ಅಕ್ರಮವಾಗಿ ಸಾಗಿಸುತ್ತಿದ್ದ 10 ಗೋವುಗಳ ರಕ್ಷಣೆ ; ಇಬ್ಬರು ಆರೋಪಿಗಳ ಬಂಧನ

0 4

ಶಿವಮೊಗ್ಗ: ಶಿವಮೊಗ್ಗ ಹೊರವಲಯದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಹತ್ತು ಗೋವುಗಳನ್ನು ತುಂಗ ನಗರ ಪೊಲೀಸರು ದಾಳಿ ನಡೆಸಿ ರಕ್ಷಿಸಿದ್ದಾರೆ ಹಾಗೂ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.


ಪೊಲೀಸ್ ಇಲಾಖೆಗೆ ದೊರೆತ ಖಚಿತ ಮಾಹಿತಿ‌ ಮೇರೆಗೆ ನಡೆದ ದಾಳಿಯಲ್ಲಿ ಬೊಲೆರೋ ಪಿಕಪ್ ಮತ್ತು ದ್ವಿಚಕ್ರ ವಾಹನಗಳನ್ನ ವಶಕ್ಕೆ ಪಡೆಯಲಾಗಿದೆ. ಬೆಳಿಗ್ಗೆ 5-30 ರ ಸಮಯದಲ್ಲಿ ಅರಕೆರೆ ರಸ್ತೆ ರಾಮೇನಕೊಪ್ಪ ಸಮೀಪದಲ್ಲಿ ಬೊಲೆರೋ ವಾಹನದಲ್ಲಿ‌ 10 ಗೋವುಗಳನ್ನ ಹಿಂಸಾತ್ಮಕವಾಗಿ ಕಟ್ಟಿಕೊಂಡು ಕಸಾಯಿ ಖಾನೆಗಳಿಗೆ ಸಾಗಿಸುತ್ತಿದ್ದ ವೇಳೆ ತುಂಗಾ ನಗರ ಪೊಲೀಸರು ಖಡಕ್ ದಾಳಿ ನಡೆಸಿದ್ದಾರೆ.


ದಾಳಿಯಲ್ಲಿ 10 ಗೋವುಗಳನ್ನ ರಕ್ಷಿಸಿ ಗೋಶಾಲೆಗೆ‌ ಸಾಗಿಸಲಾಗಿದೆ. ಪ್ರಕರಣದಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದ್ದು ವಶಕ್ಕೆ ಪಡೆದವರಲ್ಲಿ ಒಬ್ಬನು ಸುಲ್ತಾನ್ ಪಾಳ್ಯದ ನಯಾಜ್ ಎಂದು ತಿಳಿದು ಬಂದಿದೆ.‌ ಮತ್ತೋರ್ವನ ಹೆಸರು ತಿಳಿದು ಬರಬೇಕಿದೆ.‌ ಬೊಲೆರೋ ಮತ್ತು ದ್ವಿಚಕ್ರವಾಹನವನ್ನ ವಶಕ್ಕೆ
ಪಡೆಯಲಾಗಿದೆ.


ದಾಳಿಯಲ್ಲಿ ತುಂಗ ನಗರ ಪೊಲೀಸ್ ಠಾಣೆಯ‌ ಪಿಐ ಮಂಜುನಾಥ್ ನೇತೃತ್ವದಲ್ಲಿ ಪಿಎಸ್‌ಐ ರಾಜೂ ರೆಡ್ಡಿ, ಪಿಎಸ್ ಐ ಕುಮಾರ್, ಸಿಬ್ಬಂದಿಗಳಾದ ರಾಜು,‌ ನಾಗಪ್ಪ,ಹರೀಶ್ ನಾಯ್ಕ್, ಹಾಗೂ ಸಂತೋಷ್ ಭಾಗಿಯಾಗಿದ್ದರು. ಜಿಲ್ಲಾ ರಕ್ಷಣಾಧಿಕಾರಿಗಳು ಪೊಲೀಸರ ಕಾರ್ಯವನ್ನು ಅಭಿನಂದಿಸಿದ್ದಾರೆ.

Leave A Reply

Your email address will not be published.

error: Content is protected !!