ಇಂದೇ ಚುನಾವಣೆ ನಡೆದರೆ 130 ಸ್ಥಾನ ಗೆಲ್ಲುವ ವಾತಾವರಣವಿದೆ ; ಬಿ.ಎಸ್. ಯಡಿಯೂರಪ್ಪ

0 259

ಶಿವಮೊಗ್ಗ : ರಾಜ್ಯದಲ್ಲಿ ಭ್ರಷ್ಟಚಾರ ತಾಂಡವಾಡುತ್ತಿದೆ. ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಇದರ ವಿರುದ್ಧ ಹೋರಾಟ ಮಾಡಲಾಗುತ್ತದೆ ಎಂದು ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ ಹೇಳಿದರು.


ಅವರು ಇಂದು ನಗರದ ಪೆಸಿಟ್ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ನಗರಕ್ಕೆ ಆಗಮಿಸಿದ್ದ ಹಿನ್ನಲೆಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದೇ ಚುನಾವಣೆ ನಡೆದರೂ ವಿಜಯೇಂದ್ರ
ನೇತೃತ್ವದಲ್ಲಿ 130 ಸ್ಥಾನ ಗೆಲ್ಲುವ ವಾತಾವರಣ ನಿರ್ಮಾಣವಾಗಲಿದೆ. ಯಾವಾಗಲೇ ಚುನಾವಣೆ ನಡೆದರೂ ಸ್ಪಷ್ಟ ಬಹುಮತ ಬರಲಿದೆ. ಬಿ.ವೈ.ವಿ. ಬೆಂಬಲಸಬೇಕು. ಲೊಕಸಭೆ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲಿಸುವಂತೆ ಮಾನವಿ ಮಾಡಿದರು.

ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಮಾತನಾಡಿ, ರಾಜ್ಯದ ಸಾಕಷ್ಟು ಕಾರ್ಯಕರ್ತರ ಶ್ರಮದ ಫಲವಾಗಿ ಇಂದು ಬಲ ಬಂದಿದೆ. ವಿಜಯೇಂದ್ರ ಆಯ್ಕೆಯಿಂದ ಮಿಂಚಿನ ಸಂಚಾರ ಉಂಟಾಗಿದೆ. ಕಾಂಗ್ರೆಸ್ ನವರು ಬಿಜೆಪಿಯಲ್ಲಿ ಲಿಂಗಾಯಿತರನ್ನು ತುಳಿಯುತ್ತಿದ್ದಾರೆ ಎಂದು ಬಿಂಬಿಸಲಾಗಿತ್ತು. ಈಗ ಅವರು ಏನು ಹೇಳುತ್ತಾರೆ. ವಿಜಯೇಂದ್ರ ಲಿಂಗಾಯತರ ನಾಯಕ ಅಲ್ಲ. ಇಡೀ ಹಿಂದೂ ಸಮಾಜದ ನಾಯಕ ಎಂದರು.


ಕರ್ನಾಟಕ ರಾಜ್ಯದ ದೇಶದ್ರೋಹಿ ಮುಸಲ್ಮಾರನ್ನು ವಿಜಯೇಂದ್ರ ನೇತೃತ್ವದಲ್ಲಿ ಸದೆ ಬಡಿಯುತ್ತೇವೆ. ಸಂವಿಧಾನ ಬಾಹಿರವಾದಂತಹ ಹೇಳಿಕೆಯನ್ನು ಜಮೀರ್ ಅಹಮ್ಮದ್ ನೀಡಿದ್ದಾರೆ. ನಾವು ಯು.ಟಿ.ಖಾದರ್ ಅವರಿಗಲ್ಲ ಸಭಾಧ್ಯಕ್ಷ ಪೀಠಕ್ಕೆ ಬೆಲೆ ಕೊಡುತ್ತೇವೆ ಎಂದರು. ಜಾತಿಯ ಕಳಂಕವನ್ನು ವಿಜಯೇಂದ್ರ ಅಂಟಿಸಿಕೊಳ್ಳದೆ ಯಡಿಯೂರಪ್ಪನವರನ್ನು ಮೀರಿಸಿ ಬೆಳೆಯುವಂತೆ ಆಶಿಸಿದ ಅವರು, ಹಿಂದಿನ ಚುನಾವಣೆಯಲ್ಲಿ ಜಾತಿಗಳನ್ನು ಎತ್ತಿಕಟ್ಟಿ ಚುನಾವಣೆ ಗೆಲ್ಲಲಾಗಿದೆ. ರಾಜ್ಯದ ಅಧ್ಯಕ್ಷನಾದ ಬಳಿಕ ಹಿರಿಯರಿಗೆ ಪೋನ್ ಮಾಡಿ ಸಹಕಾರ ನೀಡುವಂತೆ ಕೋರಿದ್ದೀರಿ ಇದಕ್ಕಾಗಿ ಅಭಿನಂದನೆ ಎಂದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಮುಂದಿನ ದಿನಗಳಲ್ಲಿ ಸ್ವಂತ ಬಲದ ಮೇಲೆ ಸರ್ಕಾರ ರಚನೆ ಮಾಡುವಷ್ಟು ಮಟ್ಟಿಗೆ ಪಕ್ಷ ಸಂಘಟನೆ ಮಾಡಬೇಕಿದೆ. ಕಾರ್ಯಕರ್ತರ ಪಡೆ ಹಾಗೂ ಯಡಿಯೂರಪ್ಪನವರ ಆಶೀರ್ವಾದ ಇದೆ ಎಂದರು.

ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ, ಇಡೀ ದೇಶದಲ್ಲಿ ಮೋದಿ ವಿರುದ್ಧದ ಎಲ್ಲಾ ಶಕ್ತಿಗಳು ಒಟ್ಟಾಗಿ ಮೂರನೇ ಬಾರಿ ಪ್ರಧಾನಿಯಾಗದಂತೆ ತಡೆಯಲು ಸಂಚುಮಾಡುತ್ತಿವೆ. ಆದರೆ ನಮ್ಮ ಬಿಜೆಪಿ ಕಾರ್ಯಕರ್ತರ ಪರಿಶ್ರಮದಿಂದ ಮತ್ತೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಮೋದಿಯೇ ಪ್ರಧಾನಿಯಾಗಲಿದ್ದಾರೆ. ರಾಜ್ಯದಲ್ಲಿ ಎಲ್ಲಾ ಕ್ಷೇತ್ರಗಳನ್ನೂ ಗೆಲ್ಲುತ್ತೇವೆ ಎಂದು ಹೇಳಿದರು.

ಅತ್ಯಂತ ಕ್ಲಿಷ್ಟಕರವಾದ ಆರ್ಟಿಕಲ್ 370 ರದ್ದತಿ, ರಾಮಮಂದಿರ ನಿರ್ಮಾಣ ಸೇರಿದಂತೆ ದೇಶದ ಜನ ಮೆಚ್ಚುವ ರೀತಿಯಲ್ಲಿ ಆಡಳಿತ ನೀಡಿದ್ದಾರೆ. ಪಿಎಂ ವಿಶ್ವಕರ್ಮ ಯೋಜನೆಯಡಿ 20 ಕ್ಕೂ ಹೆಚ್ಚು ಕರಕುಶಲ ವೃತ್ತಿ ನಿರತರಿಗೆ ಸ್ವಾವಲಂಬಿಗಳಾಗಲು ಯೋಜನೆ ರೂಪಿಸಿದ್ದಾರೆ. ಕರ್ನಾಟಕದಿಂದ ಆರೂವರೆ ಲಕ್ಷ ಜನ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಶಿವಮೊಗ್ಗದಿಂದ ಕೇವಲ 2 ಸಾವಿರ ಅರ್ಜಿ ಸಲ್ಲಿಕೆಯಾಗಿದ್ದು, ಇನ್ನು ಒಂದು ವಾರ ಸಮಯವಿದೆ. ನಿರುದ್ಯೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಿ ಎಂದು ತಿಳಿಸಿದರು.

