ಕ್ರೀಡೆಗಳು ಹಿರಿಯರಿಗೆ ಉಲ್ಲಾಸ ತರುತ್ತವೆ

0 22

ಶಿವಮೊಗ್ಗ: ಕ್ರೀಡೆಗಳು ಹಿರಿಯರಿಗೆ ಉಲ್ಲಾಸ ತರುತ್ತವೆ ಎಂದು ಪಾಲಿಕೆ ಮೇಯರ್ ಶಿವಕುಮಾರ್ ಹೇಳಿದರು.
ಅವರು ಇಂದು ಬಿ.ಹೆಚ್. ರಸ್ತೆಯ ಮೀನಾಕ್ಷಿ ಭವನದ ಬಳಿಯ ಸರ್ಕಾರಿ ಪ್ರೌಢಶಾಲೆಯ ಮೈದಾನದಲ್ಲಿ ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ  ಹಿರಿಯ ನಾಯಕರ ಸಬಲೀಕರಣ ಇಲಾಖೆ, ನಿವೃತ್ತ ನೌಕರರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.


ನಿವೃತ್ತ ಬದುಕು ಹಿರಿಯರಿಗೆ ಒಂದು ರೀತಿಯಲ್ಲಿ ಅಸಮಾಧಾನ ತರುತ್ತಿರುತ್ತದೆ. ಕ್ರಿಯಾಶೀಲತೆಯಿಂದ ಹಿರಿಯರು ಜೀವನಶೈಲಿಯನ್ನು ಸುಂದರವಾಗಿ ಇಟ್ಟುಕೊಳ್ಳಬಹುದು. ಇದಕ್ಕೆ ವ್ಯಾಯಾಮ, ಕ್ರೀಡೆ ಸಹಾಯಕವಾಗುತ್ತದೆ ಆರೋಗ್ಯದ ಜೊತೆಗೆ ಆಯುಷ್ಯವನ್ನು ಹೆಚ್ಚಿಸುತ್ತದೆ ಎಂದರು.


ಶಿಕ್ಷಣಾಧಿಕಾರಿ  ಪಿ. ನಾಗರಾಜ್ ಮಾತನಾಡಿ, ಹಿರಿಯರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅವರ ಜೀವನದ ಅನುಭವಗಳನ್ನು ನಾವು ಪಾಲಿಸಬೇಕಾಗುತ್ತದೆ. ಸರ್ಕಾರ ಹಿರಿಯ ನಾಯಕರ ಸಬಲೀಕರಣಕ್ಕಾಗಿ ಹಲವು ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಜಾರಿಗೆ ತಂದಿದೆ. ಆ ಮೂಲಕ ಇನ್ನೂ ಹೆಚ್ಚಿನ ಸವಲತ್ತುಗಳನ್ನು ಅವರಿಗೆ ನೀಡಬೇಕು. ಇಂತಹ ಸ್ಪರ್ಧೆಗಳು ಅರ್ಥಪೂರ್ಣವಾಗುತ್ತವೆ. ತಮ್ಮ ಸಮಾನ ವಯಸ್ಕರ ಜೊತೆ ಸೇರಿ ಸಂತೋಷ ಸಂಭ್ರಮ ಹೆಚ್ಚಾಗುತ್ತದೆ ಎಂದರು.


ಈ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ವಿವಿಧ ಆಟೋಟ ಮತ್ತು ಸಾಂಸ್ಕೃತಿ ಸ್ಪರ್ಧೆ ಆಯೋಜಿಸಲಾಗಿತ್ತು. 
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್ ಡಿಎಂ, ಷಣ್ಮುಖಪ್ಪ, ಟಿ. ಬಸವರಾಜ್, ಅಂಗವಿಕಲರ ಕಲ್ಯಾಣಾಧಿಕಾರಿ ಚಂದ್ರಪ್ಪ, ಶರಣಪ್ಪ ಮೊದಲಾದವರಿದ್ದರು.

Leave A Reply

Your email address will not be published.

error: Content is protected !!