ಅ. 15 ರಿಂದ 24 ರವರೆಗೆ ಹೊಂಬುಜ ಮಠದಲ್ಲಿ ಶರನ್ನವರಾತ್ರಿ ಮತ್ತು ವಿಜಯದಶಮಿ

0 102

ರಿಪ್ಪನ್‌ಪೇಟೆ: ಸಮೀಪದ ಹೊಂಬುಜ ಜೈನರ ದಕ್ಷಿಣ ಕಾಶಿಯೆಂದೇ ಪ್ರಾಖ್ಯಾತಿ ಹೊಂದಿರುವ ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ಆ.15 ರಿಂದ 24 ರವರೆಗೆ ಶ್ರೀಜಗನ್ಮಾತೆ ಪದ್ಮಾವತಿ ಅಮ್ಮನವರ ಮತ್ತು ಭಗವಾನ್ ಪಾರ್ಶ್ವನಾಥಸ್ವಾಮಿ ಮಹಾಸನ್ನಿಧಾನದಲ್ಲಿ ಶರನ್ನವರಾತ್ರಿ ದಸರಾಮಹೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ಅಕ್ಟೋಬರ್ 15 ರಂದು ಭಾನುವಾರ ಶರನ್ನವರಾತ್ರಿ ಉತ್ಸವವು ಹೊಂಬುಜ ಮಠದ ಡಾ.ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಜಿಯವರ ನೇತೃತ್ವದಲ್ಲಿ ದೇವಿಯ ಸನ್ನಿಧಿಯಲ್ಲಿ ಘಟಸ್ಥಾಪನೆ ಮಹಾನೈವೇದ್ಯ ಪೂಜೆ ಜರುಗಲಿದೆ.
ಅ.20 ರಂದು ಸರಸ್ವತಿ ಪೂಜೆ,22 ರಂದು ಜೀವದಯಾಷ್ಟಮಿ, ಅ.23 ಎಂದು ಆಯುಧಪೂಜೆ ಮತ್ತು ಮಹಾನವಮಿ, ಅಕ್ಟೋಬರ್ 24 ರಂದು ವಿಜಯ ದಶಮಿ ಉತ್ಸವ ಮಹಾದೇವಿ ಪಲ್ಲಕ್ಕಿ ಉತ್ಸವ,ಹೊಂಬುಜ ಜೈನಮಠಾಧೀಶರಾದ ಜಗದ್ಗುರು ಡಾ.ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಜಿಯವರ ಪರಂಪರಾಗತ ಸಿಂಹಾಸನಾರೋಹಣ ನಡೆಯಲಿದೆ.

ಈ ಧಾರ್ಮಿಕ ಕಾರ್ಯಕ್ರಮಕ್ಕೆ ಸಕಲ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ದರ್ಶನಾಶೀರ್ವಾದ ಪಡೆಯುವಂತೆ ಮಠದ ಆಡಳಿತಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

Your email address will not be published.

error: Content is protected !!