ಆಸ್ತಿ ವಿಚಾರಕ್ಕೆ ದಾಯಾದಿಗಳ ನಡುವೆ ಮನಸ್ತಾಪ ; ಕೊಲೆಯಲ್ಲಿ ಅಂತ್ಯ !

0 819

ಶಿವಮೊಗ್ಗ : ತಾಲೂಕಿನ ಬೆಳಲಕಟ್ಟೆ ಗ್ರಾಮದಿಂದ ಇಂದು ಬೆಳಗ್ಗೆ ಮಗಳ ಮನೆಗೆ ಹೋಗುತ್ತಿದ್ದ ಮಹೇಶಪ್ಪ ಎನ್ನುವ ವ್ಯಕ್ತಿಯನ್ನು ಪೆಟ್ರೋಲ್ (Petrol) ಸುರಿದು ಕೊಲೆ (Murder) ಮಾಡಿದ್ದಾರೆ. ಆಸ್ತಿ ವಿಚಾರ (Property Issue)ಕ್ಕಾಗಿ ದಾಯಾದಿಗಳ ನಡುವಿನ ಮನಸ್ತಾಪವಿತ್ತು ಇಂದು ಕೊಲೆಯಲ್ಲಿ ಅಂತ್ಯವಾಗಿದೆ.

ಬೈಕ್ ಮೇಲೆ ಹೋಗುತ್ತಿದ್ದ ಮಹೇಶಪ್ಪನನ್ನು ದಾಯಾದಿ ಕುಮಾರಪ್ಪ ಮತ್ತು ಆತನ ಮಗ ಕಾರ್ತಿಕ್ ಎಂಬುವರು, ಬೈಕ್ ತಡೆದು ಪೆಟ್ರೋಲ್ ಸುರಿದು ಜೀವಂತ ಸುಟ್ಟಿದ್ದಾರೆ. ಜೊತೆಗೆ ಆತನ ಬಳಿಯಿದ್ದ 60 ಸಾವಿರ ರೂಪಾಯಿ ನಗದು ಮತ್ತು ಬೈಕ್ ಅನ್ನು ಸುಟ್ಟು ಹಾಕಿ ಅಟ್ಟಹಾಸ ಮೆರೆದಿದ್ದಾರೆ.

ಬೆಂಕಿಯಿಂದ ಸುಟ್ಟ ಗಾಯವಾಗಿದ್ದ ವ್ಯಕ್ತಿಯು ಅಳಿಯನಿಗೆ ಕಾಲ್ ಮಾಡಿ ಸಾಯುವ ಮೊದಲು ತನ್ನ ಹತ್ಯೆ ಮಾಡಿದ ಇಬ್ಬರ ಹೆಸರನ್ನು ಹೇಳಿದ್ದಾನೆ. ಸುಟ್ಟ ಗಾಯದಿಂದ ಬಳಲುತ್ತಿದ್ದ ವ್ಯಕ್ತಿಯು ನರಳಾಡುತ್ತಿರುವುದನ್ನು ಸ್ಥಳೀಯರು ವಿಡಿಯೋ ಮಾಡಿದ್ದಾರೆ. ಕೊಲೆ ಮಾಡಿದ ಕುಮಾರಪ್ಪ ಮತ್ತು ಕಾರ್ತಿಕ್ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಈ ಘಟನೆಯಿಂದ ಗ್ರಾಮಸ್ಥರು ಮತ್ತು ಕುಟುಂಬಸ್ಥರು ಬೆಚ್ಚಿ ಬಿದ್ದಿದ್ದು, ಕೊಲೆ ಮಾಡಿದ ತಂದೆ ಮಕ್ಕಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಮೃತನ ಮಗಳು ಒತ್ತಾಯಿಸಿದ್ದಾಳೆ.

