ಚೆಸ್ ; ವಿಭಾಗ ಮಟ್ಟಕ್ಕೆ ಆಯ್ಕೆಯಾದ ದೀಕ್ಷಿತ್

0 198

ತೀರ್ಥಹಳ್ಳಿ: ಇತ್ತೀಚೆಗೆ ಬನಸಿರಿ ವಿದ್ಯಾಸಂಸ್ಥೆ, ಶಿಕಾರಿಪುರದಲ್ಲಿ ನಡೆದ 14 ವರ್ಷದ ಒಳಗಿನ ಬಾಲಕ- ಬಾಲಕಿಯರ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟದಲ್ಲಿ ತೀರ್ಥಹಳ್ಳಿ ತಾಲೂಕಿನ ಮಾಳೂರು ಕುವೆಂಪು ಮಾದರಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಕು. ದೀಕ್ಷಿತ್ ಇವರು ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಬೆಂಗಳೂರು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಆಯ್ಕೆಯಾದ ಈ ವಿದ್ಯಾರ್ಥಿ ಬೆಂಗಳೂರು ವಿಭಾಗೀಯ ಮಟ್ಟದಲ್ಲೂ ಉತ್ತಮ ಆಟವಾಡಿ ಜಿಲ್ಲೆಗೆ ಹಾಗೂ ತೀರ್ಥಹಳ್ಳಿ ತಾಲೂಕಿಗೆ ಕೀರ್ತಿ ತರಲಿ ಎಂದು ಶಾಲಾ ಮುಖ್ಯ ಶಿಕ್ಷಕರು, ಎಸ್.ಡಿ.ಎಂ. ಸಿ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಹಾಗೂ ಶಾಲಾ ಸಹ ಶಿಕ್ಷಕರ ವೃಂದ ಇವರಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದಾರೆ.

Leave A Reply

Your email address will not be published.

error: Content is protected !!