ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿಯಾಗಿದೆ

0 453

ರಿಪ್ಪನ್‌ಪೇಟೆ: ರಾಜ್ಯದಲ್ಲಿ ಚುನಾವಣೆಯ (Election) ಸಂದರ್ಭದಲ್ಲಿ ಮತದಾರರನ್ನು (Voter’s) ಸೆಳೆಯಲು ಗ್ಯಾರಂಟಿ ಯೋಜನೆಗಳನ್ನು (Guarantee Schemes) ಪ್ರಕಟಿಸಿ ಇಂದು ಶ್ರೀಸಾಮಾನ್ಯರಿಗೆ ಯೋಜನೆಯ ಸೌಲಭ್ಯ ದೊರೆಯದೇ ಪರದಾಡುವಂತಾಗಿದ್ದಾರೆಂದು ಹೊಸನಗರ (Hosanagara) ತಾಲ್ಲೂಕು ಬಿ.ಜೆ.ಪಿ. (Bjp) ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಚಿಟ್ಟೆಗದ್ದೆ ಪುರುಷೋತ್ತಮ ಆರೋಪಿಸಿದರು.

ರಿಪ್ಪನ್‌ಪೇಟೆಯಲ್ಲಿ (Ripponpet) ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ (Siddaramaiah) ಮತ್ತು ಡಿ.ಕೆ.ಶಿವಕುಮಾರ್ (D.K Shivakumar) ನೇತೃತ್ವದ ಕಾಂಗ್ರೆಸ್ ಸರ್ಕಾರ ಘೋಷಿಸಿಸಲಾದ ಗೃಹಲಕ್ಷ್ಮಿ ಮತ್ತು ಗೃಹ ಜ್ಯೋತಿ, ಶಕ್ತಿ ಯೋಜನೆಗಳಿಂದಾಗಿ ಮಹಿಳೆಯರನ್ನು ದಾರಿ ತಪ್ಪಿಸುವಂತಹ ಕೆಲಸದಲ್ಲಿ ತೊಡಗಿರು ಸರ್ಕಾರ ಈ ಬಾರಿ ಕಡಿಮೆ ಮಳೆಯಿಂದಾಗಿ ರೈತರ ಬೆಳೆ ಕೈಗೆ ಸಿಗದಂತಾಗಿದ್ದು ಸರ್ಕಾರ ಈವರೆಗೂ ಬರಪೀಡಿತ ತಾಲ್ಲೂಕು ಎಂದು ಘೋಷಿಸದಿರುವುದರ ಬಗ್ಗೆ ತೀವ್ರ ಅಸಮದಾನ ವ್ಯಕ್ತಪಡಿಸಿ, ರೈತರ ಹಿತಶಕ್ತಿಯನ್ನು ಕಾಯ್ದುಕೊಳ್ಳುವಂತೆ ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳಿಗೆ ಪತ್ರದ ಬರೆಯುವ ಮೂಲಕ ಆಗ್ರಹಿಸಿರುವುದಾಗಿ ತಿಳಿಸಿದರು.

ಅಲ್ಲದೆ ಜಾತಿ ಜನಗಣತಿಯನ್ನು ಮಾಡುವುದು ಅಸಮರ್ಪಕವಾಗಿದೆ. ಅದರ ಬದಲು ತೀವ್ರ ಹಿಂದೂಳಿದ ಎಲ್ಲ ವರ್ಗದ ಜನರಿಗೂ ಸರ್ಕಾರದ ಸೌಲಭ್ಯವನ್ನು ನೀಡುವಂತಹ ಸಮೀಕ್ಷೆ ಅಗತ್ಯವಾಗಿದೆ ಎಂದ ಅವರು, ಜಾತಿ ಜನಗಣತಿಯೆಂದು ಜಾತಿ ರಾಜಕಾರಣ ಮಾಡದಂತೆ ಆಗ್ರಹಿಸಿದ್ದಾರೆ.

ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಪ್ರಚಾರದ ಭರಾಟೆಯಲ್ಲಿ
ಅನುಷ್ಠಾನಗೊಳಿಸಲಾದ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯದ ಹಣ ಮಹಿಳಾ ಫಲಾನುಭವಿಗಳಿಗೆ ತಲುಪದೇ ವಂಚಿತರಾಗಿದ್ದು ನಿತ್ಯ ಫಲಾನುಭವಿಗಳು ಬ್ಯಾಂಕ್ ಮತ್ತು ಗ್ರಾಮ ಒನ್‌ಗೆ ಅಲೆಯುವಂತೆ ಮಾಡಿದ್ದಾರೆಂದು ಕಿಡಿಕಾರಿದರು.

Leave A Reply

Your email address will not be published.

error: Content is protected !!