ಚಂದ್ರಗುತ್ತಿ ; ದಸರಾ ಸಾಂಸ್ಕೃತಿಕ ಉತ್ಸವ ಪೂರ್ವಭಾವಿ ಸಭೆ

0 123

ಸೊರಬ : ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿ ದಸರಾ ಉತ್ಸವ ಆಚರಣಾ ಸಮಿತಿ (ರಿ) ಚಂದ್ರಗುತ್ತಿ ಇವರ ನೇತೃತ್ವದಲ್ಲಿ ನಡೆಯುವ 2023ನೇ ಸಾಲಿನ ದಸರಾ ಸಾಂಸ್ಕೃತಿಕ ಉತ್ಸವದ ಪೂರ್ವಭಾವಿ ಸಭೆ ಶ್ರೀ ರೇಣುಕಾಂಬ ದೇವಿ ಕಲ್ಯಾಣ ಮಂಟಪದಲ್ಲಿ ನಡೆಸಲಾಯಿತು.

ಪೂರ್ವಭಾವಿ ಸಭೆ ಉದ್ದೇಶಿಸಿ ಶ್ರೀ ರೇಣುಕಾಂಬ ದಸರಾ ಉತ್ಸವ ಆಚರಣಾ ಸಮಿತಿ ಅಧ್ಯಕ್ಷ ಆರ್ ಶ್ರೀಧರ್ ಹುಲ್ತಿಕೊಪ್ಪ ಮಾತನಾಡಿ, 2016 ರಿಂದ 2022 ರವರೆಗೆ ಸತತವಾಗಿ ಏಳು ವರ್ಷಗಳಿಂದ ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಗ್ರಾಮಸ್ಥರ ಸಹಕಾರದಿಂದ ದಸರಾ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಆಚರಿಸುತ್ತಾ ಬರುತ್ತಿದ್ದೇವೆ. 8ನೇ ವರ್ಷದ ಶ್ರೀ ರೇಣುಕಾಂಬ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅತ್ಯಂತ ವೈಭವದಿಂದ ಆಚರಿಸಲು ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದರು.

ಪ್ರತಿ ವರ್ಷ ಸಹಕಾರ ನೀಡುವ ಭಕ್ತಾದಿಗಳು ಹಾಗೂ ಗ್ರಾಮಸ್ಥರು ಈ ವರ್ಷವೂ ಕೂಡ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದು ವಿನಂತಿಸಿದರು.

ತಾಪಂ ಮಾಜಿ ಅಧ್ಯಕ್ಷ ಹೆಚ್ ಗಣಪತಿ ಹುಲ್ತಿಕೊಪ್ಪ ಮಾತನಾಡಿ, ಶ್ರೀ ರೇಣುಕಾಂಬ ದೇವಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮ ಆಚರಣೆಗೆ ನಮ್ಮೆಲ್ಲರ ಸಹಕಾರದ ಜೊತೆಗೆ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪನವರ ಸಹಕಾರವಿದೆ ಎಂದರು.

ಸಭೆಯಲ್ಲಿ 9 ದಿನಗಳ ಕಾಲ ಪ್ರತಿನಿತ್ಯ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶ್ರೀ ರೇಣುಕಾಂಬ ದೇವಿ ಕಲ್ಯಾಣ ಮಂಟಪದ ಆವರಣದಲ್ಲಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಗ್ರಾಪಂ ಉಪಾಧ್ಯಕ್ಷ ಎಂ.ಬಿ ರೇಣುಕಾ ಪ್ರಸಾದ್ ಸದಸ್ಯ ರತ್ನಾಕರ್ ಎಂ.ಪಿ, ಮಾಜಿ ತಾಪಂ ಸದಸ್ಯ ಎನ್.ಜಿ ನಾಗರಾಜ್, ಪ್ರಮುಖರಾದ ಮಂಜುನಾಥ ಶೆಣೈ, ಜಯಶೀಲ್ ಗೌಡ್ರು, ರಘು ಸ್ವಾದಿ, ಸುಧಾಕರ್ ನಾಯ್ಕ್, ಗಣೇಶ್ ಮರಡಿ, ಪ್ರಶಾಂತ್ ನಾಯ್ಕ್, ಪ್ರಜ್ವಲ್ ಚಂದ್ರಗುತ್ತಿ, ವಸಂತ್ ಶೇಟ್, ಚಂದ್ರಪ್ಪ ಕತವಾಯಿ, ಸೇರಿದಂತೆ ಚಂದ್ರಗುತ್ತಿ ಸುತ್ತ ಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

Leave A Reply

Your email address will not be published.

error: Content is protected !!