ಏಕತೆ, ವೃತ್ತಿ ಪಾವಿತ್ರ್ಯತೆ, ಪ್ರಾಮಾಣಿಕತೆ ಇಲ್ಲದಿದ್ದರೆ ಸಂಘ-ಸಂಸ್ಥೆಗಳು ಬೆಳೆಸಲು ಸಾಧ್ಯವಿಲ್ಲ ; ಎನ್ ದತ್ತಾತ್ರೇಯ ಉಡುಪ

0 198


ಹೊಸನಗರ: ಯಾವುದೇ ಸಂಘ ಸಂಸ್ಥೆಗಳು ಬೆಳೆಯ ಬೇಕಾದರೆ ಸಂಘದಲ್ಲಿರುವ ಸದಸ್ಯರು ಒಗ್ಗಟ್ಟು ಪ್ರದರ್ಶನ-ತಾವು ಮಾಡುವ ಕೆಲಸದಲ್ಲಿ ಏಕತೆ, ವೃತ್ತಿಪಾವಿತ್ರ್ಯತೆ, ಪ್ರಾಮಾಣಿಕತೆ ಇದ್ದಲ್ಲಿ ಮಾತ್ರ ತಾವು ಮಾಡುವ ಕೆಲಸದಲ್ಲಿ ಆತ್ಮತೃಪ್ತಿ ಇರುವುದರ ಜೊತೆಗೆ ಸಂಘ-ಸಂಸ್ಥೆಗಳನ್ನು ಬೆಳೆಸಲು ಸಾಧ್ಯ ಎಂದು ರಾಮಕೃಷ್ಣ ಮೆಡಿಕಲ್ಸ್ ಮಾಲೀಕರಾದ ಎನ್ ದತ್ತಾತ್ರೇಯ ಉಡುಪರವರು ಹೇಳಿದರು.


ಪಟ್ಟಣದ ಗಾಯತ್ರಿ ಮಂದಿರದಲ್ಲಿ ಶಿವಮೊಗ್ಗ ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ವತಿಯಿಂದ ಹೊಸನಗರದಲ್ಲಿ ಮಾಸಿಕ ಸಭೆ ನಡೆಸಿ ಮಾತನಾಡಿ, ಸಂಘದ ಸದಸ್ಯರು ತಾವು ಮಾಡುವ ಉದ್ಯೋಗದಲ್ಲಿ ಸ್ಪರ್ಧೆ ಇದ್ದೇ ಇರುತ್ತದೆ. ಅದನ್ನು ಉದ್ಯೋಗದಲ್ಲಿ ಮಾತ್ರ ತೋರಿಸಬೇಕು. ಆದರೆ ಅದನ್ನು ಸಂಘದ ಒಳಗೆ-ಹೊರಗೆ ತೋರಿಸಬಾರದು ಸಂಘದ ಸದಸ್ಯರು ಒಗ್ಗಟ್ಟಿನಿಂದ ಸಂಘದ ಕಾರ್ಯಚಟುವಟಿಕೆಯಲ್ಲಿ ಭಾಗವಹಿಸಬೇಕು ಹಾಗೂ ಸಂಘದ ಏಳಿಗೆಗಾಗಿ ಶ್ರಮಿಸಬೇಕೆಂದರು.


ಈ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಅಬ್ದುಲ್ ಕಯ್ಯೂಮ್‌ರವರು ವಹಿಸಿ ಮಾತನಾಡಿ, ಸಂಘದ ಏಳಿಗೆಗೆ ಎಲ್ಲರೂ ಶ್ರಮಿಸಬೇಕು ಸಂಘದ ಸದಸ್ಯರಲ್ಲಿ ಬಿನ್ನಾಭಿಪ್ರಾಯ ಬಾರರಂತೆ ನೋಡಿಕೊಳ್ಳಬೇಕೆಂದರು.


ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಕಾರ್ಯದರ್ಶಿ ಚಂದ್ರಶೇಖರ್, ಸಹ ಕಾರ್ಯದರ್ಶಿ ಚಂದ್ರಶೇಖರ್, ಖಾಜಾಂಚಿ ಕುಮಾರ್, ವಿನಾಯಕ, ಸತೀಶ್, ಗೋಪಾಲ್, ವೆಂಕಟೇಶ್, ಮಂಜುನಾಥ್, ಪ್ರಕಾಶ್, ರುದ್ರಪ್ರಸಾದ್, ದೀಪಕ್ ಮೆಡಿಕಲ್ಸ್ ಮಾಲೀಕ ದೀಪಕ್ ಡೊಮೆಲ್ಲೋ, ರಾಘವೇಂದ್ರ ಮೆಡಿಕಲ್ಸ್ ಮಾಲೀಕ ಡೊಮೆಲ್ಲೋ, ಕಾರ್ತಿಕ್ ಮೆಡಿಕಲ್ಸ್ ಮಾಲೀಕ ವೀರಪಾಕ್ಷಪ್ಪ, ಕಾಡುವಳ್ಳಿ ಮೆಡಿಕಲ್ಸ್ ಮಾಲೀಕರಾದ ವಿನಯ್ ಕುಮಾರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.


ರಾಮಕೃಷ್ಣ ಮೆಡಿಕಲ್ಸ್ ಮಾಲೀಕರಾದ ದತ್ತಾತ್ರೇಯ ಉಡುಪರವರ ಜನ್ಮದಿನಾಚರಣೆಯನ್ನು ಈ ಸಂದರ್ಭದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಕು|| ಯಶಸ್ವಿನಿಯವರನ್ನು ಅಭಿನಂದಿಸಲಾಯಿತು.

Leave A Reply

Your email address will not be published.

error: Content is protected !!