ಏಷ್ಯನ್ ಪ್ಯಾರ ಒಲಂಪಿಕ್ಸ್‌ನ ಅಂಧರ ಚೆಸ್ ಪಂದ್ಯಾವಳಿಯಲ್ಲಿ ಕಂಚಿನ ಪದಕ

0 52

ಶಿವಮೊಗ್ಗ: ಏಷ್ಯನ್ ಪ್ಯಾರ ಒಲಂಪಿಕ್ಸ್‌ನ ಅಂಧರ ಚೆಸ್ ಪಂದ್ಯಾವಳಿಯ ಟೀಮ್ ವಿಭಾಗದಲ್ಲಿ ನಗರದ ಗಾಂಧಿ ಬಜಾರ್‌ನ ಕುಮಾರಿ ವೃತ್ತಿ ಚೈನ್ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದಿದ್ದು, ರಾಜ್ಯ ಹಾಗೂ ರಾಷ್ಟ್ರಕ್ಕೆ ಮತ್ತು ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.


ಈ ಅಂಧರ ಚೆಸ್‌ನಲ್ಲಿ ವಿವಿಧ 13 ದೇಶಗಳ ಸ್ಪರ್ಧಿಗಳು ಸ್ಪರ್ಧಿಸಿದ್ದರು. ವೃತ್ತಿ ಜೈನ್ ಸೇರಿದಂತೆ 3 ಸ್ಪರ್ಧಿಗಳು ಭಾರತವನ್ನು ಪ್ರತಿನಿಧಿಸಿ ಈ ಸಾಧನೆ ಮಾಡಿದ್ದಾರೆ.
ನಗರದ ಡಿವಿಎಸ್ ಸಿನೀಯರ್ ಕಾಲೇಜಿನ ಪ್ರಥಮ ಬಿ.ಎ. ವಿದ್ಯಾರ್ಥಿನಿಯಾಗಿರುವ  ಈ ಪ್ರತಿಭಾನ್ವಿತ ಸಾಧಕಿ ಗಾಂಧಿ ಬಜಾರ್‌ನ ಸಗನ್‌ಲಾಲ್ ಜೈನ್ ಹಾಗೂ ಮಧು ಜೈನ್ ದಂಪತಿಗಳ ಹೆಮ್ಮೆಯ ಪುತ್ರಿ.


ಈ ಪ್ರತಿಭಾನ್ವಿತೆ ಚೆಸ್‌ನೊಂದಿಗೆ ಓದಿನಲ್ಲಿ  ಸಹ ಮುಂದಿದ್ದು, ದ್ವಿತೀಯ ಪಿಯುಸಿಯಲ್ಲಿ ಶೇ.97.5 ಅಂಕ ಪಡೆದಿದ್ದಳು. ಸಂಪೂರ್ಣ ಅಂಧೆಯಾಗಿರುವ ಈಕೆಗೆ ಚಿಕ್ಕನಿಂದಲೂ ಚೆಸ್ ಆಟದ ಬಗ್ಗೆ ಆಸಕ್ತಿ. ನಗರದ ನಳಂದ ಅಕಾಡೆಮಿಯ ಅಧ್ಯಕ್ಷ ಶ್ರೀಕೃಷ್ಣ ಉಡುಪ ಈಕೆಯ ಚೆಸ್ ತರಬೇತುದಾರರು.


ಈ ಪ್ರತಿಭಾನ್ವಿತೆಯ ಸಾಧನೆಗೆ ಜೈನ ಸಮಾಜದ ಗಣ್ಯರಾದ ಎಸ್. ಫುಕ್‌ರಾಜ್, ಮಾಂಗಿಲಾಲ್ ರಮಾಣಿ, ವಿನೋದ್‌ಕುಮಾರ್ ಜೈನ್, ಜಿನರಾಜ್‌ಪುಂಜ, ಷಾ ಚಂಪಾಲಾಲ್ ಸೇರಿದಂತೆ ಹಲವು ಗಣ್ಯರು ಅಭಿನಂದಿಸಿದ್ದಾರೆ.

ಇನ್ನೂ ಏಷ್ಯನ್ ಪ್ಯಾರ ಒಲಂಪಿಕ್ಸ್‌ನ ಅಂಧರ ಚೆಸ್‌ನಲ್ಲಿ ವಿನೋಬನಗರದ ಕಿಶನ್ ಗಂಗೂಲಿ 2 ಕಂಚಿನ ಪದಕ ಪಡೆದಿದ್ದಾರೆ.
ಈ ಚೆಸ್ ಪಂದ್ಯಾವಳಿಯಲ್ಲಿ 13 ದೇಶದ ಸ್ಪರ್ಧಿಗಳಿದ್ದು, ಈ ಪೈಕಿ ಕಿಶನ್ ವೈಯಕ್ತಿಕ ವಿಭಾಗದಲ್ಲಿ 3ನೇ ಸ್ಥಾನದೊಂದಿಗೆ ಕಂಚಿನ ಪದಕ ಪಡೆಯುವ ಮೂಲಕ ಶಿವಮೊಗ್ಗ ಜಿಲ್ಲೆ ಹಾಗೂ ಭಾರತ ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಚೆಸ್ ಟೀಮ್ ಆಟದಲ್ಲೂ ಕಿಶನ್ ಗಂಗೂಲಿ 3ನೇ ಸ್ಥಾನದೊಂದಿಗೆ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಕಿಶನ್ ಗಂಗೂಲಿ ವಿನೋಬನಗರದ ಗೀತಾ ಇವರ ಪುತ್ರ. ನಳಂದ ಚೆಸ್ ಅಕಾಡೆಮಿಯಲ್ಲಿ ತರಬೇತಿ ಪಡೆದವರು.

Leave A Reply

Your email address will not be published.

error: Content is protected !!