ದೇಶದಲ್ಲಿ ಇದುವರೆಗೆ ಆಗದಷ್ಟು ಹೆದ್ದಾರಿ ಅಭಿವೃದ್ಧಿ, ವಿಮಾನ ನಿಲ್ದಾಣಗಳು. ರೈಲ್ವೇ, ಸೇತುವೆಗಳು ನಿರ್ಮಾಣಗೊಂಡಿವೆ. ಮತ್ತೊಮ್ಮೆ ಮೋದಿ ಬರಲು ರಾಜ್ಯದಿಂದ ವಿಜಯೇಂದ್ರ ಸಾರಥ್ಯದಲ್ಲಿ ಎಲ್ಲಾ 28 ಲೋಕಸಭೆ ಕ್ಷೇತ್ರಗಳಲ್ಲಿಯೂ ರಾಜ್ಯದ ಜನ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಶಿವಮೊಗ್ಗ ಗ್ರಾಮಾಂತರ, ಸಾಗರ ಕ್ಷೇತ್ರಗಳಲ್ಲಿ ಆಕಸ್ಮಿಕ ಸೋಲು ಕಂಡಿದ್ದೇವೆ. ಆದರೆ, ಮತಗಳು ಹೆಚ್ಚಿಗೆ ಲಭ್ಯವಾಗಿವೆ. ಭದ್ರಾವತಿಯಲ್ಲಿ ನಮ್ಮ ಶಕ್ತಿ
ವೃದ್ಧಿಸಿಕೊಂಡಿದ್ದೇವೆ. ಹಾಗಾಗಿ ಲೋಕಸಭೆ ಚುನಾವಣೆಯಲ್ಲಿಯೂ ಗೆಲುವಿನ ಬಗ್ಗೆ ಸಂಶಯವಿಲ್ಲ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ. ಸಿದ್ಧರಾಮಣ್ಣ ಮಾತನಾಡಿ, ಎ.ಕೆ. ಸುಬ್ಬಯ್ಯ ಮೊದಲ ಅಧ್ಯಕ್ಷರಾಗಿ ಪಾರ್ಟಿ ಕಟ್ಟಿದರು. ಬಿ.ಎಸ್. ಯಡಿಯೂರಪ್ಪ ರಾಜ್ಯಾಧ್ಯಕ್ಷರಾದ ನಂತರ ಒಂದು ಸೀಟಿನಿಂದ ಖಾತೆ ಆರಂಭಿಸಿ ಬಿಜೆಪಿಗೆ ಅಧಿಕಾರಕ್ಕೆ ತರುವವರಗೆ ಅವಿರತವಾಗಿ ಶ್ರಮಿಸಿದರು. ಈಗ ಅವರ ಮಗ ವಿಜಯೇಂದ್ರ ಚುಕ್ಕಾಣಿ ಹಿಡಿದಿದ್ದಾರೆ. ಅವರು ಗೆಲುವಿನ ನಾಗಾಲೋಟವನ್ನು ಮುಂದುವರೆಸಲಿದ್ದಾರೆ ಎಂದರು.

ಶಾಸಕ ಎಸ್.ಎನ್. ಚನ್ನಬಸಪ್ಪ ಮಾತನಾಡಿ, ಶಿವಮೊಗ್ಗದಿಂದ ಜೀತದಾಳುಗಳ ಮುಕ್ತಿ ಹೋರಾಟಕ್ಕೆ ಬಿ.ಎಸ್. ಯಡಿಯೂರಪ್ಪ ಅವರು ಚಾಲನೆ ನೀಡಿ, ಮೊದಲ ಬಾರಿಗೆ ಶಿವಮೊಗ್ಗದಿಂದ ಬೆಂಗಳೂರು ಚಲೋ ಪಾದಯಾತ್ರೆ ನಡೆಸಿದ್ದರು. ಎಲ್.ಕೆ. ಅಡ್ವಾಣಿ ಅವರು ಇದನ್ನು ಉದ್ಘಾಟಿಸಿದ್ದರು. ರಾಮ ಮಂದಿರ ಯಾತ್ರೆ ಬಂದಾಗಲೂ ಶಿವಮೊಗ್ಗದಲ್ಲಿ ಲಕ್ಷಾಂತರ ಜನ ಸೇರಿ ಹೋರಾಟಕ್ಕೆ ಬೆಂಬಲ ನೀಡಿದ್ದಲ್ಲದೇ, ಪಕ್ಷ ಬೆಳೆಯುತ್ತಾಸಾಗಿತು. ಅಧಿಕಾರ ಹಿಡಿಯಿತು. ಈಗ ಕಾಕತಾಳೀಯ ಎನ್ನುವಂತೆ ನಾವೆಲ್ಲರೂ ಕನಸು ಕಂಡಿದ್ದ ರಾಮಮಂದಿರ ನಿರ್ಮಾಣ ಪೂರ್ಣಗೊಂಡಿದ್ದು, ವಿಜಯೇಂದ್ರ ಅವರು ಅಧ್ಯಕ್ಷರಾದಾಗಲೇ ಅದರ ಉದ್ಘಾಟನೆ ಆಗುತ್ತಿದೆ. ಮೋದಿ ಮತ್ತೆ ಪ್ರಧಾನಿಯಾಗಲು ಎಲ್ಲಾ ಕಾರ್ಯಕರ್ತರು ಪರಿಶ್ರಮ ಪಟ್ಟು ರಾಜ್ಯದ 28 ಕ್ಷೇತ್ರಗಳಲ್ಲೂ ಗೆಲ್ಲಿಸಲಿದ್ದೇವೆ ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ. ಭಾನುಪ್ರಕಾಶ್ ಮಾತನಾಡಿ, ಎದ್ದು ನಿಲ್ಲು ವೀರ ದೇಶ ಕರೆದಿದೆ. ಪಡೆಯ ಕಟ್ಟು ಧೀರ ಸಮಯ ಬಂದಿದೆ ಎನ್ನುವಂತೆ ಬಿಎಸ್. ಯಡಿಯೂರಪ್ಪ ಹಾಕಿಕೊಟ್ಟ ಬುನಾದಿಯಲ್ಲಿ ಇನ್ನೂ ಗಟ್ಟಿಯಾದ ಕೋಟೆ ಕಟ್ಟಲು ವಿಜಯೇಂದ್ರ ಹೆಚ್ಚಿನ ಕೆಲಸ ಮಾಡಬೇಕಿದೆ. ನಮ್ಮೆಲ್ಲರ ಸಹಕಾರ ಇದೆ ಎಂದರು.

