ಅ. 08 ರಂದು ಕ.ಕಾ. ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ವತಿಯಿಂದ ಜಿಲ್ಲಾ ಮಟ್ಟದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ
ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ವತಿಯಿಂದ ಜಿಲ್ಲಾ ಮಟ್ಟದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸರ್ವ ಸದಸ್ಯರ ಸಭೆಯನ್ನು ಅ. 8 ರಂದು ಬೆಳಗ್ಗೆ 10 ಗಂಟೆಗೆ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಲಾಗಿದೆ ಎಂದು ಅಧ್ಯಕ್ಷ ಕೆ.ವಿ. ಶಿವಕುಮಾರ್ ಹೇಳಿದರು.
ಅವರು ಇಂದು ಮೀಡಿಯಾ ಹೌಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮವನ್ನು ಸಂಸದ ಬಿ.ವೈ. ರಾಘವೇಂದ್ರ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಪ್ರಶಸ್ತಿ ಪ್ರದಾನ ಮಾಡುವರು. ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಅರಸಾಳು ರಂಗನಾಥ್ ಹಾಗೂ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಅವರನ್ನು ಸನ್ಮಾನಿಸಲಾಗುವುದು ಎಂದರು.

ಮುಖ್ಯ ಅತಿಥಿಗಳಾಗಿ ಶಾಸಕ ಎಸ್.ಎನ್. ಚನ್ನಬಸಪ್ಪ, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕ ಎನ್. ರವಿಕುಮಾರ್ ಉಪಸ್ಥಿತರಿದ್ದು, ರಾಜ್ಯಾಧ್ಯಕ್ಷ ಶಿವನಾಂದ ತಗಡೂರು ಆಶಯ ನುಡಿಗಳನ್ನಾಡುವರು ಎಂದರು.
ಈ ಬಾರಿಯ ಪ್ರಶಸ್ತಿಯನ್ನು ವಿಜಯವಾಣಿ ವರದಿಗಾರ ನವೀನ್ ಬಿಲ್ಗುಣಿ, ಛಾಯಾಗ್ರಾಹಕ ಯೋಗರಾಜ್, ಉದಯವಾಣಿ ವರದಿಗಾರ ಜಿ.ಎಸ್. ಸುಧೀಂದ್ರ, ಪ್ರಜಾವಾಣಿ ವರದಿಗಾರರಾದ ನಾಗರಕೊಡಿಗೆ ರವಿ, ನಿರಂಜನ, ರವಿ. ಆರ್. ತಿಮ್ಲಾಪುರ, ಎಂ. ನವೀನ್ ಮತ್ತು ಸಂಯುಕ್ತ ಕರ್ನಾಟಕ ವರಿಗಾರ ಮಹೇಶ್ ಹೆಗ್ಡೆ ಅವರಿಗೆ ನೀಡಲಾಗಿದೆ. ಹಾಗೆಯೇ ಅತ್ಯುತ್ತಮ ತಾಲೂಕು ಘಟಕದ ಪ್ರಶಸ್ತಿಯನ್ನು ಸೊರಬ ತಾಲೂಕು ಘಟಕಕ್ಕೆ ನೀಡಲಾಗಿದೆ. ಸಂಘದ ಅಧ್ಯಕ್ಷ ನಾಗರಾಜ್ ಜೈನ್ (ಬಣ್ಣದ ಬಾಬು) ಪ್ರಶಸ್ತಿ ಸ್ವೀಕರಿಸಲಿದ್ದಾರೆ ಎಂದರು.
ಹಾಗೆಯೇ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಕೂಡ ಇದೇ ಸಂದರ್ಭದಲ್ಲಿ ನಡೆಸಲಾಗುವುದು. ಕಳೆದ ವರ್ಷದ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ. 80 ಕ್ಕೂ ಅಧಿಕ ಅಂಕ ಪಡೆದ ಮಕ್ಕಳಿಗೆ ಪುರಸ್ಕಾರ ನೀಡಲಾಗುವುದು. ಪತ್ರಕರ್ತರು ತಮ್ಮ ಮಕ್ಕಳು ಅರ್ಹರಾಗಿದ್ದಲ್ಲಿ ಸಂಘದ ಕಚೇರಿಗೆ ಮಾಹಿತಿ ನೀಡಲು ಕೋರಿದೆ.
ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಕೆ.ಎಸ್. ಹುಚ್ರಾಯಪ್ಪ, ಆರ್.ಎಸ್. ಹಾಲಸ್ವಾಮಿ, ವೈದ್ಯನಾಥ್, ಪ್ರಧಾನ ಕಾರ್ಯದರ್ಶಿ ವಿ.ಟಿ. ಅರುಣ್, ಕಾರ್ಯದರ್ಶಿಗಳಾದ ದೀಪಕ್ ಸಾಗರ್, ಕೆ.ಆರ್. ಸೋಮನಾಥ್, ಗಾ.ರಾ. ಶ್ರೀನಿವಾಸ್, ರಾಜ್ಯ ಸಮಿತಿ ಸದಸ್ಯ ಎನ್. ರವಿಕುಮಾರ್ ಉಪಸ್ಥಿತರಿದ್ದರು.