ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾಗಿ ಬಿ.ಎಸ್. ಸುರೇಶ್ ಆಯ್ಕೆ

0 718

ಹೊಸನಗರ: 38 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ಇತಿಹಾಸ ಪಡೆದಿರುವ ಹೊಸನಗರದ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾಗಿ ಬಿ.ಎಸ್. ಸುರೇಶ್‌ರವರು ಆಯ್ಕೆಯಾಗಿದ್ದಾರೆ.

ಅಧ್ಯಕ್ಷರಾಗಿ ಕೆ. ಅಶ್ವಿನಿಕುಮಾರ್‌ರವರು ಆಯ್ಕೆಯಾಗಿದ್ದು ನಮಗೆ ಈ ಕಾಲೇಜಿನ ಬಗ್ಗೆ ಅಪಾರ ಪ್ರೀತಿಯಿದೆ. ನಮಗೆ ಬದುಕು ಕಲಿಸಿದ ವಿದ್ಯಾಸಂಸ್ಥೆ ಪ್ರಾಂಶುಪಾಲರು, ಪ್ರಾಧ್ಯಾಪಕರಾದ ನೀವುಗಳು ನಮ್ಮೊಂದಿಗೆ ಸಹಕರಿಸಿ ಕಾಲೇಜಿನಲ್ಲಿ ಮೂಲಭೂತವಾದ ಸೌಕರ್ಯಗಳಿಗೆ ಒತ್ತು ನೀಡಬೇಕಾಗಿದೆ ಎಂದರು.

ಪ್ರಧಾನ ಕಾರ್ಯದರ್ಶಿಯಾಗಿ ವಿನಯ್‌ಕುಮಾರ್ ಕೆ, ಕಾರ್ಯದರ್ಶಿಯಾಗಿ ಗುರುರಾಜ್ ಮಸಗಲ್ಲಿ, ಖಜಾಂಚಿಯಾಗಿ ಸತೀಶ್ ಕುಮಾರ್‌ರವರು ಈ ಸಂದರ್ಭದಲ್ಲಿ ಆಯ್ಕೆಯಾದರು.

ಕಾಲೇಜಿನ ಪ್ರಾಂಶುಪಾಲ ಡಾ|| ಉಮೇಶ್, ಹಿರಿಯ ಪ್ರಾಧ್ಯಾಪಕ ಡಾ|| ಪ್ರಭಾಕರ್, ಸಂಚಾಲಕರಾದ ಡಾ|| ಲೋಕೇಶಪ್ಪ, ಡಾ|| ಶ್ರೀಪತಿ ಹಳಗುಂದ, ಪ್ರತಿಮಾ ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು.

ಕು|| ವಿಭಾ ಪ್ರಾರ್ಥಸಿರು. ಶ್ರೀಪತಿ ಹಳಗುಂದ ಸ್ವಾಗತಿಸಿದರು. ಲೋಕೇಶ್ವರಪ್ಪ ವಂದಿಸಿದರು. ಪ್ರತಿಮಾ ಕಾರ್ಯಕ್ರಮ ನಿರೂಪಿಸಿದ್ದರು.

Leave A Reply

Your email address will not be published.

error: Content is protected !!