ಗಣಪತಿ ಮತ್ತು ಈದ್ ಮಿಲಾದ್ ಹಬ್ಬಗಳು ಮತ್ತು ಮೆರವಣಿಗೆ ಶಾಂತಿಯುತವಾಗಿರಲಿ
ಶಿವಮೊಗ್ಗ: ಗಣಪತಿ ಮತ್ತು ಈದ್ ಮಿಲಾದ್ ಹಬ್ಬಗಳು ಮತ್ತು ಹಬ್ಬದ ಅಂಗವಾಗಿ ನಡೆಯುವ ಮೆರವಣಿಗೆಗಳು ಶಾಂತಿಯುತವಾಗಿರಲಿ ಎಂದು ಜಯ ಕರ್ನಾಟಕ ಸಂಘಟನೆಯ ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ನಾಜೀಮಾ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರೇಮ ಎನ್ ಶೆಟ್ಟಿ ತಿಳಿಸಿದ್ದಾರೆ.
ಹಿಂದೂ ಹಾಗೂ ಮುಸ್ಲಿಮರ ಪವಿತ್ರ ಹಬ್ಬಗಳಾದ ಗೌರಿ-ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳು ಈ ಬಾರಿ ಒಟ್ಟಿಗೆ ಬಂದಿವೆ ,ಎರಡು ಧರ್ಮದವರು ಒಟ್ಟಾಗಿ ಸಾಮರಸ್ಯದಿಂದ ಈ ಹಬ್ಬವನ್ನು ಆಚರಿಸುವಂತಾಗಬೇಕು, ಶಿವಮೊಗ್ಗ ಶಾಂತಿ ಪ್ರಿಯತೆಗೆ ಹೆಸರಾದದ್ದು ಆ ಸೌಹಾರ್ದ ಉಳಿಯಬೇಕು ಎಂದು ಅವರು ತಿಳಿಸಿದ್ದಾರೆ.
ಎರಡು ಹಬ್ಬಗಳ ಅಂಗ ಅಂಗವಾಗಿ ಮೆರವಣಿಗೆಗಳು ಬೇರೆ ಬೇರೆ ದಿನಾಂಕ ಗಳಂದೆ ನಿಗದಿಯಾಗಿವೆ. ಎಲ್ಲರೂ ಒಟ್ಟಾಗಿ ಶಾಂತಿಯುತವಾಗಿ ಹಬ್ಬ ಆಚರಿಸಬೇಕು. ಜಿಲ್ಲಾಡಳಿತ ಹಾಗು ಪೊಲೀಸ್ ಇಲಾಖೆ ಈಗಾಗಲೇ ಶಾಂತಿ ಮತ್ತು ಸೌಹಾರ್ದಕ್ಕಾಗಿ ಮುಂಜಾಗ್ರತೆ ಕ್ರಮ ಕೈಗೊಂಡಿದೆ ಎರಡು ಧರ್ಮದವರಿಂದ ಶಾಂತಿ ಸಭೆಗಳು ನಡೆದಿದೆ. ವಿವಿಧ ಸಂಘಟನೆಗಳು ಸೌಹಾರ್ದ ಹೆಜ್ಜೆ ಹಾಕಿವೆ. ಜಿಲ್ಲಾಡಳಿತ ಪೊಲೀಸರಿಗೆ ನಾವು ಸಹಕರಿಸೋಣ ಹಬ್ಬಗಳನ್ನು ಸಡಗರ ಸಂಭ್ರಮದಿಂದ ಆಚರಿಸೋಣ. ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬುದನ್ನು ನಿರೂಪಿಸೋಣ ಎಂದು ನಾಜೀಮಾ ಮತ್ತು ಪ್ರೇಮ ಜನರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.