ಗ್ರಾ.ಪಂ.ಅಧ್ಯಕ್ಷೆ ಮನೆಯ ಸುತ್ತಮುತ್ತ ವಾಮಾಚಾರ !

0 1,586

ಹೊಸನಗರ: ತಾಲೂಕಿನ ಪುರಪ್ಪೆಮನೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಜಾತ ದಿನೇಶ ಅವರ ಮನೆಯ (Home) ಸುತ್ತಮುತ್ತ ಅನಾಮಿಕರು ಭಾರೀ ವಾಮಾಚಾರ (Witchcraft) ನಡೆಸಿರುವ ಘಟನೆ ನಡೆದಿದೆ.

ಮಂಗಳವಾರ ತಡರಾತ್ರಿ ಈ ಘಟನೆ ಸಂಭವಿಸಿದ್ದ ಬುಧವಾರ ಬೆಳಗ್ಗೆ ಮನೆ ಮಾಲೀಕರ ಗಮನಕ್ಕೆ ಬಂದಿದೆ.

ಗ್ರಾಮದಲ್ಲಿ ಅಕ್ರಮ ಮರಳು (Sand) ಸಾಗಾಣಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಶಾಲಾ ಮಕ್ಕಳಿಗೆ ಇದರಿಂದ ತೊಂದರೆ ಆಗುಬಹುದು ಎಂದು ಮರಳು ಸಾಗಾಣಿಕೆ ವಾಹನಗಳನ್ನು ಈ ಕಡೆ ಮುಖ ಮಾಡದಂತೆ ಅಕ್ರೋಶ ವ್ಯಕ್ತಪಡಿಸಿದ್ದ ಅಧ್ಯಕ್ಷೆ ಕ್ರಮವನ್ನು ಖಂಡಿಸಿ, ಯಾರೋ ಅಪರಿಚಿತ ಅಕ್ರಮ ಮರಳು ಸಾಗಾಟದಾರರು ಈ ಕೃತ್ಯ ನಡೆಸಲು ಮುಂದಾಗಿರಬೇಕೆಂದು ಸ್ಥಳೀಯರು ತಿಳಿಸಿದ್ದಾರೆ.

ಮನೆ ಮಾಲೀಕ ದಿನೇಶ್ ನೀಡಿದ ದೂರಿನ ಮೇರೆಗೆ ಸ್ಥಳಕ್ಕೆ ಹೊಸನಗರ ಪೊಲೀಸರು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Leave A Reply

Your email address will not be published.

error: Content is protected !!