ಅಪ್ರಾಪ್ತ ಮಗನಿಗೆ ಬೈಕ್ ಚಲಾಯಿಸಲು ಕೊಟ್ಟ ತಂದೆಗೆ ಬರೋಬ್ಬರಿ 25 ಸಾವಿರ ರೂ. ದಂಡ !

0 1

ಶಿವಮೊಗ್ಗ : ಅಪ್ರಾಪ್ತ ಮಗನಿಗೆ ಬೈಕ್ ಚಲಾಯಿಸಲು ಕೊಟ್ಟ ತಂದೆಗೆ ಬರೋಬ್ಬರಿ 25 ಸಾವಿರ ರೂ. ದಂಡ ವಿಧಿಸಲಾಗಿದೆ.

ಘಟನಾ ವಿವರ :
ಆ.12 ರಂದು ತಿರುಮಲೇಶ್, ಪಿಎಸ್ಐ ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆ ರವರು ಶಿವಮೊಗ್ಗ ಟೌನ್ ಅಶೊಕ ಹೋಟೆಲ್‌ನ ಹತ್ತಿರ ವಾಹನ ತಪಾಸಣೆ ಮಾಡುವಾಗ 17 ವರ್ಷದ ಅಪ್ರಾಪ್ತ ಬಾಲಕನೊಬ್ಬ ವಾಹನ ಚಾಲನಾ ಪರವಾನಿಗೆ ಇಲ್ಲದೆ ಕೆಎ14ವೈ4001 ನೋಂದಣಿ ಸಂಖ್ಯೆಯ ಬೈಕ್ ಚಾಲನೆ ಮಾಡಿ ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡಿದ್ದು, ಅಪ್ರಾಪ್ತ ಬಾಲಕನಿಗೆ ಬೈಕ್ ಚಾಲನೆ ಮಾಡಲು ಅವಕಾಶ ನೀಡಿದ ವಾಹನದ ಮಾಲೀಕರಾದ ಅಪ್ರಾಪ್ತನ ತಂದೆ ಶಿವಮೊಗ್ಗದ ಕ್ಲಾರ್ಕ್ ಪೇಟೆ ಓಂ ಪ್ರಕಾಶ್ (47) ಈತನ ವಿರುದ್ಧ ಶಿವಮೊಗ್ಗ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಲಘು ಪ್ರಕರಣವನ್ನು ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ಸಲ್ಲಿಸಿದ್ದರು.

ಶಿವಮೊಗ್ಗ 4ನೇ ಎ ಸಿ ಜೆ & ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶರು ಬೈಕ್ ಮಾಲೀಕರಾದ ಬಾಲಕನ ತಂದೆ ಓಂ ಪ್ರಕಾಶ್ ರವರಗೆ 25 ಸಾವಿರ ರೂ. ದಂಡ ವಿಧಿಸಿದ್ದಾರೆ.

Leave A Reply

Your email address will not be published.

error: Content is protected !!