ಕೇಸರಿಮಯವಾಗಿದ್ದ ಶಿವಮೊಗ್ಗ ಈಗ ಹಸಿರುಮಯ

0 2,269

ಶಿವಮೊಗ್ಗ: ಕಳೆದ ಎರಡು ದಿನಗಳಿಂದ ಕೇಸರೀಮಯವಾಗಿದ್ದ ಶಿವಮೊಗ್ಗ ಹಸಿರುಮಯವಾಗಿದೆ. ನಾಳೆ ನಡೆಯಲಿರುವ ಈದ್ ಮಿಲಾದ್ ಮೆರವಣಿಗೆಗೆ ಮುಸ್ಲಿಂ ಬಾಂಧವರು ಸಕಲ ಸಿದ್ಧತೆ ಮಾಡಿಕೊಂಡಿದ್ದು, ಎಎ ಸರ್ಕಲ್ ಸೇರಿದಂತೆ ವಿವಿಧ ಬಡಾವಣೆಗಳು, ವೃತ್ತಗಳಲ್ಲಿ ಹಸಿರು ಬಟ್ಟೆ ತೋರಣ ಕಟ್ಟಿ ಸಿಂಗರಿಸಿದ್ದಾರೆ. 

ಎಎ ವೃತ್ತವನ್ನು ಸಂಪೂರ್ಣ ಹಸಿರುಮಯವಾಗಿಸಿ ಜಗಮಗಿಸುವ ದೀಪಾಲಂಕಾರ ಮಾಡಲಾಗಿದೆ. ನಾಳೆ ಮಧ್ಯಾಹ್ನದಿಂದ ಗಾಂಧಿ ಬಜಾರ್ ಜಾಮೀಯಾ ಮಸೀದಿಯಿಂದ ಮೆರವಣಿಗೆ ಆರಂಭವಾಗಲಿದೆ. ಪೊಲೀಸರು ನಾಳೆಯೂ ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ. ನಾಳೆ ಸಂಭ್ರಮದಿಂದ ಈದ್ ಮಿಲಾದ್ ಆಚರಿಸಲು ಮುಸ್ಲಿಂ ಬಾಂಧವರು ಸಿದ್ಧತೆ ಮಾಡಿಕೊಂಡಿದ್ದಾರೆ.

Leave A Reply

Your email address will not be published.

error: Content is protected !!