ಕ್ರೀಡಾಕೂಟ ; ಕೋಟೆತಾರಿಗ ಶಾಲೆ ವಿದ್ಯಾರ್ಥಿ ರಾಜ್ಯ ಮಟ್ಟಕ್ಕೆ ಆಯ್ಕೆ

0 537

ರಿಪ್ಪನ್‌ಪೇಟೆ : ಇಂದು ಶಿವಮೊಗ್ಗದಲ್ಲಿ ನಡೆದ ಜಿಲ್ಲಾ ಮಟ್ಟದ 14 ವರ್ಷ ವಯೋಮಿತಿಯೊಳಗಿನ ಪ್ರಾಥಮಿಕ ಶಾಲಾ ಬಾಲಕ-ಬಾಲಕಿಯರ ಕ್ರೀಡಾಕೂಟದಲ್ಲಿ ಸ.ಹಿ.ಪ್ರಾ.ಶಾಲೆ ಕೋಟೆತಾರಿಗ ಇಲ್ಲಿನ 7ನೇ ತರಗತಿ ಗ್ರಾಮೀಣ ಭಾಗದ ವಿದ್ಯಾರ್ಥಿ ಕು|| ಪ್ರೀತಮ್ ಇವರು ಬಾಲಕರ ವಿಭಾಗದಲ್ಲಿ 400 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ.

ಪ್ರೀತಮ್ ತಾರಿಗ ಗ್ರಾಮದ ನಂದಿಗ ವಾಸಿ ನಳೀನ ಮತ್ತು ಕುಬೇರ ದಂಪತಿಯ ಪುತ್ರ.

ಅಭಿನಂದನೆ :
ಈತನ‌ ಸಾಧನೆಗೆ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು ನವೀನ್, ಉಪಾಧ್ಯಕ್ಷ ಮತ್ತು ಸರ್ವ ಸದಸ್ಯರು, ಸಿ.ಆರ್.ಪಿ. ಸಂತೋಷ್ ಕುಮಾರ್, ಪೋಷಕರು, ಗ್ರಾಮಸ್ಥರು, ಮುಖ್ಯ ಶಿಕ್ಷಕರು, ಸಹ ಶಿಕ್ಷಕ ವೃಂದ ಅಡುಗೆ ಸಿಬ್ಬಂದಿಯವರು, ವಿದ್ಯಾರ್ಥಿಗಳು ಶುಭ ಹಾರೈಸಿ, ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Leave A Reply

Your email address will not be published.

error: Content is protected !!