ಕಾಡಾನೆ ದಾಳಿಗೆ ಬೆಳೆ ನಾಶ ; ಆತಂಕದಲ್ಲಿ ರೈತರು
ರಿಪ್ಪನ್‌ಪೇಟೆ : ಕೆಂಚನಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮಸರೂರು ಖೈರದವರ ಮನೆ ಶಿವಾನಂದ ಎಂಬುವರ ಅಡಿಕೆ ತೋಟಕ್ಕೆ ಭಾನುವಾರ ರಾತ್ರಿ ದಾಳಿ ಇಟ್ಟ ತಾಯಿ ಮತ್ತು ಮರಿ ಕಾಡಾನೆ ಅಡಿಕೆ, ಬಾಳೆ ಬೆಳೆಯನ್ನು ಸಂಪೂರ್ಣ ನೆಲಸಮ ಮಾಡಿವೆ.
ಸೋಮವಾರ ಬೆಳಗ್ಗೆ ರೈತ ಶಿವಾನಂದಪ್ಪ ಎಂದಿನಂತೆ ತೋಟಕ್ಕೆ ನೀರು ಹಾಯಿಸಲು ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ರೈತ ನೀಡಿದ ದೂರಿನನ್ವಯ ಕಂದಾಯ ಇಲಾಖೆಯ ಅಧಿಕಾರಿಗಳು, ಅರಸಾಳು ವಲಯ ಅರಣ್ಯಾಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆನೆ ಸ್ಥಳಾಂತರಗೊಳಿಸಲು ಹೆಜ್ಜೆ ಜಾಡು ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಗಳು ಶ್ರಮಿಸುತ್ತಿದ್ದಾರೆ. ಇತ್ತ ರೈತರು ಮಳೆ ಇಲ್ಲದೆ ಪರಿತಪಿಸುತ್ತಿದ್ದು ಇದೀಗ ಆನೆ ದಾಳಿಯೂ ಅವರ ನಿದ್ದೆಗೆಡಿಸಿದೆ.
ಸ್ಥಳಕ್ಕೆ ಕೆಂಚನಾಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಭೇದುಲ್ಲಾ ಷರೀಫ್, ಸದಸ್ಯ ಮಹಮ್ಮದ್ ಷರೀಫ್, ರೈತ ಮುಖಂಡ ಸುಗಂಧರಾಜ್ ಇನ್ನಿತರ ಗ್ರಾಮಸ್ಥರುಗಳು ಭೇಟಿ ನೀಡಿ ಹಾನಿಗೀಡಾಗಿರುವ ಅಡಿಕೆ ಮತ್ತು ಬಾಳೆ ಬೆಳೆಯನ್ನು ವೀಕ್ಷಿಸಿ ತಕ್ಷಣ ಸರ್ಕಾರ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.