ಎರಡು ಗುಂಪುಗಳ ನಡುವೆ ಗಲಾಟೆ ; ಮೂವರಿಗೆ ಚಾಕು ಇರಿತ !

0 388

ಶಿವಮೊಗ್ಗ: ವೈಯಕ್ತಿಕ ಕಾರಣಕ್ಕಾಗಿ ಯುವಕರ ನಡುವೆ ಗಲಾಟೆ ನಡೆದು ಮೂವರು ಚಾಕು ಇರಿತಕ್ಕೆ ಒಳಗಾದ ಘಟನೆ ನಿನ್ನೆ ರಾತ್ರಿ ಟಿಪ್ಪುನಗರದ ಬಳಿ ನಡೆದಿದೆ.

ಟಿಪ್ಪುನಗರದ ಸಮೀರ್ (23), ಫರಾಜ್(24), ಜೆ.ಪಿ.ನಗರದ ಮೊಹಮದ್ ಖಾಲಿದ್ ಅಲಿಯಾಸ್ ಸೋನು (19) ಚಾಕು ಇರಿತದಿಂದ ಗಾಯಗೊಂಡವರು. ಮೂವರು ಶಿವಮೊಗ್ಗ ರೌಡಿಶೀಟರ್ಗಳು. 15 ದಿನದ ಹಿಂದೆ ರೌಡಿಶೀಟರ್ಗಳಾದ ಸಮೀರ್, ಫರಾಜ್ ಮತ್ತು ಸಲ್ಲು, ಸೆಬು, ಸೋನು, ಕತ್ರು ಗ್ಯಾಂಗ್ ನಡುವೆ ಗಲಾಟೆ ನಡೆದಿತ್ತು.

ತುಂಗಾ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ.

Leave A Reply

Your email address will not be published.

error: Content is protected !!