ನಿತ್ಯ ಮಹೇಶಪ್ಪ ಮಗಳ ಮನೆಗೆ ಹೋಗಿ ತೋಟಕ್ಕೆ ನೀರು ಬಿಟ್ಟು ವಾಪಾಸಾಗುತ್ತಿದ್ದರು. ನಿನ್ನೆ ನೀರಿನ ಮೋಟಾರ್ ಕೆಟ್ಟಕಾರಣ ಇಂದು ಬೆಳಿಗ್ಗೆ ಮೋಟಾರ್ ಬದಲಾಯಿಸಲು ತೀರ್ಮಾನಿಸಿ, ಮನೆಯಿಂದ ದ್ವಿಚಕ್ರ ವಾಹನದಲ್ಲಿ 60 ಸಾವಿರ ರೂ ಹಣ ಇಟ್ಟುಕೊಂಡು ಹೋಗುತ್ತಿದ್ದ. ಈ ವೇಳೆ ಶಿವಮೊಗ್ಗ ತಾಲೂಕಿನ ಮತ್ತೋಡು ಕ್ರಾಸ್ ಬಳಿ ಈ ಕೃತ್ಯ ನಡೆದಿದೆ. ಕೊಲೆಯಾದ ಮಹೇಶಪ್ಪ ಮತ್ತು ದಾಯಾದಿ ಕುಮಾರಪ್ಪ ಇಬ್ಬರ ನಡುವೆ ಮೂರು ಎಕರೆ ಜಮೀನು ವಿಚಾರವಾಗಿ ಕೋರ್ಟ್‌ನಲ್ಲಿ ಕೇಸ್ ಇದೆ. ಈ ವಿಚಾರವಾಗಿ ಪದೇ ಪದೇ ದಾಯಾದಿಗಳ ನಡುವೆ ಕಿರಿಕ್ ನಡೆಯುತ್ತಿತ್ತು. ಇದರ ಮುಂದುವರೆದ ಭಾಗವಾಗಿ ಇಂದು ಬೆಳಗ್ಗೆ ಪ್ಲ್ಯಾನ್ ಮಾಡಿ ತಂದೆ ಮಗ ಸೇರಿ ಮಹೇಶಪ್ಪನನನ್ನು ಜೀವಂತ ಸುಟ್ಟಿದ್ದಾರೆ.

ತಕ್ಷಣವೇ ಸ್ಥಳೀಯರು ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ವೈದ್ಯರು ಮಹೇಶಪ್ಪ ಬದುಕುಳಿಯುವುದು ಕಷ್ಟವೆಂದಿದ್ದಾರೆ. ಬಳಿಕ ಮೆಗ್ಗಾನ್ ಗೆ ಸಾಗಿಸಲಾಗಿತ್ತು. ಮೆಗ್ಗಾನ್ ನಲ್ಲಿ ಮಹೇಶಪ್ಪ ಕೊನೆ ಉಸಿರೆಳೆದಿದ್ದಾನೆ. ಕುಮಾರಪ್ಪ, ಮಗ ಕಾರ್ತಿಕ್ ಹೆಸರನ್ನು ಸುಟ್ಟ ಸ್ಥಿತಿಯಲ್ಲಿ ಮಹೇಶಪ್ಪ ಹೇಳಿದ್ದಾನೆ. ಇದರ ಆಧಾರದ ಮೇಲೆ ಈಗಾಗಲೇ ಗ್ರಾಮಾಂತರ ಪೊಲೀಸರು ತಂದೆ ಕುಮಾರಪ್ಪನನ್ನು ವಶಕ್ಕೆ ಪಡೆದಿದ್ದಾರೆ. ಕೊಲೆ ಮಾಡಿದ ಮಗ ಕಾರ್ತಿಕ್ ಸದ್ಯ ತಲೆಮರೆಸಿಕೊಂಡಿದ್ದಾನೆ.

ಮಹೇಶಪ್ಪ, ಆಸ್ತಿ ವಿಚಾರವಾಗಿ ಕುಮಾರಪ್ಪನ ಬೆದರಿಕೆ ಗಲಾಟೆಗಳಿಗೆ ಕ್ಯಾರೆ ಎಂದಿರಲಿಲ್ಲ. ಈ ಜಗಳವು ಈಗಾಗಲೇ ಗ್ರಾಮಾಂತರ ಪೊಲೀಸ್ ಠಾಣೆ ಮೆಟ್ಟಿಲು ಏರಿತ್ತು. ಆದರೂ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. ಜಮೀನು ವಿವಾದವು ಕೋರ್ಟ್‌ನ ಲ್ಲಿತ್ತು. ಹೀಗಾಗಿ ಗ್ರಾಮಾಂತರ ಪೊಲೀಸರು ಗಲಾಟೆಯನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇದರ ಬೆನ್ನಲ್ಲೇ ಮಹೇಶಪ್ಪನ ದಾರುಣ ಹತ್ಯೆ ಆಗಿದ್ದಕ್ಕೆ ಕುಟುಂಬಸ್ಥರು ಬೆಚ್ಚಿ ಬಿದ್ದಿದ್ದಾರೆ. ಆಸ್ತಿಗಾಗಿ ವಯಸ್ಸಾದ ವ್ಯಕ್ತಿಯನ್ನು ನಡು ರಸ್ತೆಯಲ್ಲೇ ಪೆಟ್ರೋಲ್ ಹಾಕಿ ಸುಟ್ಟು ಕೊಲೆ ಮಾಡಿದ್ದಾರೆ. ರಕ್ತ ಸಂಬಂಧಿ ಎನ್ನುವುದನ್ನು ಮರೆತು ಕೇವಲ ದ್ವೇಷಕ್ಕಾಗಿ ದಾಯಾದಿಯು ಮಗನ ಜೊತೆ ಸೇರಿ ಹತ್ಯೆ ಮಾಡಿದ್ದಾನೆ.

Leave A Reply

Your email address will not be published.

error: Content is protected !!