ಎಸ್ ಬಂಗಾರಪ್ಪನವರ ಜನ್ಮ ದಿನಾಚರಣೆ ಅಂಗವಾಗಿ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಣೆ

0 204


ಹೊಸನಗರ: ರಾಜ್ಯ ಕಂಡ ನಾಯಕರುಗಳಲ್ಲಿ ದಿ|| ಎಸ್ ಬಂಗಾರಪ್ಪನವರು ಒಬ್ಬ ಧೀಮಂತ ನಾಯಕರು ಎಂದು ಪಟ್ಟಣ ಪಂಚಾಯತಿ ಸದಸ್ಯ ಹಾಲಗದ್ದೆ ಉಮೇಶ್‌ರವರು ಹೇಳಿದರು.

ಮಾಜಿ ಮುಖ್ಯಮಂತ್ರಿ ದಿ|| ಎಸ್ ಬಂಗಾರಪ್ಪನವರ 91ನೇ ಜನ್ಮ ದಿನಾಚರಣೆಯ ಅಂಗವಾಗಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಒಳ ಹಾಗೂ ಹೊರ ರೋಗಿಗಳಿಗೆ ಹಣ್ಣು, ಬ್ರೆಡ್‌ಗಳನ್ನು ವಿತರಿಸಿ ಮಾತನಾಡಿ, ಎಸ್ ಬಂಗಾರಪ್ಪನವರು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಬಡವರಿಗೆ ದೇವರಾಗಿ ದೀನ ದಲಿತರ ಹಿಂದುಳಿದವರ ಉದ್ದಾರಕ್ಕಾಗಿ ತನ್ನ ಪ್ರಾಣವನ್ನೆ ಮುಡಿಪಾಗಿಟ್ಟಿದ್ದರು.

ಇವರು ಅಂದು ಜಾರಿಗೆ ತಂದಿರುವ ಬಗರ್‌ಹುಕುಂ, ಆರಾಧನಾ ಕಾರ್ಯಕ್ರಮಗಳು ಶುಶ್ರೂತ ಕಾರ್ಯಕ್ರಮಗಳು ಇಂದಿಗೂ ಜಾರಿಯಲ್ಲಿದ್ದು ಇವರ ಕಾಲದಲ್ಲಿ ಅನೇಕ ನಿರುದ್ಯೋಗಿಗಳಿಗೆ ಸರ್ಕಾರಿ ಕೆಲಸ ನೀಡಿದ್ದು ಅವರ ಭಾವಚಿತ್ರ ಇಂದು ಕೆಲವರ ಮನೆಯಲ್ಲಿ ಪೂಜಿಸುತ್ತಿದ್ದಾರೆ. ಇವರು ಕರ್ನಾಟಕದ ಜನರ ಆಶಾಕಿರಣರಾಗಿದ್ದು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ ಎಂದರು.


ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯ ಆರ್ ಗುರುರಾಜ್, ಸುಧೀರ್, ಮನು, ಶ್ರೀನಿವಾಸ್, ನಾಗಪ್ಪ, ಹರೀಶ ಹೆಚ್. ಕೆ, ಹೆಚ್.ಎಂ. ನಿತ್ಯಾನಂದ, ರಮೇಶ್, ಉಬೆದುಲ್ಲಾ, ಮುರುಳಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!