ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ ಕಾರು !

0 791

ತೀರ್ಥಹಳ್ಳಿ : ಚಾಲಕನ (Driver) ನಿಯಂತ್ರಣ ತಪ್ಪಿ ಕಾರೊಂದು (Car) ಮರಕ್ಕೆ ಡಿಕ್ಕಿ (Accident) ಹೊಡೆದ ಘಟನೆ ತಾಲೂಕಿನ ಕುಪ್ಪಳಿ (Kuppali) ಸಮೀಪದಲ್ಲಿ ನಡೆದಿದೆ.

ಕೊಪ್ಪ (Koppa) ತಾಲೂಕಿನ ಸಿದ್ದರಮಠದ (Siddaramutt) ಮೂಲದ ಚಾಲಕ ತನ್ನ ಹುಂಡೈ ಐ 20 (Hyundai i20) ಕಾರಿನಲ್ಲಿ ತೀರ್ಥಹಳ್ಳಿ ಕಡೆ ಬರುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಕಾರು ಚರಂಡಿಗೆ ಇಳಿದಿದೆ. ಅಪಘಾತಗೊಂಡ ಕಾರನ್ನು ರಿವರ್ಸ್ ತೆಗೆಯುವ ಸಂದರ್ಭದಲ್ಲಿ ಹಿಂಬದಿಯಿದ್ದ ಮರಕ್ಕೆ ಕಾರು ಗುದ್ದಿ ಮತ್ತೆ ಚರಂಡಿಗೆ ಇಳಿದಿದೆ. ಈ ಘಟನೆಯಲ್ಲಿ ಕಾರಿನ ಹಿಂಭಾಗ ಸಂಪೂರ್ಣ ಜಖಂಗೊಂಡಿದೆ.

ಚಾಲಕ ಮಾತ್ರ ಕಾರಿನಲ್ಲಿದ್ದು ಈತನಿಗೆ ಸಣ್ಣ-ಪುಟ್ಟ ಗಾಯವಾಗಿದ್ದು ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

Leave A Reply

Your email address will not be published.

error: Content is protected !!