿತಿಯನ್ನು ಪರಿಗಣಿಸದೆ ಕರ್ನಾಟಕ ಸರ್ಕಾರದ ವಾದವನ್ನು ಆಲಿಸದೆ ಏಕಪಕ್ಷೀಯವಾಗಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಪ್ರತಿದಿನ ತಮಿಳುನಾಡಿಗೆ 3000 ಕ್ಯುಸೆಕ್ ನೀರನ್ನು ಅಕ್ಟೋಬರ್ 15 ರವರೆಗೆ ಹರಿಸಬೇಕೆಂದು ಆದೇಶ ಮಾಡಿರುವುದು ಕರ್ನಾಟಕಕ್ಕೆ ಮಾರಕ ಮತ್ತು ವಜ್ರಘಾತದ ಆದೇಶವಾಗಿದೆ ಎಂದು ಹೇಳಿದ್ದಾರೆ.

ಭಾಷೆ, ನೆಲ, ಜಲ ಸಮಸ್ಯೆಯು ಎರಡು, ಮೂರು, ನಾಲ್ಕು ರಾಜ್ಯಗಳಲ್ಲಿ ಉದ್ಭವಿಸಿದಲ್ಲಿ ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡುವುದು ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ರಾಜ್ಯಕ್ಕೆ ಆಗಿರುವ ಅನ್ಯಾಯದ ಸರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಕಾಂಗ್ರೆಸ್ ಸರ್ಕಾರ, ರಾಜ್ಯದ ಎಲ್ಲಾ ಸಂಸದರು, ಬಿಜೆಪಿ, ಜೆಡಿಎಸ್ ಪಕ್ಷಗಳು ಈ ನಿಟ್ಟಿನಲ್ಲಿ ಧ್ವನಿ ಎತ್ತಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ಟ್ರಸ್ಟ್ ನ ಪ್ರಮುಖರಾದ ಕಲ್ಲೂರು ಮೇಘರಾಜ, ಕೃಷ್ಣಪ್ಪ, ಪ್ರೊ. ಹೆಚ್. ಕಲ್ಹಣ, ಸ.ನ. ಮೂರ್ತಿ, ಅಬ್ದುಲ್ ವಾಜಿದ್, ರೇಖಾ ನಾಯ್ಕ, ಹೆಚ್.ಎಂ. ಸಂಗಯ್ಯ, ಜನಮೇಜಿರಾವ್, ನರಸಿಂಹಮೂರ್ತಿ, ಕೆ.ಆರ್. ಶಿವಣ್ಣ, ಪುಷ್ಪಾವತಿ, ಜಿ.ವಿ. ಮಂಜುಳಾ, ಚಿಕ್ಕಮಟ್ಟಿ ಗೋವಿಂದ ಸ್ವಾಮಿ, ಶಂಕ್ರನಾಯಕ ಮೊದಲಾದವರು ಇದ್ದರು.

Leave A Reply

Your email address will not be published.

error: Content is protected !!