ಅನ್ಯ ಭಾಷೆಯ ವ್ಯಾಮೂಹ ಬಿಟ್ಟು ಕನ್ನಡ ಮಾತನಾಡಿ

0 523

ರಿಪ್ಪನ್‌ಪೇಟೆ: ಕನ್ನಡ ನಾಡಿನ ಭಾಷೆ  ಮತ್ತು ನಮ್ಮ ಸಂಸ್ಕೃತಿ ಎಲ್ಲರನ್ನು ಆಕರ್ಷಿಸುವಂತಹದ್ದು, ಆದರೆ ನಾವುಗಳು ಅನ್ಯ ಭಾಷೆಯ ವ್ಯಾಮೂಹದಿಂದಾಗಿ ನಮ್ಮ ಮಾತೃಭಾಷೆ ಕನ್ನಡವನ್ನು ಮಾತನಾಡದೇ ಬೇರೆ ಭಾಷೆಯನಾಡುತ್ತಾ ಮಕ್ಕಳಿಗೆ ಅದನ್ನು ಕಲಿಸುತ್ತಿರುವುದರ ಬಗ್ಗೆ ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ವೀರೇಶ್ ಆಲವಳ್ಳಿ ಕಳವಳ ವ್ಯಕ್ತಪಡಿಸಿದರು.

ರಿಪ್ಪನ್‌ಪೇಟೆಯ ಕಲಾಕೌಸ್ತೂಭ ಕನ್ನಡ ಸಂಘದ 30ನೇ ವರ್ಷದ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಕನ್ನಡ ಕಲಿತು ಬಳಸುವಂತಾದರೆ ಕನ್ನಡದ ಏಳಿಗೆ ತನಗೆ ತಾನೆ ಆಗುತ್ತದೆ. ಇಂಗ್ಲಿಷ್ ಜೀವನಕ್ಕೆ ಬೇಕು. ಅದನ್ನು ಕಲಿಯಿರಿ. ಆದರೆ ನಮ್ಮ ದಿನನಿತ್ಯದ ಆಡುಭಾಷೆಯಾಗಿ ಕನ್ನಡವನ್ನು ಬಳಸಿ ಅದು ನಮ್ಮ ಭಾವ ಭಾಷೆ ಆದ್ದರಿಂದ ಯುವ ಜನರು ಕನ್ನಡ ಬಳಸಬೇಕು ಎಂದು ಕರೆ ನೀಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷೆ ಲೀಲಾ ಉಮಾಶಂಕರ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಲಾಕೌಸ್ತುಭ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಶೈಲಾ ಆರ್.ಪ್ರಭು, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಮಿ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಎ.ಚಾಬುಸಾಬ್, ಎಂ.ಸುರೇಶ್‌ಸಿಂಗ್, ಆರ್.ಟಿ.ಗೋಪಾಲ, ಈಶ್ವರಶೆಟ್ಟಿ, ದೀಪಾ ಸುಧೀರ್, ಅಶ್ವಿನಿ ರವಿಶಂಕರ್, ವಿನೋಧ, ಸುಂದರೇಶ್, ದಾನಮ್ಮ, ಪದ್ಮಾ ಸುರೇಶ್, ಉಮಾ ಸುರೇಶ್, ಗೀತಾ, ರೇಖಾ ರವಿ, ಅಶ್ವಿನಿ,ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷೆ ಮಂಜುಳಾ ಕೇತಾರ್ಜಿರಾವ್, ತಾಲ್ಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷೆ ನಾಗರತ್ನ ದೇವರಾಜ್, ರಂಜನ, ವನಮಾಲ, ಲಕ್ಷ್ಮಿ ಶ್ರೀನಿವಾಸ್‌ ಆಚಾರ್, ತ.ಮ.ನರಸಿಂಹ, ಜಿ.ಆರ್.ಗೋಪಾಲಕೃಷ್ಣ, ಮಹಮದ್ ಅಲಿ,  ಮುರುಳಿ, ಸುಧೀರ್, ರಾಮು ಬಳೆಗಾರ್, ರಾಜುಭಂಡಾರಿ, ಮಂಜುನಾಥ ಗವಟೂರು, ಇನ್ನಿತರರು ಹಾಜರಿದ್ದರು.

Leave A Reply

Your email address will not be published.

error: Content is protected !!