ಗ್ರಾಮಸ್ಥರಿಂದ ಬೇಳೂರಿಗೆ ಸನ್ಮಾನ | ಸರಳ ವ್ಯಕ್ತಿತ್ವದ ಶಾಸಕರನ್ನು ಪಡೆದಿರುವುದು ನಮ್ಮ ಪೂರ್ವಜನ್ಮದ ಪುಣ್ಯ ; ಚಂದ್ರಪ್ಪ

0 1,189

ಹೊಸನಗರ: ಕಳೆದ ಹತ್ತು ವರ್ಷಗಳ ಹಿಂದೆ ಶಾಸಕರಾಗಿ ಸೇವೆ ಸಲ್ಲಿಸಿ ಈಗ ಪುನಃ ಶಾಸಕರಾಗಿ ಆಯ್ಕೆಯಾಗಿರುವ ಬೇಳೂರು ಗೋಪಾಲಕೃಷ್ಣರವರ ವ್ಯಕ್ತಿತ್ವ ಅವರ ಸರಳ ನಡತೆ ಹಾಗೂ ಬಡವರು, ಶ್ರೀಮಂತರು ಎಂಬ ಭೇದ ತೋರಿಸದೇ ಎಲ್ಲರನ್ನು ಒಂದೇ ಎಂದು ತಿಳಿದು ಮಾತನಾಡಿಸುತ್ತಿರುವ ಗುಣ ಹೊಂದಿರುವ ಬೇಳೂರು ಗೋಪಾಲಕೃಷ್ಣರವರು ಮತ್ತೆ ಶಾಸಕರಾಗಿ ಆಯ್ಕೆಯಾಗಿರುವುದು ನಮ್ಮ ಪೂರ್ವಜನ್ಮದ ಪುಣ್ಯ ಎಂದು ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷರಾದ ಚಂದ್ರಪ್ಪನವರು ಹೇಳಿದರು.

ತಾಲ್ಲೂಕಿನ ಪುಣಜೆ ಗ್ರಾಮದಲ್ಲಿ ಗ್ರಾಮಸ್ಥರೊಂದಿಗೆ ನೂತನ ಶಾಸಕರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದ್ದು ಈ ಸಂದರ್ಭದಲ್ಲಿ ಮಾತನಾಡಿದರು.


ಈ ಸನ್ಮಾನ ಸಮಾರಂಭದಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಚಂದ್ರಮೌಳಿ ಗೌಡ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಚಿದಂಬರ, ಪಟ್ಟಣ ಪಂಚಾಯಿತಿ ಸದಸ್ಯ ಅಶ್ವಿನಿಕುಮಾರ್ ಹಾಗೂ ಗ್ರಾಮದ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರು, ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!