ಮಾಜಿ ಶಾಸಕ ಕೆ.ಬಿ. ಅಶೋಕ್ ನಾಯ್ಕ್ ಮಾತನಾಡಿ,ಹುಲಿಯ ಹೊಟ್ಟೆಯಲ್ಲಿ ಹುಲಿಯೇ ಹುಟ್ಟುವುದು. ಎನ್ನುವುದು ಸಾಬೀತಾಗಿದ್ದು, ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಮೇಲೆ ರಾಜ್ಯದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದರು.

ಬಿಜೆಪಿ ಮಹಿಳಾ ನಾಯಕಿ ಭಾರತಿ ಶೆಟ್ಟಿ ಮಾತನಾಡಿ, ವೇದಿಕೆಯಲ್ಲಿ ಮೂವರು ರಾಜ್ಯಾಧ್ಯಕ್ಷರು ಕುಳಿತಿದ್ದಾರೆ. ಎಲ್ಲಾ ನಾಯಕರು ಒಗ್ಗಟ್ಟಾಗಿ ವಿಜಯೇಂದ್ರ ಅವರನ್ನು ಆಶೀರ್ವದಿಸಿದ್ದು, ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಿದೆ. ಯಡಿಯೂರಪ್ಪ ಬದುಕು ತೆರೆದ ಪುಸ್ತಕವಾಗಿದ್ದು, ಕಾರ್ಯಕರ್ತರಿಗೆ ಸ್ಪೂರ್ತಿ ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಬಿ.ವೈ.ವಿಜಯೇಂದ್ರ, ಇಂದು ಅಧ್ಯಕ್ಷನಾಗಿದ್ದೇನೆ ಎಂದರೆ ಕೇಂದ್ರ ನಾಯಕರು ಹಾಗೂ ಜಿಲ್ಲೆಯ ಸಂಘ ಪರಿವಾರ ಹಾಗೂ ರಾಜ್ಯ ನಾಯಕರ ಆಶೀರ್ವಾದದಿಂದ ಸಾಧ್ಯವಾಗಿದೆ ಎಂದರು.
ರಾಷ್ಟ್ರೀಯ ಅಧ್ಯಕ್ಷರು ಕರೆ ಮಾಡಿ ರಾಜ್ಯದ ಜವಾಬ್ದಾರಿ ನೀಡುವುದಾಗಿ ಹೇಳಿದ್ದರು. ಇದ ವಿಶ್ರಮಿಸದೆ ಪಕ್ಷ ಗೆಲ್ಲಿಸುತ್ತೇನೆರಿಂದ ಗಾಬರಿಯೂ ಆಯಿತು, ಖುಷಿಯೂ ಆಯಿತು. ತಕ್ಷಣ ತಂದೆಗೆ ಸಹಿ ನೀಡಿ ವಿಷಯ ತಿಳಿಸಿದೆ. ತಕ್ಷಣ ಅವರು ಪ್ರತಿಕ್ರಿಯಿಸಿ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಮನೆಯಲ್ಲಿ ಒಂದು ದಿನವೂ ಕೂರದೆ ಲೋಕಸಭೆಯ 28 ಸ್ಥಾನ ಗೆಲ್ಲಿಸುವವರೆಗೂ ವಿರಮಿಸದಂತೆ ಹೇಳಿದ್ದಾರೆ. ಹೀಗಾಗಿ ತಕ್ಷಣವೇ ಪ್ರವಾಸ ಆರಂಭ ಮಾಡಿದ್ದೇನೆ ಎಂದರು.


