ಕಾನೂನು‌ ಸುವ್ಯವಸ್ಥೆ ಪರಿಶೀಲನೆಗೆ ರಾಜ್ಯ ಪ್ರವಾಸ ; ಎಡಿಜಿಪಿ ಆರ್. ಹಿತೇಂದ್ರ

0 0

ಶಿವಮೊಗ್ಗ : ಕಾನೂನು‌ ಸುವ್ಯವಸ್ಥೆ ಪರಿಶೀಲನೆಗೆ ರಾಜ್ಯ
ಪ್ರವಾಸ ಕೈಗೊಂಡಿದ್ದೇನೆ. ಅದೇ ರೀತಿ ಶಿವಮೊಗ್ಗ ಜಿಲ್ಲೆಯ
ಕಾನೂನು ಸುವ್ಯವಸ್ಥೆ ಪರಿಶೀಲನೆ ಮಾಡಿದ್ದೇನೆ ಎಂದು ಎಡಿಜಿಪಿ
ಆರ್. ಹಿತೇಂದ್ರ ಹೇಳಿದ್ದಾರೆ.

ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ
ಮಾತನಾಡಿ, ಮುಂಬರುವ ಹಬ್ಬ,‌ ಪಂಚಾಯಿತಿ ಚುನಾವಣೆ
ದೃಷ್ಟಿಯಿಂದ ಕಾನೂನು ಸುವ್ಯವಸ್ಥೆ ಅವಲೋಕನ ನಡೆಸಲಾಗಿದೆ. ಇದರಲ್ಲಿ ಏನು ವಿಶೇಷವಿಲ್ಲ ಎಂದರು.


ವಿಧಾನಸಭೆ ಚುನಾವಣೆ ಬಂದೋಬಸ್ತ್ ಯಶಸ್ವಿಯಾಗಿದೆ.
ಹೊಸ ಸರ್ಕಾರದಲ್ಲಿ ಸಿಬ್ಬಂದಿ ವರ್ಗಾವಣೆ ಬಯಸುತ್ತಿದ್ದಾರೆ.
ಕೆಲವು ಠಾಣೆಗಳು ಅಪ್ ಗ್ರೇಡ್ ಆಗಿದೆ. ಸಿಬ್ಬಂದಿ ನೇಮಕಾತಿ
ಪ್ರಕ್ರಿಯೆ ನಡೆಯುತ್ತಿದೆ. ಕೆಲವೊಂದು ಪ್ರಕರಣ ಕೋರ್ಟ್‌ನಲ್ಲಿದೆ. ಕಾನೂನು ಸುವ್ಯವಸ್ಥೆಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.


ನಿನ್ನೆ ಟಿಪ್ಪು ನಗರದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಎಡಿಜಿಪಿ, ಘಟನೆ ಕುರಿತು ಹೆಚ್ಚಿನ ಮಾಹಿತಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನೀಡುತ್ತಾರೆ ಎಂದರು.


ಸುಳ್ಳು ಸುದ್ದಿಗಳಿಗೆ ಕಿವಿ ಕೊಡಬೇಡಿ : ಎಸ್.ಪಿ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಮಾತನಾಡಿ, ಶಿವಮೊಗ್ಗ ನಗರದಲ್ಲಿ ನಿನ್ನೆ ಎರಡು ಪ್ರತ್ಯೇಕ ಘಟನೆ ನಡೆದಿವೆ. ಎರಡೂ ಪ್ರಕರಣಗಳಲ್ಲಿ ಕೋಮು ಸಂಘರ್ಷದಂತಹ ಯಾವುದೇ ವಿಷಯವಿಲ್ಲ. ಎರಡೂ ಪ್ರಕರಣಗಳು ಕೂಡ ಪ್ರತ್ಯೇಕವಾದವು ಎಂದು
ಹೇಳಿದರು.


ಟಿಪ್ಪು ನಗರದ ಪ್ರಕರಣದಲ್ಲಿ ಡ್ರಿಂಕ್ ಅಂಡ್ ಡ್ರೈವ್ ನಡೆದಿದೆ.
ಈ ವೇಳೆ ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಆಟೋ ಡಿಕ್ಕಿ ಹೊಡೆದಿದೆ.
ಡಿಕ್ಕಿ ಹೊಡೆದಿದ್ದಕ್ಕೆ ಹಲ್ಲೆ ಮಾಡಿದ್ದಾರೆ. ಈ ಪ್ರಕರಣದಲ್ಲಿ
ಇಬ್ಬರ ಬಂಧನವಾಗಿದೆ ಎಂದು ಮಾಹಿತಿ ನೀಡಿದರು.
ದ್ರೌಪದಮ್ಮ ವೃತ್ತದಲ್ಲಿ ವೈಯಕ್ತಿಕ ಕಾರಣಕ್ಕೆ ಹಲ್ಲೆ‌ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರ ಬಂಧನ ಆಗಿದೆ.
ಎರಡೂ ಪ್ರಕರಣದಿಂದ ಒಟ್ಟು 6 ಮಂದಿ ಬಂಧನವಾಗಿದೆ
ಎಂದು ಮಾಹಿತಿ ನೀಡಿದರು.

Leave A Reply

Your email address will not be published.

error: Content is protected !!