ಕೊಡಚಾದ್ರಿ ಅಡಿಕೆ ಸೌಹಾರ್ದ ಸಂಸ್ಥೆಗೆ 75 ಲಕ್ಷ ರೂ. ನಿವ್ವಳ ಲಾಭ ; ಎಚ್.ಎಂ.ರಾಘವೇಂದ್ರ

0 11


ಹೊಸನಗರ : ಕೊಡಚಾದ್ರಿ ಅಡಿಕೆ ಸೌಹಾರ್ದ ಸಹಕಾರಿ ಸಂಘವು 2022-23ರ ಆರ್ಥಿಕ ವರ್ಷದಲ್ಲಿ 75 ಲಕ್ಷ ರೂ. ನಿವ್ವಳ ಲಾಭಗಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಚ್.ಎಂ.ರಾಘವೇಂದ್ರ ತಿಳಿಸಿದರು.


ಇಲ್ಲಿನ ಗಾಯತ್ರಿ ಮಂದಿರದಲ್ಲಿ ಏರ್ಪಡಿಸಿದ್ದ ಸಂಸ್ಥೆಯ ವಾರ್ಷಿಕ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, 4895 ಸದಸ್ಯರನ್ನು ಒಳಗೊಂಡಿರುವ ಸಂಸ್ಥೆಯು 19.58 ಕೋಟಿ ರೂ. ಸಾಲ ಸೌಲಭ್ಯ ಒದಗಿಸಿದೆ. 2.72 ಕೋಟಿ ರೂ. ಷೇರು ಬಂಡವಾಳ ಹಾಗೂ 1.26 ಕೋಟಿ ರೂ. ಠೇವಣಿ ಸಂಗ್ರಹಿಸಲಾಗಿದೆ. 2.32 ಕೋಟಿ ರೂ. ವಿವಿಧ ನಿಧಿಗಳಲ್ಲಿ ಹೂಡಿಕೆ ಮಾಡಲಾಗಿದ್ದು, ಸಂಸ್ಥೆಯು ಆರ್ಥಿಕ ಶಿಸ್ತನ್ನು ಕಾಯ್ದುಕೊಂಡಿದೆ ಎಂದರು.


2007ರಲ್ಲಿ ಆರಂಭಗೊಂಡ ಸಂಸ್ಥೆಯು ಈಗ ಹೊಸನಗರದ ಪ್ರಮುಖ ಅಡಕೆ ವಹಿವಾಟು ಸಂಸ್ಥೆಯಾಗಿ ಹೊರಹೊಮ್ಮಿದೆ. ಸಾಗರ ಶಾಖೆಯಲ್ಲಿಯೂ ಗಣನೀಯ ಪ್ರಗತಿ ಸಾಧಿಸಲಾಗಿದೆ. ಸಾಗರ ಹಾಗೂ ಹೊಸನಗರದಲ್ಲಿ ರೂ.2.75 ಕೋಟಿ ರೂ. ವೆಚ್ಚದಲ್ಲಿ ಪ್ರತ್ಯೇಕ ಗೋದಾಮು ನಿರ್ಮಾಣ ಕಾರ್ಯದ ಯೋಜನೆ ಹಾಕಿಕೊಳ್ಳಲಾಗಿದೆ ಎಂದರು.


ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಎನ್.ಬಿ. ಬಾಲಚಂದ್ರರವರು ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸಹಕಾರಿಯು 2007ರಲ್ಲಿ ಆರಂಭವಾಗಿ ಸತತ ಲಾಭ ಗಳಿಸುತ್ತಾ ಸದಸ್ಯರಿಗೆ ಅನುಕೂಲವಾಗುವ ಹಲವು ಸೌಲಭ್ಯಗಳೊಂದಿಗೆ ಮುನ್ನಡೆಯುತ್ತಿದೆ ಸಾಗರದಲ್ಲಿ ಪ್ರತ್ಯಕವಾಗಿ ಒಟ್ಟು 3 ವರ್ಷಗಳಲ್ಲಿ ಶಾಖೆಗೆ 14 ಸಾವಿರಕ್ಕಿಂತ ಅಧಿಕ ಮೂಟೆ ಅವಕವಾಗಿದ್ದು ಶಾಖೆಯು 2022-23ನೇ ಸಾಲಿನಲ್ಲಿ 13 ಲಕ್ಷ ರೂ.ಗಿಂತಲೂ ಅದಿಕ ನಿವ್ವಳ ಲಾಭಗಳಿಸಿದೆ. ಹೊಸನಗರ ಸಾಗರದಲ್ಲಿ ಪ್ರತ್ಯೇಕವಾಗಿ ಒಟ್ಟು 2.75 ಕೋಟಿ ರೂ. ವೆಚ್ಚದಲ್ಲಿ ಕಛೇರಿ ಹಾಗೂ ಗೋದಾಮು ಕಟ್ಟಡಗಳನ್ನು ನೂತನವಾಗಿ ನಿರ್ಮಾಣ ಮಾಡುತ್ತಿದ್ದು ವಿಜಯದಶಮಿಯ ಶುಭ ಮುಹೂರ್ತದಲ್ಲಿ ಎರಡು ಕಟ್ಟಡಗಳನ್ನು ಉದ್ಘಾಟಿಸಲಾಗುವುದು.

