ಕಟ್ಟಡದ ಮೇಲಿಂದ ಬಿದ್ದು ವಿದ್ಯಾರ್ಥಿನಿ ಆತ್ಮಹತ್ಯೆ

0 1,747

ಶಿವಮೊಗ್ಗ : ಶಿವಮೊಗ್ಗದ (Shivamogga) ಶರಾವತಿ ನಗರದಲ್ಲಿರುವ ಆದಿಚುಂಚನಗಿರಿ (Adichunchanagiri) ಕಾಲೇಜು (College) ಕಟ್ಟಡದ ಮೇಲಿಂದ ಬಿದ್ದು ವಿದ್ಯಾರ್ಥಿನಿ (Student)  ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾಳೆ.

ದ್ವಿತೀಯ ಪಿಯುಸಿ ಓದುತ್ತಿದ್ದ ಮೇಘಶ್ರೀ (18) ಮೃತ ವಿದ್ಯಾರ್ಥಿನಿ. ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ವಿದ್ಯಾರ್ಥಿನಿ ಮೇಘಶ್ರೀ ಹೋಮ್ ಸಿಕ್ಗೆ‌ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಮೃತ ಮೇಘಶ್ರೀ ದಾವಣಗೆರೆ ಜಿಲ್ಲೆ ಚೆನ್ನಗಿರಿ ತಾಲೂಕಿನ ಚೆನ್ನಾಪುರ ಗ್ರಾಮದ ನಿವಾಸಿ ಓಂಕಾರಯ್ಯ ಎಂಬುವರ ಪುತ್ರಿ. ಕಾಲೇಜಿನ ಹಾಸ್ಟೆಲ್​ನಲ್ಲಿದ್ದು ವಿದ್ಯಾಭ್ಯಾಸ ನಡೆಸುತ್ತಿದ್ದಳು. ಇಂದು ಬಯಾಲಾಜಿ ಪರೀಕ್ಷೆ ಬರೆಯಲು ಕಾಲೇಜಿಗೆ ಬಂದಿದ್ದಳು. ಪರೀಕ್ಷೆ ನಡುವೆ ವಾಶ್​ ರೂಂಗೆ ಹೋಗುವುದಾಗಿ ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸದ್ಯ ಮೇಘಶ್ರಿ ಅವರ ಮೃತದೇಹವನ್ನು ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಪೋಷಕರ ಆಕ್ರೋಶ
ಮಗಳು ಮೇಘಶ್ರಿ ಸಾವಿನ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೋಷಕರು ಆಗಮಿಸಿದರು. ಈ ವೇಳೆ ಕಾಲೇಜು ಸಿಬ್ಬಂದಿ ಪೋಷಕರನ್ನು ಕಾಲೇಜು ಒಳಗಡೆ ಬಿಡಲಿಲ್ಲ. ಇದರಿಂದ ಕೋಪಗೊಂಡ ಮೇಘಶ್ರೀ ತಂದೆ ಓಂಕಾರಯ್ಯ ಕಾಲೇಜಿನ ಗೇಟ್ ಮುಂಭಾಗ ಆಕ್ರೋಶ ಹೊರಹಾಕಿದರು.

ಪೋಷಕರ ಆಕ್ರೋಶದ ಬಳಿಕ ಕಾಲೇಜು ಸಿಬ್ಬಂದಿ ಗೇಟ್ ಓಪನ್ ಮಾಡಿದರು. ಒಳ ಹೋದ ಪೋಷಕರು ಪ್ರಾಂಶುಪಾಲರ ಚೇಂಬರ್ ಹಾಗೂ ಕಾಲೇಜು ಆವರಣದಲ್ಲಿ ರೋದಿಸಿದರು. ಈ ವೇಳೆ ಮಗಳ ಸಾವಿಗೆ ವಾರ್ಡನ್, ಉಪನ್ಯಾಸಕರು, ಕಾಲೇಜು ಆಡಳಿತ ಮಂಡಳಿ ಕಾರಣ ಎಂದು ಆರೋಪಿಸಿದರು. ನಾಲ್ಕೂವರೆ ಲಕ್ಷ ಫೀಸ್ ಕಟ್ಟಿದ್ದೇವೆ ಎಂದು ಅಳಲು ತೋಡಿಕೊಂಡರು.

ಸ್ಥಳಕ್ಕೆ ಡಿವೈಎಸ್ಪಿ ಸುರೇಶ್ ಭೇಟಿ ನೀಡಿದರು. ಈ ವೇಳೆ ಪೋಷಕರು ಡಿವೈಎಸ್ಪಿ ಅವರ ಜೊತೆ ವಾಗ್ವಾದಕ್ಕೆ ಇಳಿದರು. ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು,  ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

Leave A Reply

Your email address will not be published.

error: Content is protected !!