ಗೂಗಲ್ ಮ್ಯಾಪ್‌ನಲ್ಲಿ ಸಿಗಂದೂರು ದೇವಸ್ಥಾನಕ್ಕೆ ಹೋಗುವ ಮಾರ್ಗ ಬದಲಾಯಿಸಿ ; ಎಂ.ಎನ್. ಸುಧಾಕರ್

0 60,690

ಹೊಸನಗರ: ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದ ರಸ್ತೆ ಹೊಳೆಯಲ್ಲಿ ನೀರಿಲ್ಲದೇ ಇರುವ ಕಾರಣ ಗೂಗಲ್ ಮ್ಯಾಪ್ ಅವೈಜ್ಞಾನಿಕತೆಯಿಂದ ಕೂಡಿದ್ದು ಅದನ್ನು ತಕ್ಷಣ ಬದಾಲಾಯಿಸಬೇಕೆಂದು ಪಟ್ಟಣ ಪಂಚಾಯತಿ ಮಾಜಿ ಅಧ್ಯಕ್ಷ ಎಂ.ಎನ್.ಸುಧಾಕರ್‌ರವರು ಒತ್ತಾಯಿಸಿದ್ದಾರೆ.

ಅವರು ಸುದ್ಧಿಗಾರರೊಂದಿಗೆ ಮಾತನಾಡಿ, ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಹೊಸನಗರದಿಂದ 78 ಕಿ.ಮೀ‌ ರಸ್ತೆ ಹೊಂದಿದ್ದು ಬೆಂಗಳೂರು – ಶಿವಮೊಗ್ಗ – ಹೊಸನಗರ – ನಗರ – ನಿಟ್ಟೂರು ಮಾರ್ಗವಾಗಿ ಸಿಗಂದೂರು ದೇವಸ್ಥಾನಕ್ಕೆ ಹೋಗಬಹುದು. ಈ ಮಾರ್ಗವಾಗಿ ಹೋಗುವುದರಿಂದ ಎಲ್ಲಿಯೂ ಹೊಳೆ ದಾಟುವ ಪ್ರಮೇಯವಿಲ್ಲ. ಸೀದಾ ಮಾರ್ಗವಾಗಿ ದೇವಸ್ಥಾನ ತಲುಪಬಹುದು.

ಆದರೆ ಗೂಗಲ್ ಮ್ಯಾಪ್‌ನಲ್ಲಿ ಬೆಂಗಳೂರು – ಶಿವಮೊಗ್ಗ – ಆನಂದಪುರ ಮಾರ್ಗವಾಗಿ ಕಳಸವಳ್ಳಿ ಹೊಳೆಬಾಗಿಲು ಮಾರ್ಗ ತೋರಿಸಿದ್ದು ಆದರೆ ಈ ವರ್ಷ ಬರಗಾಲ ಹಾಗೂ ಹೊಳೆಬಾಗಿಲು ಸೇತುವೆಯಲ್ಲಿ ನೀರು ಇಲ್ಲದ ಕಾರಣ ಲಾಂಚ್‌ಗಳು ಸರಿಯಾದ ಸಮಯಕ್ಕೆ ಸಿಗದೇ ಇರುವುದರಿಂದ ಹೊಳೆಬಾಗಿಲಿಗೆ ಹೋದ ಪ್ರಯಾಣಿಕರು ಪುನಃ ಕಳಸವಳ್ಳಿ ಹೊಳೆಬಾಗಿಲಿನಿಂದ ಹೊಸನಗರಕ್ಕೆ ಬಂದು ಹಳೆಯ ದಾರಿಯಲ್ಲಿ ಸಿಗಂದೂರಿಗೆ ಹೋಗುವಂತಾಗಿದೆ.

ಇದರಿಂದ ಭಕ್ತಾಧಿಗಳಿಗೆ ಸುತ್ತುವರೆಯುವುದು ಮತ್ತು ಕಾಲಹರಣವಾಗುತ್ತಿದ್ದು ಕೆಲವರು ಹೊಳೆಬಾಗಿಲಿನಿಂದ ಹೊಸನಗರಕ್ಕೆ ಬಂದು ಕಾಳಿಕಾಪುರ – ಪಟಗುಪ್ಪ ಮಾರ್ಗವಾಗಿ ಪುನಃ ಹೊಳೆಬಾಗಿಲಿಗೆ ಹೋಗಿ ವಾಪಸ್ಸು ಹೊಸನಗರಕ್ಕೆ ಬರುತ್ತಿರುವುದು ಕಂಡು ಬರುತ್ತಿದೆ.

ಭಕ್ತಾಧಿಗಳಿಗೆ ದಾರಿ ತಪ್ಪಿಸುತ್ತಿರುವುದು ಈ ಗೂಗಲ್ ಮ್ಯಾಪ್ ಆಗಿರುವುದರಿಂದ ತಕ್ಷಣ ಗೂಗಲ್ ಮ್ಯಾಪ್ ಮಾರ್ಗ ರದ್ದುಪಡಿಸಿ ಸಿಗಂದೂರಿಗೆ ಬರುವ ಭಕ್ತಾಧಿಗಳಿಗೆ ಹೊಸನಗರದಿಂದ ಗೂಗಲ್ ಮ್ಯಾಪ್ ಅಳವಡಿಸಬೇಕೆಂದು ಕೇಳಿಕೊಂಡರು.

Leave A Reply

Your email address will not be published.

error: Content is protected !!