ಮೊದಲೂ ಬೂತ್ ಅಧ್ಯಕ್ಷರ ಮನೆಗೆ ಹೋಗಿ ಅವರಿಗೆ ಸಿಹಿ ನೀಡಿ ಕೆಲಸ ಮಾಡುವಂತೆ ಕೋರಿದ್ದೇನೆ. ಈಗ ಹಿರಿಯರೆಲ್ಲಾ ಹೇಳಿದಂತೆ ನಡೆದುಕೊಳ್ಳುತ್ತೇನೆ. ಎಲ್ಲಾ ಹಿರಿಯರ ಆಶೀರ್ವಾದ ಪಡೆದು ಪಕ್ಷ ಸಂಘಟನೆ ಮಾಡುತ್ತೇನೆ. ತಂದೆ 46 ವರ್ಷಕ್ಕೆ ರಾಜ್ಯಾಧ್ಯಕ್ಷ ಆಗಿದ್ದರು. ನಾನು 49 ಕ್ಕೆ ರಾಜ್ಯಾಧ್ಯಕ್ಷನಾಗಿದ್ದೇನೆ. 28 ಲೊಕಸಭೆ ಸ್ಥಾನ ಗೆಲ್ಲಿಸುವುದೇ ನನ್ನ ಗುರಿ ಎಂದರು.
ರಾಜ್ಯದ ಜನ ದರಿದ್ರ ಸರ್ಕಾರ ಬಂದಿದೆ ಎಂದು ಶಾಪ ಹಾಕುತ್ತಿದ್ದಾರೆ. ನಮ್ಮ ಮೇಲೆ ಸುಮ್ಮನೆ ಶೇ.40 ಆರೋಪ ಮಾಡಿ ಜನರ ಅನುಕಂಪ ಪಡೆದವರು.
ಕಾಂತರಾಜ್ ವರದಿ ಸ್ವೀಕರಿಸಲು ಸರ್ಕಾರ ತುದಿಗಾಲಲ್ಲಿ ಇದೆ. ಆದರೆ ವಿರುದ್ಧವಾಗಿ ಸಹಿ ಸಂಗ್ರಹವಾಗುತ್ತಿದೆ. ನಾನು ಜಾತಿ ಗಣತಿ ವಿರುದ್ಧವಿಲ್ಲ. ಸಿದ್ದರಾಮಯ್ಯ ಅಂದು ಏಕೆ ನೀವು ಸ್ವೀಕರಿಸಿಲ್ಲ. ಎಸಿ ರೂಂನಲ್ಲಿ ಮಾಡಿದ ಅರೆಬರೆ ಬೆಂದ ಅನ್ನದಂತಹ ವರದಿ ಇದಾಗಿದೆ. ಹೀಗಾಗಿ ಎಲ್ಲಾ ಸಮುದಾಯಕ್ಕೂ ನ್ಯಾಯ ಕೊಡುವ ವರದಿ ಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಬಿ.ವೈ. ವಿಜಯೇಂದ್ರ ಅವರನ್ನು ಅಭಿನಂದಿಸಲಾಯಿತು.
ವೇದಿಕೆಯಲ್ಲಿ ಶಾಸಕರಾದ ಎಸ್. ರುದ್ರೇಗೌಡ, ಡಿ.ಎಸ್. ಅರುಣ್, ಬಿ.ಜಿ. ಪಾಟೀಲ್, ಪಕ್ಷದ ಪ್ರಮುಖರಾದ ಹರತಾಳು ಹಾಲಪ್ಪ, ಗಿರೀಶ್ ಪಟೇಲ್, ಬಿ. ಸ್ವಾಮಿರಾವ್, ಆರ್.ಎಂ. ಹೆಗ್ಗಡೆ, ಮೋನಪ್ಪ ಭಂಡಾರಿ, ಗಣೇಶ ರಾಯರು, ಎಸ್. ದತ್ತಾತ್ರಿ, ಗುರುಮೂರ್ತಿ, ಬಿಜೆಪಿನಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಇದ್ದರು.

Leave A Reply

Your email address will not be published.

error: Content is protected !!