ಅಮ್ಮನಘಟ್ಟ ; ಶ್ರೀ ಜೇನುಕಲ್ಲಮ್ಮ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಆರಗ ಜ್ಞಾನೇಂದ್ರ

0 286

ರಿಪ್ಪನ್‌ಪೇಟೆ: ಕೋಡೂರು ಸಮೀಪದ ಅಮ್ಮನಘಟ್ಟ ಶ್ರೀ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಭಕ್ತರ ದಂಡು ಹರಿದು ಬಂದಿತ್ತು. ಶಾಸಕ ಆರಗ ಜ್ಞಾನೇಂದ್ರ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಮಿತಿಯವರಿಂದ ಸನ್ಮಾನ ಸ್ವೀಕರಿಸಿದರು.


ಪ್ರಧಾನ ಅರ್ಚಕ ಭಾಸ್ಕರ್‌ ಜೋಯ್ಸ್ ಅವರು ದೇವಿಗೆ ವಿಶೇಷ ಪೂಜಾ ಕೈಂಕರ್ಯದ ವಿಧಿ ವಿಧಾನ ನೆರವೇರಿತು.
ಮಂಗಳವಾರ ಮುಂಜಾನೆ 5:00 ಗಂಟೆಯಿಂದಲೇ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಆಗಮಿಸಿದ ಭಕ್ತರ ದಂಡು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದರು.


ಸುಮಾರು 20 ಸಾವಿರಕ್ಕೂ ಅಧಿಕ ಭಕ್ತರು ಇಂದು ಆಗಮಿಲಿದ್ದು ತಾವು ಬೆಳೆದ ಶುಂಠಿ, ಅಕ್ಕಿ, ಕಾಳುಮೆಣಸು, ಜೋಳ, ಬಾಳೆಹಣ್ಣು ಸೇರಿದಂತೆ ಇತರೆ ದವಸ ಧಾನ್ಯಗಳನ್ನು ದೇವಿಗೆ ಸಮರ್ಪಿಸಿದ್ದರು.

ಕಿರಿದಾದ ರಸ್ತೆ ಹಾಗೂ ಪಾರ್ಕಿಂಗ್ ವ್ಯವಸ್ಥೆಗೆ ಸ್ಥಳಾವಕಾಶದ ಕೊರತೆ ಇರುವುದರಿಂದ ವಾಹನಗಳಲ್ಲಿ ಆಗಮಿಸಿದ ಭಕ್ತರನ್ನು ನಿಯಂತ್ರಿಸಲು ರಕ್ಷಣಾ ಇಲಾಖೆ, ಸಮಿತಿ ಸದಸ್ಯರು ಹಾಗೂ ಸ್ವಯಂ ಸೇವಕರು ಹರಸಾಹಸ ಪಟ್ಟರು.

Leave A Reply

Your email address will not be published.

error: Content is protected !!