ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ವಿತರಕರನ್ನು ಪರಿಗಣಿಸುವಂತೆ ಮನವಿ

0 93


ಶಿವಮೊಗ್ಗ : ಜಿಲ್ಲೆಯಲ್ಲಿ ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಈ ಸಾಲಿನಿಂದ ಪತ್ರಿಕಾ ವಿತರಕರನ್ನು ಪ್ರಶಸ್ತಿಗೆ ಪರಿಗಣಿಸುವಂತೆ ಕೋರಿ ಜಿಲ್ಲಾಧಿಕಾರಿ ಸೆಲ್ವಮಣಿಯವರಿಗೆ ಮನವಿ ಒಕ್ಕೂಟದಿಂದ ಮನವಿ ಸಲ್ಲಿಸಿದರು.


 ಶಿವಮೊಗ್ಗ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಹಲವಾರು ವಿತರಕರು ಕನ್ನಡ ಪತ್ರಿಕೆಗಳ ವಿತರಣೆಯಲ್ಲಿ ತೊಡಗಿಸಿಕೊಂಡಿದ್ದು, ಇವರು ಹಲವಾರು ವರ್ಷಗಳಿಂದಲೂ ಈ ವಿತರಣೆ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಇವರುಗಳು ಕನ್ನಡ ಭಾಷೆ, ಬೆಳವಣಿಗೆಯಲ್ಲಿ ಮತ್ತು ಕನ್ನಡಕ್ಕಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟುಕೊಂಡು ಜೀವಿಸಿರುತ್ತಾರೆ. ಆದ್ದರಿಂದ ಇಂತಹ ವ್ಯಕ್ತಿಗಳನ್ನು ಶಿವಮೊಗ್ಗ ಜಿಲ್ಲಾಡಳಿದಿಂದ ಗುರುತಿಸಿ ಕರ್ನಾಟಕ ಸರ್ಕಾರವು ಶಿವಮೊಗ್ಗ ಜಿಲ್ಲಾಡಳಿತ ವತಿಯಿಂದ ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಶಿವಮೊಗ್ಗ ಜಿಲ್ಲೆಯ ಪತ್ರಿಕಾ ವಿತರಕರನ್ನು ಪರಿಗಣಿಸಬೇಕೆಂದು ಮನವಿ ಒತ್ತಾಯಿಸಿದರು.


ಈ ಸಂದರ್ಭದಲ್ಲಿ ಅಧ್ಯಕ್ಷರು ಎನ್. ಮಾಲತೇಶ್, ಉಪಾಧ್ಯಕ್ಷರು ರಾಮು ಜಿ. ಪ್ರಧಾನ ಕಾರ್ಯದರ್ಶಿ ಮುಕ್ತಾ ಅಹ್ಮದ್, ವಿತರಕರಾದ ರಾಜವರ್ಮ ಜೈನ್, ರಾಘವೇಂದ್ರ ರಾವ್, ಮುಸ್ತಾಪ್, ಧನಂಜಯ್, ಅಜೀದುಲ್, ಪಾರ್ತಿಬನ್, ಪಿ. ಕಿರಣ್, ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!