ಐವೈಸಿ ವಕ್ತಾರರಾಗಿ ಆದರ್ಶ ಹುಂಚದಕಟ್ಟೆ ಪುನರ್ ಆಯ್ಕೆ

0 155

ತೀರ್ಥಹಳ್ಳಿ: ರಾಷ್ಟ್ರೀಯ ಯುವ ಕಾಂಗ್ರೆಸ್ (ಐವೈಸಿ) ವಕ್ತಾರರಾಗಿ ಆದರ್ಶ ಹುಂಚದಕಟ್ಟೆ ಪುನರ್ ಆಯ್ಕೆಯಾಗಿದ್ದಾರೆ.


ಭಾರತೀಯ ರಾಷ್ಟ್ರೀಯ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ನೇಮಕಗೊಳಿಸಿ ಆದೇಶಿಸಿದ್ದಾರೆ. ಕರ್ನಾಟಕ ರಾಜ್ಯದಿಂದ ಆಯ್ಕೆಯಾದ ಆದರ್ಶ ಹುಂಚದಕಟ್ಟೆ ಈ ಹಿಂದೆ 2 ಅವಧಿಗೆ ವಕ್ತಾರರಾಗಿ ಉತ್ತಮ ಸಂಘಟಕರಾಗಿ ಗುರುತಿಸಿಕೊಂಡಿದ್ದಾರೆ.


ದೇಶದ ವಿವಿಧ ರಾಜ್ಯಗಳ 13 ಕ್ರಿಯಾಶೀಲ, ಯುವ ನಾಯಕರನ್ನು ಗುರುತಿಸಿ ಈ ಜವಾಬ್ದಾರಿ ನೀಡಲಾಗಿದೆ. ಕರ್ನಾಟಕ ರಾಜ್ಯದಿಂದ ಆದರ್ಶ ಹುಂಚದಕಟ್ಟೆ ಅವರೊಬ್ಬರಿಗೆ ಮಾತ್ರ ಈ ಅವಕಾಶ ಲಭಿಸಿದೆ.

Leave A Reply

Your email address will not be published.

error: Content is protected !!