ಕಂಕಳ್ಳಿ ಗವಿಸಿದ್ದೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ನವದುರ್ಗಾದೇವಿಯ ಶರನ್ನವರಾತ್ರಿ ಮಹೋತ್ಸವ ಸುಸಂಪನ್ನ

0 153

ರಿಪ್ಪನ್‌ಪೇಟೆ: ಕಂಕಳ್ಳಿ ಶ್ರೀ ಗವಿಸಿದ್ದೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ನವದುರ್ಗಾದೇವಿಯ ಶರನ್ನವರಾತ್ರಿ ಮಹೋತ್ಸವ ಮತ್ತು ಪಲ್ಲಕ್ಕಿ ಉತ್ಸವ ಹಾಗೂ ಚಂಡಿಕಾ ಹೋಮ ಕಾರ್ಯವು ಕಂಕಳ್ಳಿ ಗವಿಸಿದ್ದೇಶ್ವರ ಸ್ವಾಮಿಯ ದೇವಸ್ಥಾನದ ಧರ್ಮಾಧಿಕಾರಿ ಸೋಮಶೇಖರ ಇವರ ನೇತೃತ್ವದಲ್ಲಿ ಸಂಭ್ರಮ ಸಡಗರದೊಂದಿಗೆ ಸಂಪನ್ನಗೊಂಡಿತು.

ತುಮಕೂರು ನಗರದ ಹೊನ್ನೂಡಿಕೆ ಹ್ಯಾಂಡ್ ಚೆಕ್ ಪೋಸ್ಟ್ ಬಳಿ ನಿರ್ಮಿಸಲಾಗಿರುವ ಕಂಕಳ್ಳಿ ಶ್ರೀ ಗವಿಸಿದ್ದೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗಿರುವ `ನವದುರ್ಗಾದೇವಿ’ ಮತ್ತು ಗವಿಸಿದ್ದೇಶ್ವರ ಸ್ವಾಮಿಗೆ ಅಭಿಷೇಕ ಪೂಜೆ ಮತ್ತು ದೇವಿಯ ಪಾರಾಯಣ ಹಾಗೂ ಶರನ್ನವರಾತ್ರಿಯ ಅಂಗವಾಗಿ ದೇವಿಯ ಸನ್ನಿಧಿಯಲ್ಲಿ ಚಂಡಿಕಾಹೋಮ ಜರುಗಿತು. ನಂತರ ದೇವಿಯ ಪಲ್ಲಕ್ಕಿ ಉತ್ಸವವು ಶ್ರದ್ದಾಭಕ್ತಿಯಿಂದ ಜರುಗಿ ದೇವಸ್ಥಾನದ ಮುಂಭಾಗದಲ್ಲಿ ಬನ್ನಿಯನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದರೊಂದಿಗೆ ಶುಭಕೋರಿದರು.

ಇದೇ ಸಂದರ್ಭದಲ್ಲಿ ಸೇವಾ ಕರ್ತರನ್ನು ಮತ್ತು ನಿವೃತ್ತ ನೌಕರವರ್ಗವನ್ನು ದಾನಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಂಕಳ್ಳಿ ಗವಿಸಿದ್ದೇಶ್ವರ ಸ್ವಾಮಿ ದೇವಸ್ಥಾನದ ಧರ್ಮಾಧಿಕಾರಿ ಸೋಮಶೇಖರಯ್ಯ, ಮಳವಳ್ಳಿ ಚನ್ನಪ್ಪ, ಶಿವಪ್ಪ, ಗಂಗಾಧರ, ಕೊಲ್ಲೂರಪ್ಪ ವಾಟಗಾರು, ಕುಕ್ಕಳಲೇ ಈಶ್ವರ, ಕೆರೆಹಿತ್ತಲು ಗಿರೀಶ, ರುದ್ರಪ್ಪ ಕಂಕಳ್ಳಿ, ವೀರಭದ್ರಪ್ಪ ಬಡಗೋಡು ಇನ್ನಿತರರು ಹಾಜರಿದ್ದರು.

Leave A Reply

Your email address will not be published.

error: Content is protected !!