ಗಣೇಶೋತ್ಸವದ ಅಂಗವಾಗಿ ಹಿಂಡ್ಲೆಮನೆಯಲ್ಲಿ ನಾಳೆ ಬಳೆ ಕೋಲಾಟ ಆಯೋಜನೆ

0 304

ರಿಪ್ಪನ್‌ಪೇಟೆ : ರಾತ್ರಿಯಿಡೀ ನಡೆಯುವ ಮಲೆನಾಡಿನ ಸುಪ್ರಸಿದ್ಧ ವೈವಿಧ್ಯಮಯ ಜಾನಪದ ಕಲೆಗಳಲ್ಲೊಂದಾದ ನೃತ್ಯ ಹಾಗು ಹಾಡುಗಾರಿಕೆ ವಿಶಿಷ್ಟ ಲಯದಿಂದ ಆಕರ್ಷಣೀಯವಾಗಿರುವ ಬಳೆ ಕೋಲಾಟ ಕಾರ್ಯಕ್ರಮವನ್ನು 40ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಹಿಂಡ್ಲೆಮನೆಯಲ್ಲಿ ಆಯೋಜಿಸಲಾಗಿದೆ ಎಂದು ಶ್ರೀ ಸಿದ್ದಿವಿನಾಯಕ ಯುವಕ ಸಂಘ ಹಿಂಡ್ಲೆಮನೆ ಇದರ ಪದಾಧಿಕಾರಿಗಳು ತಿಳಿಸಿದ್ದಾರೆ.

ಸೆ.19ರ ಮಂಗಳವಾರ ರಾತ್ರಿ 9:30 ರಿಂದ ಪ್ರಾರಂಭವಾಗುವ ಈ ಕಾರ್ಯಕ್ರಮಕ್ಕೆ ಸಾಗರ ತಾಲೂಕಿನ ಹೆಗ್ಗೋಡಿನ ಶ್ರೀ ಭೂತೇಶ್ವರ ಕಲಾ ಬಳಗ ಮತ್ತು ಹೊಸನಗರ ತಾಲೂಕಿನ ಕೆದ್ದಲುಗುಡ್ಡೆ ಶ್ರೀ ಶನೇಶ್ವರ ಕಲಾ ಸಂಘ ತಂಡಗಳು ಭಾಗವಹಿಸುತ್ತಿವೆ ಎಂದು ತಿಳಿಸಿದ ಅವರು, ಪ್ರಥಮ ಬಹುಮಾನವಾಗಿ 16 ಸಾವಿರ ರೂ. ಹಾಗೂ ಬೆಳ್ಳಿ ಬಳೆ ಮತ್ತು ದ್ವಿತೀಯ ಬಹುಮಾನವಾಗಿ 15 ಸಾವಿರ ರೂ. ನೀಡಲಾಗುವುದು ಎಂದು ತಿಳಿಸಿದ್ದಾರೆ.

ಇನ್ನೂ ಭಾಗವಹಿಸುವ ಕಲಾ ತಂಡಗಳಿಗೆ ಮತ್ತು ಸಾರ್ವಜನಿಕರಿಗೆ ರಾತ್ರಿ ಊಟದ ವ್ಯವಸ್ಥೆ ಇರಲಿದ್ದು ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕೆಂದು ಈ ಮೂಲಕ ಕೋರಿದ್ದಾರೆ.

ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಹೆಚ್.ಈ. ಟೀಕಪ್ಪ, ಉಪಾಧ್ಯಕ್ಷ ಉದಯ ಕೆ.ಸಿ., ಖಜಾಂಚಿ ಶ್ರೀನಿವಾಸ ಹೆಚ್‌.ಜಿ., ಕಾರ್ಯದರ್ಶಿ ಗುರು ಹೆಚ್‌.ವೈ., ಸಹ ಕಾರ್ಯದರ್ಶಿ ನಾಗರಾಜ ಹೆಚ್‌.ಎಲ್., ಸಂಚಾಲಕರಾದ ಪುರುಷೋತ್ತಮ್ ಹೆಚ್.ಎನ್‌. ಮತ್ತು ಸಮಿತಿಯ ಇನ್ನಿತರ ಪದಾಧಿಕಾರಿಗಳು ಇದ್ದರು.

Leave A Reply

Your email address will not be published.

error: Content is protected !!