ಕಳೆದ 11 ವರ್ಷದಿಂದ ನಿರಂತರ ಕಾರ್ಯಕ್ರಮ ; ಪೊಲೀಸರಿಗೆ ರಾಖಿ ಕಟ್ಟಿ ಬಾಗಿನ ಅರ್ಪಣೆ

0 21

ರಿಪ್ಪನ್‌ಪೇಟೆ: ರಾಖಿ ಕಟ್ಟುವುದರಿಂದ ಅಣ್ಣ-ತಂಗಿಯರ ಸಂಬಂಧ ಸಹೋದರತ್ವ ಗಟ್ಟಿಯಾಗಿರುತ್ತದೆಂಬ ನಂಬಿಕೆ ನಮ್ಮ ಹಿಂದುಗಳದ್ದಾಗಿದ್ದು ಪೊಲೀಸರು ಗಣೇಶ ಹಬ್ಬದ ಸಂದರ್ಭದಲ್ಲಿ ರಕ್ಷಣೆಯ ಒತ್ತಡದಲ್ಲಿ ಹಬ್ಬ ಹರಿದಿನಗಳಿಂದ ದೂರವಿರುವ ಪೊಲೀಸರು ಕರ್ತವ್ಯವೇ ದೇವರು ಎನ್ನುವಾಗ ನಾಗರಪಂಚಮಿ ಸಂಪತ್ತು ಶುಕ್ರವಾರ ಮಂಗಳಗೌರಿ ಹಬ್ಬ ಗಣೇಶ ಚತುರ್ಥಿ ಇಂತಹ ಹಬ್ಬಗಳಲ್ಲಿ ಮಹಿಳೆಯರು ತವರು ಮನೆಗೆ ಹೋಗಿ ಅರಿಶಿಣ ಕುಂಕುಮದೊಂದಿಗೆ ಬಾಗಿನ ಪಡೆಯುವುದು ಮುತ್ತೈದೆಯರಿಗೆ ಹಬ್ಬವೋ ಹಬ್ಬ ಆ ಕಾರಣ ಹೊಂಬುಜದ ಗ್ರಾಮ ಪಂಚಾಯ್ತಿ ಸದಸ್ಯೆ ಯಶಸ್ವತಿ ವೃಷಭರಾಜ್ ಜೈನ್ ಕುಟುಂಬ ಸಹಿತ ಕಳೆದ 11 ವರ್ಷದಿಂದ ಈ ಕಾರ್ಯವನ್ನು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ.


ಯಶಸ್ವತಿ ವೃಷಭರಾಜ್ ಜೈನ್ ಕುಟುಂಬದವರು ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮತ್ತು ತೀರ್ಥಹಳ್ಳಿ ಡಿವೈಎಸ್‌ಪಿ ಹಾಗೂ ಹೊಸನಗರ ವೃತ್ತ ನಿರೀಕ್ಷಕರ ಮತ್ತು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿನ ಪಿಎಸ್‌ಐ ಸೇರಿದಂತೆ ಮತ್ತು ಸಿಬ್ಬಂದಿ ವರ್ಗದವರಿಗೆ ರಾಖಿ ಕಟ್ಟಿ ಪರಸ್ಪರ ಹಸ್ತಲಾಘವ ಮಾಡುವುದರೊಂದಿಗೆ ಮಹಿಳಾ ಪೊಲೀಸ್ ಸಿಬ್ಬಂದಿಗೆ ಅರಿಶಿಣ ಕುಂಕುಮ ತಿಲಕವನ್ನಿಟ್ಟು ಬಾಗಿನದೊಂದಿಗೆ ಉಡಿತುಂಬಿ ಶುಭಹಾರೈಸಿದರು.


ಈ ಸಂದರ್ಭದಲ್ಲಿ ಹುಂಚ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷೆ ಕಾಂತಮಣಿ, ಪ್ರಣಮ್ಯಜೈನ್,
ವೃಷಭರಾಜ್‌ಜೈನ್, ಪ್ರವೀಣ ಮಂಡಕ ಹಾಜರಿದ್ದರು.

Leave A Reply

Your email address will not be published.

error: Content is protected !!