ಗೃಹ ಮಂತ್ರಿ ರಾಜಿನಾಮೆ ನೀಡಬೇಕೆಂದು ಹೇಳುವ ನೈತಿಕಥೆ ಬಿಜೆಪಿ ನಾಯಕರಿಗಿಲ್ಲ

0 150

ಶಿವಮೊಗ್ಗ: ಗೃಹ ಮಂತ್ರಿರಾಜಿನಾಮೆ ನೀಡಬೇಕೆಂದು ಹೇಳುವ ನೈತಿಕಥೆ ಬಿ.ಜೆ.ಪಿ. ನಾಯಕರಿಗಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ವೈ.ಬಿ.ಚಂದ್ರಕಾಂತ್ ಹೇಳಿದ್ದಾರೆ.


ಶಿವಮೊಗ್ಗ ನಗರದ ರಾಗಿಗುಡ್ಡದಲ್ಲಿ ಈದ್‌ಮಿಲಾದ್ ಹಬ್ಬದ ಸಂದರ್ಭದಲ್ಲಿ ನಡೆದಿರುವ ಅಹಿತಕರ ಘಟನೆ ದುರಾದೃಷ್ಷಕರವಾದುದ್ದು, ಇಂತಹ ಘಟನೆಗಳನ್ನು ಸರ್ವ ಜನಾಂಗಗಳನ್ನು ಸಮಾನವಾಗಿ ಕಾಣುವ ಕಾಂಗ್ರೆಸ್ ಪಕ್ಷವು ತೀವ್ರವಾಗಿ ಖಂಡಿಸುತ್ತದೆ ಎಂದಿದ್ದಾರೆ.


ನಗರದಲ್ಲಿ ಈ ಬಾರಿ ನಡೆದ ಗಣೇಶೋತ್ಸವ ಮತ್ತು ಈದ್‌ಮಿಲಾದ್ ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಜಿಲ್ಲಾಡಳಿತ ಮತ್ತು ಜಿಲ್ಲಾ ಪೋಲೀಸ್ ಇಲಾಖೆಗಳಿಗೆ ರಾಜ್ಯ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರು ಸೂಚಿಸಿದ್ದರಿಂದ ಎರಡೂ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಕಳೆದ ಒಂದು ತಿಂಗಳಿಗೂ ಮೊದಲೇ ಸರ್ವ ಜನಾಂಗಗಳ ಮುಖಂಡರ ಮತ್ತು ಸಾರ್ವಜನಿಕರ ಸಭೆಗಳನ್ನು ಏರ್ಪಡಿಸಿ ತಿಳುವಳಿಕೆಯನ್ನು ನೀಡಲಾಗಿತ್ತು.

ಗಣೇಶೋತ್ಸವ ಮೆರವಣಿಗೆಯ ಸಂದರ್ಭದಲ್ಲಿ ಒಂದೇ ಒಂದು ಸಣ್ಣ ಘಟನೆಯೂ ನಡೆಯದಂತೆ ನೋಡಿಕೊಂಡ ಕೀರ್ತಿಎರಡೂ ಇಲಾಖೆಗಳಿಗೆ ಸಲ್ಲಬೇಕೆಂದು ಅವರು ಹೇಳಿದ್ದಾರೆ.

Leave A Reply

Your email address will not be published.

error: Content is protected !!