ಕೊಲೆ ಆರೋಪಿಗೆ ಜೀವಾವಧಿ ಶಿಕ್ಷೆ

0 9

ಶಿವಮೊಗ್ಗ : ಕೊಲೆ ಆರೋಪಿಗೆ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಘಟನಾ ವಿವರ :

ಶಿವಮೊಗ್ಗ ಟೌನ್ ಶರಾವತಿ ನಗರ ನಿವಾಸಿ ರೇವಣಪ್ಪ (51) ಮತ್ತು ಅವರ ಸಹೋದರರ ಮಧ್ಯೆ ಜಮೀನಿನ ವಿಚಾರವಾಗಿ ವೈಮನಸ್ಸಿದ್ದು 2018 ರ ಡಿ.26 ರಂದು ಆರೋಪಿಗಳಾದ ಪ್ರಕಾಶ, ಮಂಜಪ್ಪ, ಶಂಕ್ರಪ್ಪ. ಮೌನೇಶ್ವರಪ್ಪ, ಆಶಾ ಹಾಗೂ ಇತರರು ಸೇರಿಕೊಂಡು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ರೇವಣ್ಣಪ್ಪ ರವರನ್ನು ಕೊಲೆ ಮಾಡಿರುತ್ತಾರೆಂದು ಮೃತನ ಪತ್ನಿ ಕಮಲಮ್ಮ ನೀಡಿದ ದೂರಿನ ಮೇರೆಗೆ ಕಲಂ 143, 147, 148, 302, 114 ಸಹಿತ 149 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿತ್ತು.

ಆಗಿನ ತನಿಖಾಧಿಕಾರಿಗಳಾದ ಜೆ. ಲೋಕೇಶ್ ಪೊಲೀಸ್ ವೃತ್ತ ನಿರೀಕ್ಷಕರು, ಶಿವಮೊಗ್ಗ ಗ್ರಾಮಾಂತರ ವೃತ್ತ ರವರು ಪ್ರಕರಣದ ತನಿಖೆ ಕೈಗೊಂಡು ಈ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದರು.

ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸುರೇಶ ಕುಮಾರ್, ಸರ್ಕಾರಿ ಅಭಿಯೋಜಕರವರು ವಾದ ಮಂಡಿಸಿದ್ದು ಪ್ರದಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು ಶಿವಮೊಗ್ಗದ ಹೊಳಲೂರು ಗ್ರಾಮದ ಆರೋಪಿ ಪ್ರಕಾಶ್ (45) ಈತನ ವಿರುದ್ಧ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಮೇ 23 ರಂದು ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 1 ಲಕ್ಷ ರೂ. ದಂಡ, ದಂಡ ಕಟ್ಟಲು ವಿಫಲನಾದರೆ ಹೆಚ್ಚುವರಿ 2 ವರ್ಷ ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.

Leave A Reply

Your email address will not be published.

error: Content is protected !!