ಗ್ರಾಮೀಣ ಭಾಗದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಆಗಬಾರದು ಪಿಡಿಓಗಳು ಇದರ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ; ಬಿವೈವಿ

0 212

ಶಿಕಾರಿಪುರ: ಗ್ರಾಮೀಣ ಭಾಗದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಆಗಬಾರದು ಪಿಡಿಓಗಳು ಇದರ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಶಾಸಕ ಬಿ.ವೈ. ವಿಜಯೇಂದ್ರ ಹೇಳಿದರು.

ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ರಾಜ್ಯ ಸರ್ಕಾರದ ಕನಕ ಜಯಂತಿಯ ರಜೆಯಲ್ಲೂ ಗುರುವಾರ ಸಂಜೆ ಕುಡಿಯುವ ನೀರಿನ ಸಮಸ್ಯೆ ಮತ್ತು ಬರ ನಿರ್ವಹಣೆ ಕುರಿತು ನಡೆದ ತಾಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈತರು  ಎರಡು – ಮೂರು ಬಾರಿ ಬಿತ್ತನೆ ಮಾಡಿ ಕೈಸುಟ್ಟು ಕೊಂಡಿದ್ದಾರೆ. ಮತ್ತೆ ಅವರಿಗೆ ಸಮಸ್ಯೆಗಳು ಆಗಬಾರದು. ಅಂಜನಾಪುರ ಮತ್ತು ಅಂಬಲಿಗೋಳ ಜಲಾಶಯದ ಅಚ್ಚು ಕಟ್ಟು ರೈತರುಗಳು ಈ ಬಾರಿ ಬೇಸಿಗೆ ಭತ್ತದ ಬೆಳೆಯನ್ನು ಬೆಳೆಯಬಾರದು ಏಕೆಂದರೆ ಜಲಾಶಯದಲ್ಲಿ ಕುಡಿಯುವ ನೀರಿಗೆ ಮಾತ್ರ ನೀರು ಲಭ್ಯವಿದ್ದು ಭತ್ತದ ಬೆಳೆಗೆ ಪೂರೈಸಲು ನೀರು ಸಾಕಾಗುವುದಿಲ್ಲ ಆದಕಾರಣ ಕೃಷಿ ಇಲಾಖೆಯ ಸಲಹೆಯಂತೆ ಉದ್ದು ಹೆಸರು ಹುರುಳಿ ಶೇಂಗಾ ಮುಂತಾದ ದ್ವಿದಳ ಧಾನ್ಯಕ್ಕೆ ಸಂಬಂಧದ ಬೆಳೆಗಳನ್ನು ಬೆಳೆದುಕೊಳ್ಳಬೇಕಲ್ವದೇ, ಈ ಕುರಿತು ಕೃಷಿ ಇಲಾಖೆ ಹಾಗೂ ತಾಲ್ಲೂಕು ಆಡಳಿತ ಸರಿಯಾದ ಮಾಹಿತಿಯನ್ನು ಕರಪತ್ರಗಳನ್ನು ಹೊರಡಿಸುವುದರ ಮೂಲಕ ರೈತರಿಗೆ ಯಾವ ಬೆಳೆ ಬೆಳೆಯಬೇಕು ಎಂದು ಮುನ್ನೆಚ್ಚರಿಕೆ ಕ್ರಮವನ್ನು ವಹಿಸಿ ಮಾಹಿತಿ ನೀಡಬೇಕಲ್ವದೇ, ಬಡ ಕಾರ್ಮಿಕರುಗಳು ಗುಳೇ ಹೋಗುವುದನ್ನು ತಡೆಗಟ್ಟಬೇಕು. ಎನ್.ಆರ್.ಐ.ಇ.ಜಿ ಯೋಜನೆ ಅಡಿಯಲ್ಲಿ ಅವರಿಗೆ ಉದ್ಯೋಗವನ್ನು ಕಲ್ಪಿಸಿ ತಾಲ್ಲೂಕಿನಿಂದ ಗುಳೇ ಹೋಗುವ ಜನತೆಯನ್ನು ತಡೆಗಟ್ಟಿ ಇದ್ದ ಗ್ರಾಮದಲ್ಲಿಗೆ ಉದ್ಯೋಗ ಸೃಷ್ಟಿ ಮಾಡಬೇಕು ಎಂದು ಸೂಚನೆ ನೀಡಿದರು.

ಬರಗಾಲದ ತುರ್ತು ಸಂದರ್ಭ ಇದಾಗಿದ್ದು ನಾನು ರಾಜ್ಯ ಪ್ರವಾಸದಲ್ಲಿ ಇದ್ದರೂ ಯಾವುದೇ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಏನೇ ಸಮಸ್ಯೆಗಳು ಉಂಟಾದಲ್ಲಿ ತಕ್ಷಣ ನನಗೆ ದೂರವಾಣಿ ಮೂಲಕ ಸಂಪರ್ಕ ಮಾಡಬಹುದು  ಸಂಪರ್ಕಿಸಲು ಸಾಧ್ಯವಾಗದಿದ್ದರೆ ಮೆಸೇಜ್ ಮಾಡಿ ಸಮಸ್ಯೆಯನ್ನು ತಿಳಿಸಿದರೆ ಕೂಡಲೇ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಪಟ್ಟಣದಲ್ಲಿ 2024 ರ ಜೂನ್ ವರೆಗೂ ಕುಡಿಯುವ ನೀರಿನ ಸಮಸ್ಯೆ ಉಂಟಾಗದು ಏಕೆಂದರೆ ಅಂಜನಾಪುರ ಜಲಾಶಯದಲ್ಲಿ ಈಗ ಸಾಕಷ್ಟು ನೀರು ಸಂಗ್ರಹಣೆ ಇದೆಯೆಂದು ಪುರಸಭಾ ಮುಖ್ಯ ಅಧಿಕಾರಿ ಭರತ್ ಮಾಹಿತಿ ನೀಡಿದರು.


ತಾಲೂಕು ಕೃಷಿ ಅಧಿಕಾರಿ ಕಿರಣ್ ಕುಮಾರ್  ಮಾಹಿತಿ ನೀಡಿ ಮಳೆ  ಆಶ್ರಿತ ಪ್ರದೇಶದಲ್ಲಿ  ಮೆಕ್ಕೆಜೋಳವನ್ನು 16,000 ಹೆಕ್ಟರಲ್ಲಿ ಬೆಳೆಯಲಾಗಿದ್ದು ಇದರಲ್ಲಿ 11,863 ಜನರಿಗೆ 4.5 ಕೋಟಿ ಮಧ್ಯಂತರ ಬೆಳೆವಿಮೆ ನೇರವಾಗಿ ರೈತರ ಖಾತೆಗೆ ಜಮಾ ಆಗಿದೆ ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಮಲ್ಲೇಶಪ್ಪ ಬೀರಪ್ಪ ಪೂಜಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಸೇರಿದಂತೆ ವಿವಿಧ ಇಲಾಖೆಗಳ ಆಡಳಿತ ಅಧಿಕಾರಿಗಳು ಹಾಜರಿದ್ದರು.

Leave A Reply

Your email address will not be published.

error: Content is protected !!