ಹೊಸನಗರದ ಅಡಿಕೆ ಅಡಿಕೆ ಹಿಂದಿನಿಂದಲೂ ವಿಶೇಷವಾದ ಬೇಡಿಕೆಯಿದ್ದು ಬೇರೆ ಪ್ರದೇಶದ ಅಡಿಕೆಗೆ ಹೋಲಿಸಿದಲ್ಲಿ ಹೊಸನಗರದ ಅಡಿಕೆಗೆ ಹೆಚ್ಚಿನ ದರ ಲಭ್ಯವಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಬೆರಳೆಣಿಕೆಯಷ್ಟು ಜನರು ಬೇರೆ ಪ್ರದೇಶಗಳ ಕಲಬೆರಕೆ ಅಡಿಕೆಯನ್ನು ಮಾರುಕಟ್ಟೆಗೆ ತಂದು ಅಡಿಕೆಯ ಗುಣಮಟ್ಟ ಹಾಳಾಗುತ್ತಿದೆ. ಈ ಕಾರಣ ಹಿಂದಿನ ಹೊಸನಗರ ಬ್ರಾಂಡ್ ಉಳಿಸುವುದಕ್ಕೋಸ್ಕರ ನಾವು ಹೊಸನಗರ ಎಪಿಎಂಸಿ ಯಾರ್ಡ್‌ನಲ್ಲಿರುವ ನಮ್ಮ ಕಟ್ಟಡದಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ಅಡಿಕೆ ದೂಳು ತೆಗೆಯುವ ಹಾಗೂ ಅಡಿಕೆ ಮಿಶ್ರಿತ ಯಂತ್ರವನ್ನು ಸ್ಥಾಪಿಸಲಾಗಿದೆ. ಉಚಿತವಾಗಿ ರೈತರ ಅಡಿಕೆಯನ್ನು ಈ ಯಂತ್ರದಲ್ಲಿ ಸ್ವಚ್ಛಗೊಳಿಸಲಾಗುವುದು ಹಾಗೂ ಚಾಕ ಮಾಡಲಾಗುವುದು ಈ ಪ್ರಕ್ರಿಯೆಯಿಂದ ಖರೀದಿದಾರರಿಗೆ ಅಡಿಕೆ ಗುಣಮಟ್ಟದ ಖಾತರಿ ಲಭ್ಯವಾಗಿ ರೈತರ ಅಡಿಕೆಗೆ ಒಳ್ಳೆಯ ಧಾರಣೆ ನಿಗದಿ ಮಾಡಲು ಅನುಕೂಲವಾಗುತ್ತದೆ ಎಂದು ನಮ್ಮ ಸಂಸ್ಥೆಯ ಷೇರುದಾರರು ನಾವು ಮಾಡುವ ಒಳ್ಳೆಯ ಕಾರ್ಯಗಳಿಗೆ ಕೈ ಜೋಡಿಸಬೇಕು ಹಾಗೂ ನಮ್ಮ ತಪ್ಪುಗಳಿಗೆ ತಿದ್ಧಿಕೊಳ್ಳುಲು ಅನುವು ಮಾಡಿಕೊಡಬೇಕೆಂದು ಈ ಸಂದರ್ಭದಲ್ಲಿ ಕೇಳಿಕೊಂಡರು.


ಸಂಸ್ಥೆಗೆ ಅತಿ ಹೆಚ್ಚು ಅಡಿಕೆ ನೀಡುವ ಬೆಳೆಗಾರರನ್ನು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಈ ವೇಳೆ ಸನ್ಮಾನಿಸಲಾಯಿತು.
ಈ ಸರ್ವ ಸದಸ್ಯರ ಸಭೆಯಲ್ಲಿ ಉಪಾಧ್ಯಕ್ಷರಾದ ಈಶ್ವರಪ್ಪ ಗೌಡ, ನಿರ್ದೇಶಕರಾದ ಹನಿಯಾ ರವಿ, ಕೆ.ಎನ್.ಕೃಷ್ಣಮೂರ್ತಿ, ಈಶ್ವರಪ್ಪಗೌಡ, ಗಣಪತಿ, ಆದಿತ್ಯ, ರಾಮಚಂದ್ರ, ರಾಜಶೇಖರ, ಜಗದೀಶ, ಪ್ರತಿಮಾ ಭಟ್, ವಿದ್ಯಾ ಪೈ ಸಂಸ್ಥೆಯ ಸಿಇಓ ಎನ್.ಬಿ.ಬಾಲಚಂದ್ರಭಟ್, ಸಾಗರ ಕಾರ್ಯರ್ವಹಣಾಧಿಕಾರಿ ವಿಜೇಂದ್ರ ಕಾಮತ್ ಮತ್ತಿತರರು ಇದ್ದರು.

Leave A Reply

Your email address will not be published.

error: Content is protected !!