ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷೆಯಾಗಿ ಲೀಲಾ, ಪ್ರಧಾನ ಕಾರ್ಯದರ್ಶಿಯಾಗಿ ಶೈಲಾ ಪ್ರಭು ಆಯ್ಕೆ

0 326

ರಿಪ್ಪನ್‌ಪೇಟೆ: ಇಲ್ಲಿನ ಕಲಾಕೌಸ್ತುಭ ಕನ್ನಡ ಸಂಘದ 30ನೇ ವರ್ಷದ ವಾರ್ಷಿಕೋತ್ಸವ ಮತ್ತು 68ನೇ ಕನ್ನಡ ರಾಜ್ಯೋತ್ಸವ ಸಮಿತಿಯ 2023-24ನೇ ಸಾಲಿನ ನೂತನ ಅಧ್ಯಕ್ಷರಾಗಿ ಲೀಲಾ ಉಮಾಶಂಕರ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಶೈಲಾ ಆರ್. ಪ್ರಭು ಆಯ್ಕೆಯಾಗಿದ್ದಾರೆ.

ಇಲ್ಲಿನ ಗ್ರಾಮ ಪಂಚಾಯ್ತಿ ಸಭಾಭವನದಲ್ಲಿ 2022ನೇ ಸಾಲಿನ ಅಧ್ಯಕ್ಷ ಆರ್.ವಿ.ನಿರೂಪ್ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಳೆದ ವರ್ಷದ ಖರ್ಚು ವೆಚ್ಚದ ಕುರಿತು ಚರ್ಚಿಸಲಾಗಿ ಪ್ರಧಾನ ಕಾರ್ಯದರ್ಶಿಯವರು ಕಾರ್ಯನಿಮಿತ್ತ ಊರಿನಲ್ಲಿರದ ಕಾರಣ ಮುಂದಿನ ಸಭೆಯಲ್ಲಿ ಖರ್ಚಿನ ಲೆಕ್ಕ ಪತ್ರವನ್ನು ಮಂಡಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಿ, 2023ನೇ ಸಾಲಿನ ಕಲಾಕೌಸ್ತುಭ ಕನ್ನಡ ಸಂಘದ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಸೇರಿದಂತೆ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಕಾರ್ಯದರ್ಶಿಗಳಿಗೆ ಇತರ ಪದಾಧಿಕಾರಿಗಳನ್ನು ಮತ್ತು ಇತರ ಉಪಸಮಿತಿಗಳ ಆಯ್ಕೆಯು ಬುಧವಾರ ಸಂಜೆ ನಡೆಸಲಾಗುವುದೆಂದು ತಿಳಿಸಿದರು.

ಸಭೆಯಲ್ಲಿ ಆಳ್ವಾಸ್ ನುಡಿಸಿರಿ ರಿಪ್ಪನ್‌ಪೇಟೆ ಘಟಕದ ಅಧ್ಯಕ್ಷ ಎನ್.ಸತೀಶ್, ಎಂ.ಸುರೇಶ್‌ಸಿಂಗ್, ಎಂ.ಬಿ. ಮಂಜುನಾಥ, ಪದ್ಮಾ ಸುರೇಶ್, ಉಮಾ ಸುರೇಶ್, ರೇಖಾ ರವಿಕುಮಾರ್, ಗೀತಾ, ಲಕ್ಷ್ಮಿ ಶ್ರೀನಿವಾಸ, ಅಶ್ವಿನಿ ರವಿಶಂಕರ್, ಎಸ್.ದಾನಪ್ಪ, ಟಿ.ಆರ್.ಕೃಷ್ಣಪ್ಪ, ಹಿರಿಯಣ್ಣ ಭಂಡಾರಿ, ತ.ಮ.ನರಸಿಂಹ, ರಾಘವೇಂದ್ರ, ರಾಮು ಬಳೆಗಾರ, ಮಂಜುನಾಥ ಗವಟೂರು, ಮುರುಳಿಧರ ಕೆರೆಹಳ್ಳಿ, ಮಂಜುನಾಥ ಆಚಾರ್, ಕೃಷ್ಣೋಜಿರಾವ್ ಇನ್ನಿತರರು ಹಾಜರಿದ್ದರು.

Leave A Reply

Your email address will not be published.

error: Content is protected !!