ಕ್ಷುಲ್ಲಕ ಕಾರಣಕ್ಕೆ ಪೊಲೀಸರ ಎದುರಲ್ಲೇ ಚಾಕುವಿನಿಂದ ಚುಚ್ಚಿ ವ್ಯಕ್ತಿ ಕೊಲೆ !!!
ಶಿವಮೊಗ್ಗ : ಕ್ಷುಲ್ಲಕ ಕಾರಣಕ್ಕೆ ಪೊಲೀಸರ ಎದುರಲ್ಲೇ ಚಾಕುವಿನಿಂದ ಚುಚ್ಚಿ ವ್ಯಕ್ತಿಯನ್ನು ಕೊಲೆ ಮಾಡಲಾದ ಘಟನೆ ಆಯನೂರಿನಲ್ಲಿ ನಡೆದಿದೆ.

ಬಾರ್ ನಲ್ಲಿ ಕುಡಿಯುತ್ತಿದ್ದ ಆರೋಪಿಗಳಿಗೆ ಸಮಯ ಆಗಿದೆ ಹೊರಗೆ ಹೋಗಿ ಎಂದಿದ್ದಕ್ಕೆ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ದುಷ್ಕರ್ಮಿಗಳು ಬಾರ್ ಕ್ಯಾಶಿಯರ್ ನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಲಾಗಿದ್ದು ಸೊರಬ ಮೂಲದ ಸಚಿನ್ (27) ಕೊಲೆಗೀಡಾದ ದುರ್ದೈವಿ.
ದುಷ್ಕರ್ಮಿಗಳು ಕಳೆದ ಹಲವು ದಿನಗಳಿಂದ ಬಾರ್ ನಲ್ಲಿ ಕುಡಿದು ಹಣ ನೀಡದೆ ಹೋಗುತ್ತಿದ್ದರು. ಕಳೆದ ರಾತ್ರಿ ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯದವರೆಗೂ ಮದ್ಯಪಾನ ಮಾಡುತ್ತಿದ್ದ ನಿರಂಜನ್, ಸತೀಶ್ ಹಾಗೂ ಆಶೋಕ್ ನಾಯ್ಕ್ ರವರಿಗೆ ಟೈಂ ಆಗಿದೆ ಎದ್ದು ಹೋಗಿ ಎಂದಿದ್ದಕ್ಕೆ ಕೋಪಗೊಂಡ ಈ ಮೂವರು ಸಚಿನ್ ನನ್ನು ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾರೆ.

ನಂತರ ಬಾರ್ ನ ಸಿಬ್ಬಂದಿಗಳು 112 ಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಜಗಳ ಬಿಡಿಸುವ ಪ್ರಯತ್ನ ಮಾಡಿದ್ದಾರೆ. ದುಷ್ಕರ್ಮಿಗಳು ಪೊಲೀಸರ ಎದುರಲ್ಲೇ ಸಚಿನ್ ನ ಎದೆಯ ಭಾಗಕ್ಕೆ ಚಾಕುವಿನಿಂದ ಚುಚ್ಚಿದ್ದಾರೆ.
ನಂತರ ಚಿಕಿತ್ಸೆಗೆಂದು ಆಯನೂರು ಆಸ್ಪತ್ರೆಗೆ ಸಚಿನ್ ನನ್ನು ಕರೆ ತರಲಾಗಿದೆ. ಆದರೆ ದುಷ್ಕರ್ಮಿಗಳು ಆಸ್ಪತ್ರೆಗೂ ಹಲ್ಲೆ ಮಾಡಲು ಬಂದಿದ್ದಾರೆ. ಗಂಭೀರವಾಗಿ ಗಾಯಗೊಂಡ ಸಚಿನ್ ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ರವಾನೆ ಮಾಡಲಾಗಿದೆ. ಆದರೆ ಮಾರ್ಗ ಮಧ್ಯದಲ್ಲಿ ಕೊನೆ ಉಸಿರೆಳೆದಿದ್ದಾನೆ.

ಮೂವರು ದುಷ್ಕರ್ಮಿಗಳನ್ನು ಬಂಧಿಸಿದ ಪೊಲೀಸರು
ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.