ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ
ರಿಪ್ಪನ್‌ಪೇಟೆ: ಪಿತೃಪಕ್ಷದಲ್ಲಿ ಆಚರಿಸಲಾಗುವ ಇಲ್ಲಿನ ಕೋಡೂರು ಬಳಿಯ ಅಮ್ಮನಘಟ್ಟದ ಇತಿಹಾಸ ಪ್ರಸಿದ್ಧ ಶ್ರೀ ಜೇನುಕಲ್ಲಮ್ಮ ದೇವಿಯ ಜಾತ್ರಾಮಹೋತ್ಸವ ಅಕ್ಟೋಬರ್ 3 ರಿಂದ ಮೊದಲ ಜಾತ್ರೆಯೊಂದಿಗೆ ಆರಂಭವಾಗಲಿದ್ದು ಇಂದು ವಿವಿಧ ಧಾರ್ಮಿಕ ಕೈಂಕರ್ಯದೊಂದಿಗೆ ದೇವಸ್ಥಾನದ ಪ್ರಧಾನ ಅರ್ಚಕ ಭಾಸ್ಕರ್‌ಜೋಯ್ಸ್ ಇವರು ಪೂಜಾ ವಿಧಿ ವಿಧಾನವನ್ನು ಮೂಲ ಅಮ್ಮನಘಟ್ಟದ (ಹಳೆ ಅಮ್ಮನಘಟ್ಟ) ದೇವಿ ಸನ್ನಿಧಿಯಲ್ಲಿ ನೆರವೇರಿಸುವ ಮೂಲಕ ವಿದ್ಯುಕ್ತವಾಗಿ ಚಾಲನೆ ದೊರೆಯಿತು.

ಈ ಸಂದರ್ಭದಲ್ಲಿ ಜೇನುಕಲ್ಲಮ್ಮ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ, ಮಾಜಿ ಶಾಸಕ ಬಿ.ಸ್ವಾಮಿರಾವ್, ಕೋಡೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಮೇಶ್, ಸಮಿತಿಯ ಹರೀಶ್‌ಗೌಡ, ಕೋಡೂರು ವಿಜೇಂದ್ರರಾವ್, ಸುಧೀರ್ ಭಟ್, ಮಂಡಾನಿ ಕುಮಾರ, ಸಂತೋಷ ನೀರೇರಿ, ಗಣೇಶಕಾಪಿ, ಮಂಡಾನಿ ಗುರುಮೂರ್ತಿ, ಪುಟ್ಟಪ್ಪ, ಮನೋಧರ್, ಜಯಪ್ರಕಾಶ್‌ಶೆಟ್ಟಿ, ರತ್ನಮ್ಮ, ದೇವರಾಜ್, ಕೋಡೂರು ಪಿಡಿಓ ನಾಗರಾಜ್, ವೀರಭದ್ರಪ್ಪ ಕಬ್ಬಳ್ಳಿ, ಯಳಗಲ್ಲು ಸ್ವಾಮಿ, ಇನ್ನಿತರ ಸಮಿತಿಯ ಸದಸ್ಯರು ಹಾಜರಿದ್ದರು.