ಜೆಜೆಎಂ ಯೋಜನೆ ಪೈಪ್‌ಲೈನ್ ಕಾಮಗಾರಿ ಹೊಂಡ ಮುಚ್ಚದೇ ನಿರ್ಲಕ್ಷ್ಯ ; ಆಕ್ರೋಶ

0 320

ರಿಪ್ಪನ್‌ಪೇಟೆ: ಇಲ್ಲಿನ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಿದ್ಯಾನಗರ ರಸ್ತೆಯಿಂದ ಕೆರೆಹಳ್ಳಿ ಗ್ರಾಮಕ್ಕೆ ಜಲಜೀವನ್ ಮಿಷನ್ ಯೋಜನೆಯಡಿ ನೀರು ಸರಬರಾಜು ಮಾಡುವ ಪೈಪ್‌ಲೈನ್ ಕಾಮಗಾರಿ ಮಾಡುತ್ತಿದ್ದು ಪೈಪ್‌ಲೈನ್ ಅಳವಡಿಸಿದ ಮೇಲೆ ಹೊಂಡವನ್ನು ಸರಿಯಾಗಿ ಮುಚ್ಚದೇ ಇರುವುದರಿಂದ ಸಾರ್ವಜನಿಕರು ರಾತ್ರಿ ವೇಳೆ ಹೊಂಡಕೆ ಬಿದ್ದ ಘಟನೆಗಳು ನಡೆದಿದ್ದರೂ ಕೂಡಾ ಸಂಬಂಧಿಸಿದವರು ನಿರ್ಲಕ್ಷ್ಯ ವಹಿಸಿದ್ದಾರೆಂದು ವಿದ್ಯಾನಗರ ವಿವಾಸಿ ರಾಘವೇಂದ್ರ ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರದ ಜನಪರ ಯೋಜನೆಗಳಲ್ಲೊಂದಾಗಿರುವ ಜಲಜೀವನ್ ಯೋಜನೆಗೆ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನಾ ಸಮಾರಂಭದ ಸಂದರ್ಭದಲ್ಲಿ ಜಲಜೀವನ್ ಯೋಜನೆಗೂ ಚಾಲನೆ ನೀಡಿದ್ದು ಈ ಯೋಜನೆಯ ಗ್ರಾಮೀಣ ಪ್ರದೇಶದ ಒಂಟಿ ಮನೆಯ ಫಲಾನುಭವಿಗೂ ತಲುಪುವಂತಾಗಬೇಕು ಎಂಬ ಸದುದ್ದೇಶದಿಂದಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಈ ಯೋಜನೆಯು ಅನುಷ್ಠಾನದಲ್ಲಿ ಅಧಿಕಾರಿಗಳು ಬೇಜವಾಬ್ದಾರಿ ವಹಿಸಿದ್ದಾರೆಂದು ರಾಘವೇಂದ್ರ ಆರೋಪಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಜಿಯವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು.

ಈಗಾಗಲೇ ಗವಟೂರು ಗ್ರಾಮದಲ್ಲಿ ಜಲಜೀವನ ಯೋಜನೆಯ ಫಲಾನುಭವಿಯೊಬ್ಬರು ಗ್ರಾಮ ಪಂಚಾಯ್ತಿ ಜಮಾಬಂಧಿ ಉಸ್ತುವಾರಿ ಅಧಿಕಾರಿಯಾಗಿ ಬಂದಿದ್ದ ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳಿಗೆ ಭಾವಚಿತ್ರದೊಂದಿಗೆ ಪೈಪ್‌ನಲ್ಲಿ ಬರುತ್ತಿರುವ ನೀರಿನ ಪ್ರಮಾಣದ ಬಗ್ಗೆ ದೂರು ನೀಡುವುದರೊಂದಿಗೆ ಈ ಯೋಜನೆಯು ಅವೈಜ್ಞಾನಿಕವಾಗಿಯಿದೆ
ಎಂದು ಆರೋಪಿಸಿದಾಗ ತಕ್ಷಣ ಸ್ಪಂದಿಸಿದ ಜಿಲ್ಲಾ ಪಂಚಾಯ್ತಿ ಸಿಓ ಸ್ಥಳದಲ್ಲಿದ್ದ ಯೋಜನೆಯ ಇಂಜಿನಿಯರ್‌ರವರಿಗೆ ಖಡಕ್ ಎಚ್ಚರಿಕೆ ನೀಡಿ ದೂರು ಬರದಂತೆ ಕ್ರಮ ವಹಿಸುವಂತೆ ಸೂಚನೆ ನೀಡಲಾದರೂ ಕೂಡಾ ವಿದ್ಯಾನಗರದಲ್ಲಿ ಕಾಮಗಾರಿ ನಿರ್ಹಿಸುತ್ತಿರುವ ಗುತ್ತಿಗೆದಾರ ದರ್ಪದಿಂದ ಸಾರ್ವಜನಿಕರ ಮನವಿಗೆ ಸ್ಪಂದಿಸದೇ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಕಾಮಗಾರಿ ಮಾಡುತ್ತಿರುವ ಜಾಗದಲ್ಲಿ ಪ್ರೌಢಶಾಲೆ ಕಾಲೇಜ್ ವಿದ್ಯಾರ್ಥಿಗಳು ಹಾಗೂ ಅಂಗನಾಡಿ ಮಕ್ಕಳು ಓಡಾಡುತ್ತಿದ್ದು ಪೈಪ್‌ಲೈನ್ ತೆಗೆಯಲಾಗಿರುವ ಹೊಂಡಕ್ಕೆ ಆಕಸ್ಮಿಕ ಜಾರಿಬಿದ್ದರೆ ಯಾರು ಹೊಣೆ ಇಂದ ಚಿಂತೆ ಕಾಡುವಂತಾಗಿದೆ.

Leave A Reply

Your email address will not be published.

error: Content is protected !!