ಕಷ್ಟಗಳನ್ನು ಅರಗಿಸಿಕೊಂಡು ಪರಿಪಕ್ವವಾದವರು ಆರ್.ಎಂ.ಎಂ ; ಆಯನೂರು ಮಂಜುನಾಥ್

0 278

ತೀರ್ಥಹಳ್ಳಿ : ಕಷ್ಟಗಳನ್ನು ಅರಗಿಸಿಕೊಂಡು ಪರಿಪಕ್ವವಾದವರು ಆರ್.ಎಂ ಮಂಜುನಾಥ ಗೌಡರು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಹೇಳಿದರು.


ಅವರು ಇಂದು ತೀರ್ಥಹಳ್ಳಿಯಲ್ಲಿ ಸಹಕಾರಿ ವೇದಿಕೆ ವತಿಯಿಂದ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಆರ್.ಎಂ. ಮಂಜುನಾಥ ಗೌಡರಿಗೆ ಹಮ್ಮಿಕೊಳ್ಳಲಾಗಿದ್ದ ತೌರೂರ ಸಂಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಆರ್.ಎಂ. ಮಂಜುನಾಥ ಗೌಡರು ಒಬ್ಬ ಧೀಮಂತ ನಾಯಕರು. ಸಹಕಾರ ಕ್ಷೇತ್ರದ ಧ್ರುವತಾರೆಯಾಗಿದ್ದವರು. ಇನ್ನೇನು ಸಹಕಾರ ಕ್ಷೇತ್ರದಲ್ಲಿ ಅವರ ಅಧ್ಯಾಯ ಮುಗಿದೇ ಹೋಯಿತು ಎನ್ನುವ ಹಂತದಿಂದ ಮೇಲೆ ಎದ್ದು ಬಂದವರು. ಸವಾಲುಗಳನ್ನು ಸ್ವೀಕರಿಸಿದವರು. ಕಷ್ಟಗಳನ್ನು ಅರಗಿಸಿಕೊಂಡು ಸಹಕಾರ ಕ್ಷೇತ್ರದಲ್ಲಿ ಬೆಳಕು ಮೂಡಿಸಿದವರು.


ತೀರ್ಥಹಳ್ಳಿ ಹೇಳಿಕೇಳಿ ಬುದ್ಧಿವಂತರ ರಾಜಕೀಯ ಕ್ಷೇತ್ರ. ಅಂತಹ ಕ್ಷೇತ್ರದಲ್ಲಿ ವರ್ಣರಂಜಿತ ರಾಜಕಾರಣಿಯಾಗಿ ಕಾಣಿಸಿಕೊಂಡವರು ಎಂದರು.
ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಆರ್.ಎಂ. ಮಂಜುನಾಥ ಗೌಡರನ್ನು ಸಹಕಾರ ಕ್ಷೇತ್ರದಿಂದಲೇ ಮುಗಿಸಿಬಿಡಬೇಕು ಎಂಬ ಹುನ್ನಾರಗಳೆಲ್ಲ ಈಗ ಮುಗಿದು ಹೋಗಿವೆ. ಅವರು ಮತ್ತಷ್ಟು ಗಟ್ಟಿಯಾಗಿದ್ದಾರೆ. ಸಹಕಾರ ಕ್ಷೇತ್ರವನ್ನು ದಶಕಗಳ ಕಾಲ ಕಟ್ಟಿ ಬೆಳೆಸಿ ರೈತರ, ಬಡವರ ಪರವಾಗಿ ನಿಂತವರು. ಖಾಸಗಿ ಸಂಸ್ಥೆಗಳ ಕಪಿಮುಷ್ಟಿಗೆ ಸಿಲುಕಿ ನಲುಗುತ್ತಿದ್ದ ರೈತರನ್ನು ಸಹಕಾರ ಕ್ಷೇತ್ರದ ಮೂಲಕ ಉಳಿಸಿಕೊಂಡವರು. ಅವರನ್ನು ಸಹಕಾರ ಕ್ಷೇತ್ರದಿಂದ ಓಡಿಸಲು ಯಾರಿಂದಲೂ ಸಾಧ್ಯವಿಲ್ಲ. ಅವರಿಗೆ ಉತ್ತಮ ರಾಜಕೀಯ ಭವಿಷ್ಯವಿದೆ. ಅವರಿಗೆ ತವರೂರಲ್ಲಿ ಸನ್ಮಾನಿಸುತ್ತಿರುವುದು ಅತ್ಯಂತ ಖುಷಿ ತಂದಿದೆ ಎಂದರು.


ಕಾರ್ಯಕ್ರಮದಲ್ಲಿ ಆರ್.ಎಂ. ಮಂಜುನಾಥ ಗೌಡ ಅವರನ್ನು ಸನ್ಮಾನಿಸಲಾಯಿತು. ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್, ಹಿರಿಯ ಸಹಕಾರಿ ವಿಜಯದೇವ್, ತಾ.ಪಂ. ಅಧ್ಯಕ್ಷೆ ಗೀತಾ, ಕಲಗೋಡು ರತ್ನಾಕರ್, ಶ್ರೀಪಾದ್ ಹೆಗಡೆ, ನಾರಾಯಣ ರಾವ್, ಷಡಾಕ್ಷರಿ, ವೈ.ಹೆಚ್. ನಾಗರಾಜ್, ಶಂಕರಘಟ್ಟ ರಮೇಶ್, ಮುಡುಬ ರಾಘವೇಂದ್ರ, ಪಿ.ಒ. ಶಿವಕುಮಾರ್, ಮೋಹನ್, ದುಗ್ಗಪ್ಪ ಗೌಡ, ಜೆ.ಪಿ.ಯೋಗೀಶ್, ರಾಜಣ್ಣ ರೆಡ್ಡಿ ಸೇರಿದಂತೆ ಹಲವರಿದ್ದರು.

Leave A Reply

Your email address will not be published.

error: Content is protected !!